»   » ಬಿಡುಗಡೆ ಮುನ್ನವೇ ಸಖತ್ ಡಿಮ್ಯಾಂಡ್ ಗಿಟ್ಟಿಸಿದ 'ರಾಜರಥ'

ಬಿಡುಗಡೆ ಮುನ್ನವೇ ಸಖತ್ ಡಿಮ್ಯಾಂಡ್ ಗಿಟ್ಟಿಸಿದ 'ರಾಜರಥ'

Posted By:
Subscribe to Filmibeat Kannada
ಕನ್ನಡ ಚಿತ್ರರಂಗದಲ್ಲಿ ಡಿಮ್ಯಾಂಡ್ ಹೆಚ್ಚಿಸಿದ ರಾಜರಾಥ ಸಿನಿಮಾ | Filmibeat Kannada

ನಿರೂಪ್ ಬಂಡಾರಿ, ಅವಂತಿಕಾ ಶೆಟ್ಟಿ ಹಾಗೂ ರವಿಶಂಕರ್ ಅಭಿನಯದ ರಾಜರಥ ಸಿನಿಮಾಗೆ ಸಖತ್ ಡಿಮ್ಯಾಂಡ್ ಕ್ರಿಯೆಟ್ ಆಗಿದೆ. ಈಗಾಗಲೇ ರಂಗಿತರಂಗ ಚಿತ್ರದ ಮೂಲಕ ಕನ್ನಡ ಸಿನಿಮಾರಂಗದಲ್ಲಿ ಚಾಪು ಮೂಡಿಸಿರುವ ಬಂಡಾರಿ ಬ್ರದರ್ಸ್ ಹೊಸ ಕತೆಯನ್ನು ಕನ್ನಡ ಚಿತ್ರ ಪ್ರೇಮಿಗಳ ಮುಂದಿಡಲು ತಯಾರಾಗಿದ್ದಾರೆ.

ಸಾಕಷ್ಟು ವಿಶೇಷತೆಗಳಿಂದ ಕೂಡಿರುವ ರಾಜರಥ ಸಿನಿಮಾದ ಪ್ರೀಮಿಯರ್ ಶೋ ಸಾಂಸ್ಕೃತಿಕ ನಗರಿ ಮೈಸೂರು ಹಾಗೂ ಬೆಂಗಳೂರಿನಲ್ಲಿ ನಡೆಯುತ್ತಿದೆ. ಎರಡು ಪ್ರೀಮಿಯರ್ ಶೋ ನ ಎಲ್ಲಾ ಟಿಕೆಟ್ ಗಳು ಮಾರಾಟವಾಗಿದ್ದು, ರಾಜರಥ ಸಿನಿಮಾ ಕರ್ನಾಟಕ, ಆಂಧ್ರ, ತೆಲಂಗಾಣ ಹಾಗೂ ವಿದೇಶದಲ್ಲಿಯೂ ಏಕ ಕಾಲಕ್ಕೆ ಬಿಡುಗಡೆ ಆಗುತ್ತಿದೆ.

ತಮಿಳು ನಟ ಆರ್ಯ ಗೆಟಪ್ ಗೆ ಕಿಚ್ಚ ಸುದೀಪ್ ಸ್ಫೂರ್ತಿ.!

Rajaratha film demand has increased

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಧ್ವನಿ ಹಾಗೂ ಟಾಲಿವುಡ್ ಸ್ಟಾರ್ ನಟ ಆರ್ಯ ರಾಜರಥ ಸಿನಿಮಾದಲ್ಲಿ ಅಭಿನಯಿಸಿರುವುದು ಚಿತ್ರಕ್ಕೆ ಪ್ಲಸ್ ಪಾಯಿಂಟ್. ಈಗಾಗಲೇ ಹಾಡುಗಳು ಮತ್ತು ಟ್ರೇಲರ್ ಗೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿದ್ದು ಸಿನಿಮಾ ಕೂಡ ಅಷ್ಟೇ ಚೆನ್ನಾಗಿರಲಿದೆ ಎನ್ನುವುದು ಪ್ರೇಕ್ಷಕರ ಅಭಿಪ್ರಾಯ.

Rajaratha film demand has increased

ರಾಜರಥ ಸಿನಿಮಾವನ್ನ ಅನೂಪ್ ಬಂಡಾರಿ ನಿರ್ದೇಶನ ಮಾಡುವುದರ ಜೊತೆಯಲ್ಲಿ ಚಿತ್ರಕ್ಕೆ ಮ್ಯೂಸಿಕ್ ಕಂಪೋಸ್ ಮಾಡಿದ್ದಾರೆ. ಅನೂಪ್ ಅವರ ಸ್ನೇಹಿತರಾದ ಅಜಯ್ ರೆಡ್ಡಿ ಮತ್ತು ಸತೀಶ್ ಚಿತ್ರಕ್ಕೆ ಬಂಡವಾಳ ಹಾಕಿದ್ದಾರೆ. ಕನ್ನಡದಲ್ಲಿ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಕಥೆಯನ್ನ ನಿರೂಪಣೆ ಮಾಡಿದರೆ ತೆಲುಗಿನಲ್ಲಿ ರಾಣಾ ದಗ್ಗುಬಾಟಿ ನಿರೂಪಣೆ ಮಾಡಲಿದ್ದಾರೆ.

'ರಾಜರಥ' ಚಾಲೆಂಜ್ ಗೆ ಚಾಲನೆ ನೀಡಿದ 'ರಾಜಕುಮಾರ'

English summary
Kannada Rajaratha film demand has increased, The film's premiere show is taking place in Mysore and Bangalore. Nirup Bundari, Ravishankar and Avantika Shetty are acting in Rajaratha movie.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X