For Quick Alerts
ALLOW NOTIFICATIONS  
For Daily Alerts

  ಕುದುರೆ ಏರಿ ಪ್ರೇಕ್ಷಕರ ಮುಂದೆ ಬರಲಿದ್ದಾರೆ 'ರಾಜವರ್ಧನ'

  By Pavithra
  |

  ರಾಜವರ್ಧನ್ ಕನ್ನಡ ಸಿನಿಮಾರಂಗದಲ್ಲಿ ನಾಯಕನಾಗಲು ಬೇಕಾಗಿರುವ ಪರ್ಫೆಕ್ಟ್ ಹೈಟು, ನೋಡುವುದಕ್ಕೂ ಸ್ಮಾರ್ಟ್. ಚಿತ್ರರಂಗಕ್ಕೆ ಕಾಲಿಟ್ಟಾಗಲೇ ಸ್ಯಾಂಡಲ್ ವುಡ್ ಗೆ ಮತ್ತೊಬ್ಬ ನಾಯಕ ನಟ ಸಿಕ್ಕಾಯ್ತು ಎನ್ನುವ ಎಲ್ಲಾ ಸೂಚನೆಗಳು ಸಿಕ್ಕಿತ್ತು.

  ಅಭಿನಯಿಸದ ಮೊದಲ ಚಿತ್ರದಲ್ಲೇ ನಿರೀಕ್ಷೆ ಹುಟ್ಟಿಸಿದ ರಾಜವರ್ಧನ್ ಈಗಾಗಲೇ ಮೂರು ಸಿನಿಮಾಗಳಲ್ಲಿ ಅಭಿನಯಿಸಿ ಪ್ರೇಕ್ಷಕರ ಮುಂದೆ ಬರಲು ಸಜ್ಜಾಗಿದ್ದಾರೆ. ವಿಭಿನ್ನ ಸಿನಿಮಾ ಹಾಗೂ ವಿಶೇಷವಾಗಿರುವ ಪಾತ್ರಗಳನ್ನು ಮಾತ್ರ ಒಪ್ಪಿಕೊಳ್ಳುವ ರಾಜವರ್ಧನ್ ಸದ್ಯ ಕುದುರೆ ಸವಾರಿ ಮಾಡುತ್ತಾ ಪ್ರೇಕ್ಷಕರ ಮುಂದೆ ಬರಲಿದ್ದಾರೆ.

  ಸ್ಯಾಂಡಲ್ ವುಡ್ ನಲ್ಲಿ ಹವಾ ಎಬ್ಬಿಸಲು ಬರ್ತಿದ್ದಾಳೆ ಮಿಸ್ ದೀವಾ

  ಈಗಾಗಲೇ ಎರಡು ಚಿತ್ರಗಳ ಶೂಟಿಂಗ್ ಮುಗಿಸಿರುವ ರಾಜವರ್ಧನ್ ಮತ್ತೊಂದು ಚಿತ್ರಕ್ಕಾಗಿ ತಯಾರಿ ಮಾಡಿಕೊಳ್ಳುತ್ತಿದ್ದಾರೆ. ಹಾಗಾದರೆ ಡಿಂಗ್ರಿ ನಾಗರಾಜ್ ಅವರ ಪುತ್ರ ಮಾಡಿಕೊಳ್ಳುತ್ತಿರುವ ತಯಾರಿ ಏನು? ರಾಜವರ್ಧನ್ ಅಭಿನಯದ ಯಾವ ಯಾವ ಚಿತ್ರಗಳು ತೆರೆಗೆ ಬರಲು ಸಿದ್ದವಾಗಿದೆ. ಇಲ್ಲಿದೆ ಸಂಪೂರ್ಣ ಮಾಹಿತಿ ಮುಂದೆ ಓದಿ.

  ಸಿನಿಮಾಗಾಗಿ ಕುದುರೆ ಸವಾರಿ

  'ನೂರೊಂದು ನೆನಪು' ಸಿನಿಮಾ ಮೂಲಕ ಭರವಸೆ ಮೂಡಿಸಿರುವ ನಟ ರಾಜವರ್ಧನ್ ಸದ್ಯ ತಮ್ಮ ಮುಂದಿನ ಸಿನಿಮಾದ ತಯಾರಿಯಲ್ಲಿದ್ದಾರೆ. ಚಿತ್ರಕ್ಕಾಗಿ ಕುದುರೆ ಸವಾರಿಯನ್ನು ಕಲಿಯುತ್ತಿದ್ದಾರೆ. ಪ್ರತಿನಿತ್ಯ ಒಂದು ಗಂಟೆಗಳ ಕಾಲ ಕುದುರೆ ಸವಾರಿಯ ಟ್ರೈನಿಂಗ್ ಪಡೆಯುತ್ತಿದ್ದಾರೆ.

  ಪ್ರತಿನಿತ್ಯ ಎರಡು ಗಂಟೆ ವರ್ಕ್ ಔಟ್

  ಕುದುರೆ ಸವಾರಿ ಮಾತ್ರವಲ್ಲದೆ ಪ್ರತಿನಿತ್ಯ ಎರಡು ಗಂಟೆಗಳ ಕಾಲ ಜಿಮ್ ನಲ್ಲಿ ರಾಜವರ್ಧನ್ ವರ್ಕ್ ಔಟ್ ಮಾಡುತ್ತಿದ್ದಾರೆ. ಸ್ಟಾರ್ ಟ್ರೈನರ್ ಶ್ರೀನಿವಾಸ್ ಗೌಡ ರಾಜವರ್ಧನ್ ಅವರಿಗೆ ಫಿಟ್ ನೆಸ್ ಟ್ರೈನ್ ಮಾಡುತ್ತಿದ್ದಾರೆ.

  ವಿಶೇಷವಾಗಿರಲಿದೆ ಪಾತ್ರ

  ಸದ್ಯ ರಾಜವರ್ಧನ್ ಹೊಸ ಸಿನಿಮಾಗಾಗಿ ಸಿದ್ದತೆ ಮಾಡಿಕೊಳ್ಳುತ್ತಿದ್ದು ಚಿತ್ರದಲ್ಲಿ ವಿಭಿನ್ನ ಪಾತ್ರವನ್ನು ನಿರ್ವಹಿಸಲಿದ್ದಾರೆ. ಅದಕ್ಕಾಗಿಯೇ ಹಾರ್ಸ್ ರೈಡಿಂಗ್ ಕಲಿಯುತ್ತಿದ್ದಾರೆ. ಈಗಾಗಲೇ ಲುಕ್ ಕೂಡ ಬದಲಾಯಿಸಿಕೊಂಡಿದ್ದಾರೆ.

  ಎರಡು ಚಿತ್ರಗಳು ತೆರೆಗೆ ಬರಲಿವೆ

  ರಾಜವರ್ಧನ್ ಅಭಿನಯಿಸಿರುವ 'ಫ್ಲೈ' ಮತ್ತು 'ಐರಾ' ಸಿನಿಮಾಗಳ ಚಿತ್ರೀಕರಣ ಕಂಪ್ಲೀಟ್ ಆಗಿತ್ತು ಎರಡು ಚಿತ್ರಗಳು ಇದೇ ವರ್ಷದಲ್ಲಿ ರಿಲೀಸ್ ಆಗಲಿವೆ. ಎರಡು ಸಿನಿಮಾಗಳು ವಿಭಿನ್ನ ಕಥಾಹಂದರವನ್ನು ಹೊಂದಿದೆ.

  English summary
  Kannada actor RajaVardhan is learning horse riding for the next film. Raja Vardhan's fly and Ayra movie will be released shortly.