»   » 'ರಾಜರಥ' ಫಸ್ಟ್ ಲುಕ್ ನಲ್ಲಿ ಆರ್ಮುಗ ರವಿಶಂಕರ್ ಸಖತ್ ಮಿಂಚಿಂಗ್

'ರಾಜರಥ' ಫಸ್ಟ್ ಲುಕ್ ನಲ್ಲಿ ಆರ್ಮುಗ ರವಿಶಂಕರ್ ಸಖತ್ ಮಿಂಚಿಂಗ್

Posted By:
Subscribe to Filmibeat Kannada

'ರಂಗಿತರಂಗ' ಸಿನಿಮಾದ ಮೂಲಕ ದೊಡ್ಡ ಯಶಸ್ಸು ಕಂಡಿದ್ದ ಭಂಡಾರಿ ಸಹೋದರರು ಈಗ ಮತ್ತೆ ಮೋಡಿ ಮಾಡುವುದಕ್ಕೆ ಸಜ್ಜಾಗಿದ್ದಾರೆ. ಸದ್ಯ ಇವರ ಬತ್ತಳಿಕೆಯ ಎರಡನೇ ಸಿನಿಮಾ 'ರಾಜರಥ' ಚಿತ್ರದ ಫಸ್ಟ್ ಲುಕ್ ಬಿಡುಗಡೆಯಾಗಿದೆ.

'ರಂಗಿತರಂಗ' ಸಹೋದರರ 'ರಾಜರಥ' ಚಿತ್ರದ ಶೂಟಿಂಗ್ ನಲ್ಲಿ ಅವಘಡ

'ರಾಜರಥ' ಚಿತ್ರದ ಫಸ್ಟ್ ಲುಕ್ ತುಂಬಾ ಹೊಸತನದಿಂದ ಕೂಡಿದೆ. ಸಾಮಾಜಿಕ ಜಾಲತಾಣದಲ್ಲಿ ಚಿತ್ರದ ಪೋಸ್ಟರ್ ಗೆ ದೊಡ್ಡ ಮಟ್ಟದ ಪ್ರತಿಕ್ರಿಯೆ ಸಿಕ್ಕಿದೆ. ಈ ಪೋಸ್ಟರ್ ನಲ್ಲಿ ನಟ ನಿರೂಪ್ ಭಂಡಾರಿ, ನಟಿ ಅವಂತಿಕಾ ಶೆಟ್ಟಿ ಮತ್ತು ನಟ ರವಿಶಂಕರ್ ಕಾಣಿಸಿಕೊಂಡಿದ್ದಾರೆ. ಈ ಮೂವರಲ್ಲಿ ರವಿಶಂಕರ್ ಅವರ ಲುಕ್ ಸಖತ್ ಕೂಲ್ ಆಗಿದೆ. ಈ ಹಿಂದೆ ಎಂದೂ ಕಾಣಿಸಿಕೊಂಡಿರದ ಲುಕ್ ನಲ್ಲಿ ಆರ್ಮುಗ ಮಿಂಚಿದ್ದಾರೆ.

'Rajaratha' kannada movie first look is out.

'ರಂಗಿತರಂಗ' ಚಿತ್ರದಲ್ಲಿ ನಟ ಸಾಯಿಕುಮಾರ್ ಅವರಿಗೆ ಒಂದು ಅಮೋಘ ಪಾತ್ರವನ್ನು ನೀಡಿದ್ದ ಅನೂಪ್ ಭಂಡಾರಿ ಇಲ್ಲಿ ಸಾಯಿಕುಮಾರ್ ಸಹೋದರ ರವಿಶಂಕರ್ ಅವರಿಗೆ ಯಾವ ರೀತಿ ಪಾತ್ರ ನೀಡಿದ್ದಾರೆ ಎನ್ನುವ ಕುತೂಹಲ ಹುಟ್ಟಿದೆ.

ಈ ಚಿತ್ರ ಕನ್ನಡ ಮತ್ತು ತೆಲುಗು ಭಾಷೆಯಲ್ಲಿ ಸಿನಿಮಾದ ನಿರ್ಮಾಣವಾಗಿದ್ದು, ಎರಡು ಭಾಷೆಯ ಫಸ್ಟ್ ಲುಕ್ ಇದೀಗ ಹೊರಬಂದಿದೆ. ಕನ್ನಡದಲ್ಲಿ 'ರಾಜರಥ' ಮತ್ತು ತೆಲುಗಿನಲ್ಲಿ 'ರಾಜರಥಂ' ಹೆಸರಿನಲ್ಲಿ ಸಿನಿಮಾ ತೆರೆಗೆ ಬರಲಿದೆ. ವಿಶೇಷ ಅಂದರೆ ಚಿತ್ರದಲ್ಲಿ ತಮಿಳು ನಟ ಆರ್ಯ ಕೂಡ ಒಂದು ಮುಖ್ಯ ಪಾತ್ರವನ್ನು ಮಾಡಿದ್ದಾರೆ.

English summary
'Rajaratha' kannada movie first look is out.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X