For Quick Alerts
  ALLOW NOTIFICATIONS  
  For Daily Alerts

  ಮಗಳಿಗಾಗಿ ಹಠಾತ್ತನೆ ಬೆಂಗಳೂರಿನ ಚರ್ಚ್‌ಗೆ ಬಂದ ರಜನೀಕಾಂತ್

  |

  ಕೋವಿಡ್ ಬಳಿಕ 'ಅಣ್ಣಾತೆ' ಚಿತ್ರೀಕರಣ ಸೆಟ್ ಬಿಟ್ಟು ಇನ್ನೆಲ್ಲೂ ಕಾಣಿಸಿಕೊಳ್ಳದಿದ್ದ ರಜನೀಕಾಂತ್ ಹಠಾತ್ತನೆ ಬೆಂಗಳೂರಿಗೆ ಭೇಟಿ ನೀಡಿದ್ದಾರೆ. ಬೆಂಗಳೂರಿನ ಚರ್ಚ್‌ ಒಂದಕ್ಕೆ ನಿನ್ನೆ ಭೇಟಿ ನೀಡಿದ್ದ ರಜನೀಕಾಂತ್ ಪ್ರಾರ್ಥನೆ ಸಲ್ಲಿಸಿ ಮರಳಿದ್ದಾರೆ.

  ಮಗಳ ಆರೋಗ್ಯ ಚೇತರಿಕೆ ಆಗಬೇಕೆಂದು ರಜನೀಕಾಂತ್ ಹರಕೆ ಹೊತ್ತಿದ್ದರಂತೆ ಹಾಗಾಗಿ ಬೆಂಗಳೂರಿನ ವಿವೇಕನಗರದಲ್ಲಿರುವ ಇನ್‌ಫೆಂಟ್ರಿ ಚರ್ಚ್‌ಗೆ ತಲೈವಾ ರಜನೀಕಾಂತ್ ನಿನ್ನೆ ರಾತ್ರಿ ಭೇಟಿ ನೀಡಿದ್ದರು.

  ಮಗಳ ಆರೋಗ್ಯ ಕೆಟ್ಟಾಗ ರಜನೀಕಾಂತ್ ಇದೇ ಚರ್ಚ್‌ನಲ್ಲಿ ಪ್ರಾರ್ಥನೆ ಮಾಡಿದ್ದರಂತೆ. ಅಂತೆಯೇ ಈಗ ಹರಕೆ ತೀರಿಸಲೆಂದು ರಜನೀಕಾಂತ್ ಚರ್ಚ್‌ಗೆ ಆಗಮಿಸಿದ್ದರು. ಸಾಮಾನ್ಯರಂತೆ ರಜನೀಕಾಂತ್ ಚರ್ಚ್‌ಗೆ ಆಗಮಿಸಿದ್ದು ಕಂಡು ಅಲ್ಲಿದ್ದವರೆಲ್ಲ ಆಶ್ಚರ್ಯಚಕಿತರಾಗಿದ್ದಾರೆ.

  ನಿನ್ನೆ (ಅಕ್ಟೋಬರ್ 11) ರ ರಾತ್ರಿ 7:30 ರ ಸಮಯಕ್ಕೆ ರಜನೀಕಾಂತ್‌ ಚರ್ಚ್‌ಗೆ ಆಗಮಿಸಿದ್ದರು. ರಜನೀಕಾಂತ್ ಚರ್ಚ್‌ಗೆ ಆಗಮಿಸಿದ ದೃಶ್ಯವನ್ನು ಹಲವರು ಮೊಬೈಲ್‌ಗಳಲ್ಲಿ ಚಿತ್ರೀಕರಿಸಿದ್ದು, ವಿಡಿಯೋಗಳು, ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ.

  ಚರ್ಚ್‌ ಭೇಟಿ ನಂತರ ರಜನೀಕಾಂತ್ ತಮ್ಮ ಆತ್ಮೀಯ ಗೆಳೆಯ ಕಡ್ಡಿ ರಾಮಚಂದ್ರ ರಾವ್ ಮನೆಗೆ ಭೇಟಿ ನೀಡಿ ಕುಟುಂಬದವರೊಡನೆ ಮಾತನಾಡಿ ವಾಪಸ್ಸಾಗಿದ್ದಾರೆ. ರಜನೀಕಾಂತ್‌ರ ಆಪ್ತ ಗೆಳೆಯ ರಾಮಚಂದ್ರ ರಾವ್ ಕಳೆದ ತಿಂಗಳಷ್ಟೆ ಕೋವಿಡ್‌ನಿಂದ ಮೃತಪಟ್ಟಿದ್ದರು. ಆದರೆ ರಜನೀಕಾಂತ್‌ಗೆ ಸಹ ಅದೇ ಸಮಯದಲ್ಲಿ ಆರೋಗ್ಯ ಸರಿಯಿಲ್ಲದ ಕಾರಣ ಅವರು ಅಂತಿಮ ದರ್ಶನ ಪಡೆಯಲು ಬರಲಾಗಿರಲಿಲ್ಲ. ಈಗ ರಾಮಚಂದ್ರ ರಾವ್ ಮನೆಗೆ ಹೋಗಿ ಕುಟುಂಬಸ್ಥರನ್ನು ಭೇಟಿಯಾಗಿದ್ದಾರೆ.

  ಕಡ್ಡಿ ರಾಮಚಂದ್ರ ರಾವ್ ಹಾಗೂ ರಜನೀಕಾಂತ್ ಹಲವು ದಶಕಗಳಿಂದ ಗೆಳೆಯರಾಗಿದ್ದರು. ಪತ್ರಿಕೆಯೊಂದರಲ್ಲಿ ಪ್ರೂಫ್ ರೀಡರ್ ಆಗಿದ್ದ ರಾಮಚಂದ್ರ ರಾವ್ ಆಗಸ್ಟ್ ತಿಂಗಳಲ್ಲಿ ನಿಧನ ಹೊಂದಿದರು. ರಜನೀಕಾಂತ್ ಹಾಗೂ ರಾಮಚಂದ್ರ ರಾವ್ ಒಂದೇ ರೂಮಿನಲ್ಲಿ ಕೆಲ ಕಾಲ ವಾಸವಿದ್ದರು.

  ನಟ ರಜನೀಕಾಂತ್ ಹೀಗೆ ಹಠಾತ್ತನೆ ಬೆಂಗಳೂರಿಗೆ ಬರುವುದು ಹೊಸದೇನೂ ಅಲ್ಲ. ಬೆಂಗಳೂರಿನಲ್ಲಿಯೇ ಬಾಲ್ಯ, ಯೌವ್ವನ ಕಳೆದ ರಜನೀಕಾಂತ್‌ಗೆ ಇಲ್ಲಿ ಹಲವಾರು ಮಂದಿ ಸ್ನೇಹಿತರಿದ್ದಾರೆ. ಹಾಗಾಗಿ ಆಗಾಗ್ಗೆ ಯಾರಿಗೂ ತಿಳಿಯದಂತೆ ಬೆಂಗಳೂರಿಗೆ ಬಂದು ಗೆಳೆಯರನ್ನು ಭೇಟಿಯಾಗಿ ಹೋಗುತ್ತಿರುತ್ತಾರೆ. ಬೆಂಗಳೂರಿಗೆ ಬಂದಾಗ ಇಲ್ಲಿನ ಕೆಲವು ಮೆಚ್ಚಿನ ಹೋಟೆಲ್‌ಗಳ ತಿನಿಸನ್ನು ತರಿಸಿಕೊಂಡು ತಿನ್ನುತ್ತಾರೆ. ತಾವು ಓಡಾಡಿದ ಜಾಗಗಳಲ್ಲಿ ಓಡಾಡಿ ಹಳೆಯ ನೆನಪುಗಳಿಗೆ ಜಾರುತ್ತಾರೆ.

  ರಜನೀಕಾಂತ್ ನಟಿಸಿರುವ 'ಅಣ್ಣಾತೆ' ಸಿನಿಮಾ ಬಿಡುಗಡೆಗೆ ತಯಾರಾಗಿದೆ. ಹಲವು ಅಡೆ-ತಡೆಗಳ ಬಳಿಕ ಸಿನಿಮಾದ ಚಿತ್ರೀಕರಣ ಪೂರ್ಣವಾಗಿದೆ. ಈ ಸಿನಿಮಾದ ಚಿತ್ರೀಕರಣದ ಸಮಯದಲ್ಲಿ ರಜನೀಕಾಂತ್‌ ಆರೋಗ್ಯದಲ್ಲಿ ತೀವ್ರ ವ್ಯತ್ಯಯವಾಗಿತ್ತು. ಅದೇ ಕಾರಣಕ್ಕೆ ಅವರು ರಾಜಕೀಯದಿಂದಲೂ ದೂರ ಉಳಿಯಲು ನಿಶ್ಚಯಿಸಿದರು. ಹಲವು ದಿನಗಳ ವಿಶ್ರಾಂತಿ ಬಳಿಕ ಚಿತ್ರೀಕರಣ ಮುಗಿಸಿ ಇದೀಗ ಕೆಲವೇ ತಿಂಗಳಲ್ಲಿ ಸಿನಿಮಾ ಬಿಡುಗಡೆ ಆಗಲಿದೆ. ಸಿನಿಮಾದ ಎರಡು ಹಾಡು ಈಗಾಗಲೇ ಬಿಡುಗಡೆ ಆಗಿದ್ದು, ಎರಡೂ ಹಾಡುಗಳು ಹಿಟ್ ಆಗಿವೆ.

  English summary
  Actor Rajinikanth visited Bengaluru Viveknagar's church to pray for his daughter's health.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X