Don't Miss!
- Sports
ಗೆದ್ದ ಜಯ್ ಶಾ ಹಠ, ಪಾಕ್ಗೆ ಹಿನ್ನೆಡೆ; ತಟಸ್ಥ ಸ್ಥಳದಲ್ಲಿ 2023ರ ಏಷ್ಯಾಕಪ್ ಆಯೋಜಿಸಲು ನಿರ್ಧಾರ
- Lifestyle
Horoscope Today 5 Feb 2023: ಭಾನುವಾರ : ದ್ವಾದಶ ರಾಶಿಗಳ ರಾಶಿಫಲ ಹೇಗಿದೆ?
- News
ಗುಜರಾತ್ಗೆ ಬರಲಿದ್ದಾರೆ ಯುಎಸ್ ಮಾಜಿ ವಿದೇಶಾಂಗ ಕಾರ್ಯದರ್ಶಿ ಹಿಲರಿ ಕ್ಲಿಂಟನ್
- Finance
ಅದಾನಿ ಸ್ಟಾಕ್ ಕುಸಿತ: 'ನಿಯಂತ್ರಕರು ಅವರ ಕೆಲಸ ಮಾಡುತ್ತಾರೆ', ಎಂದ ವಿತ್ತ ಸಚಿವೆ
- Automobiles
ಬೆಲೆ ಏರಿಕೆ ಪಡೆದುಕೊಂಡ ಬಹುಬೇಡಿಕೆಯ ಟೊಯೊಟಾ ಹೈರೈಡರ್ ಎಸ್ಯುವಿ
- Technology
ಅಜ್ಜಿಗೆ ಆಪ್ಗಳ ಬಗ್ಗೆ ತಿಳಿಸಿಕೊಟ್ಟ ಯುವಕ; ವೈರಲ್ ಆಯ್ತು ವಿಡಿಯೋ!
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಕಂಬಳ ಕುರಿತ ಸಿನಿಮಾ ಕಮಾಲ್ ಮಾಡುವ ಭರವಸೆಯಲ್ಲಿ ರಾಜೇಂದ್ರ ಸಿಂಗ್ ಬಾಬು
ತುಳುನಾಡಿನ ಜನಪದ ಕ್ರೀಡೆ ಕಂಬಳವನ್ನು ಮುಖ್ಯವಾಗಿರಿಸಿಕೊಂಡು ತಯಾರುಗೊಳ್ಳುತ್ತಿರುವ ಬಿರ್ದ್ ದ ಕಂಬಳ ಚಿತ್ರೀಕರಣ ಮುಕ್ತಾಯದ ಹಂತದಲ್ಲಿದೆ ಎಂದು 'ಬಿರ್ದ್ ದ ಕಂಬುಲ' ಚಿತ್ರ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ಹೇಳಿದ್ದಾರೆ. ಮಂಗಳೂರಿನ ಉರ್ವಾ ಮೈದಾನದ ಬಳಿ ಸುದ್ದಿಗೋಷ್ಠಿ ನಡೆಸಿದ ಅವರು,"ಬಿರ್ದ್ ದ ಕಂಬುಲ" ಚಿತ್ರೀಕರಣ ಮುಕ್ತಾಯ ಹಂತದಲ್ಲಿದೆ. ತುಳುನಾಡಿನ ಹಲವಾರು ಪ್ರಸಿದ್ಧ ರಂಗಭೂಮಿ ಕಲಾವಿದರ ಜೊತೆಯಲ್ಲಿ ಖ್ಯಾತ ನಟರಾದ ಪ್ರಕಾಶ್ ರಾಜ್, ರವಿಶಂಕರ್ ನಟಿಸಿದ್ದಾರೆ. ಚಿತ್ರ ನಿರ್ದೇಶಕನಾಗಿ ಇದು ತುಂಬಾ ಚಾಲೆಂಜ್ ಆಗಿರೋ ಸಿನಿಮಾ ಎಂದು ಹೇಳಿದ್ದಾರೆ.
ನಿರ್ದೇಶನ ತಂಡದಲ್ಲಿ ರಾಜೇಶ್ ಕುಡ್ಲ, ಖ್ಯಾತ ತುಳು ರಂಗಕರ್ಮಿ ವಿಜಯ್ ಕುಮಾರ್ ಕೊಡಿಯಾಲ್ ಬೈಲ್ ಇರೋದ್ರಿಂದ ತುಳು ಭಾಷೆ ಗೊತ್ತಿಲ್ಲದೇ ಇದ್ರೂ ಸುಲಭವಾಗಿ ಚಿತ್ರೀಕರಣ ನಟಿಸುವಂತಾಯಿತು. ಇದು ಕಂಬಳ ಕತೆಯಾದ ಕಾರಣ ಪ್ರಾಣಿಗಳ ಜೊತೆ ಚಿತ್ರೀಕರಣ ನಡೆಸಲಾಗಿದೆ. ಇದು ಸುಲಭದ ಮಾತಲ್ಲ. ಕ್ಯಾಮೆರಾ, ತಾಂತ್ರಿಕತೆ ಹಿನ್ನೆಲೆಯಲ್ಲಿ 'ಬಿರ್ದ್ ದ ಕಂಬುಲ' ತುಳು ಭಾಷೆ ಮಾತ್ರವಲ್ಲದೆ ಕನ್ನಡ, ಹಿಂದಿ, ತಮಿಳು, ಮಲಯಾಳಂ ಭಾಷೆಯಲ್ಲಿ ಬಿಡುಗಡೆಗೊಳ್ಳಲಿದೆ ಎಂದು ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ಹೇಳಿದ್ದಾರೆ.

'ಬಿರ್ದ್ ದ ಕಂಬುಲ' ಸಿನಿಮಾ
'ಬಿರ್ದ್ ದ ಕಂಬುಲ' ಚಿತ್ರ ಬೇರೆ ಚಿತ್ರಗಳಿಗಿಂತ ಭಿನ್ನವಾಗಿದೆ. ಎಲ್ಲಾ ದೃಶ್ಯಗಳು ನೈಜತೆಯಿಂದ ಕೂಡಿದ್ದು ಸಾಧ್ಯವಾದಷ್ಟು ಸಹಜವಾಗಿ ಚಿತ್ರವನ್ನು ನಿರ್ಮಿಸಲಾಗಿದೆ. ತುಳುನಾಡಿನ ಭಾಷೆ, ಸಂಸ್ಕೃತಿ ಮಾತ್ರವಲ್ಲದೆ ಇಡೀ ವಿಶ್ವದಲ್ಲಿ ತುಳು ಭಾಷೆ, ಇಲ್ಲಿನ ಸಂಸ್ಕೃತಿ, ಪ್ರವಾಸೋದ್ಯಮಕ್ಕೆ ಕೊಡುಗೆ ನೀಡಲಿದೆ ಎಂದು ಚಿತ್ರ ನಿರ್ದೇಶಕ ಎಸ್.ವಿ. ರಾಜೇಂದ್ರ ಸಿಂಗ್ ಬಾಬು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ರಾಜೇಂದ್ರ ಸಿಂಗ್ ಬಾಬು
ಚಿತ್ರದ ಸಂಭಾಷಣೆಕಾರ ವಿಜಯ್ ಕುಮಾರ್ ಕೊಡಿಯಾಲ್ ಬೈಲ್ ಮಾತನಾಡಿ, ಈ ಚಿತ್ರದ ಮೂಲಕ ರಾಜೇಂದ್ರ ಸಿಂಗ್ ಬಾಬು ಅವರು ತುಳು ಭಾಷೆಗೆ ಒಂದು ಹೊಸ ಆಯಾಮವನ್ನು ತಂದುಕೊಡಲಿದ್ದಾರೆ. ತುಂಬಾ ಭಿನ್ನವಾದ ಸಿನಿಮಾ ಎಲ್ಲರೂ ಪ್ರೋತ್ಸಾಹಿಸಬೇಕು. ತುಳು ಚಿತ್ರ ರಂಗದಲ್ಲೇ ಈ ಸಿನಿಮಾ ವಿಭಿನ್ನ ವಾಗಿ ಮೂಡಿ ಬಂದಿದೆ ಅಂತಾ ಹೇಳಿದ್ದಾರೆ.

ಕಂಬಳ ನಮ್ಮ ಬದುಕು: ನವೀನ್ ಡಿ. ಪಡೀಲ್
ಇನ್ನು ನಟ ಕುಸೇಲ್ದರಸೆ ನವೀನ್ ಡಿ. ಪಡೀಲ್ ಮಾತನಾಡಿ, ಚಿತ್ರದ ಮೇಲೆ ನಿರೀಕ್ಷೆ ಹೆಚ್ಚಾಗಿದೆ. ನನ್ನ ಪಾತ್ರ ಕೂಡಾ ಡಿಫರೆಂಟ್ ಆಗಿದೆ. ನಮ್ಮ ತುಳುನಾಡಿನ ಜಾನಪದ ಸೊಗಡನ್ನು ವಿಶ್ವದೆಲ್ಲೆಡೆ ಪಸರಿಸಲಿದೆ. ಕಂಬಳ ಬರೀ ನಮ್ಮ ಸಂಸ್ಕೃತಿ ಮಾತ್ರವಲ್ಲ ಅದು ನಮ್ಮ ಬದುಕು ಎಂದು ಹೇಳಿದ್ದಾರೆ.

ಕಾಂತಾರಾ ಚಿತ್ರದ ಗುರುವ 'ಬಿರ್ದ್ ದ ಕಂಬಳ' ದಲ್ಲಿ
ಕಾಂತಾರಾ ಚಿತ್ರದಲ್ಲಿ ಗುರುವ ಪಾತ್ರ ನಿಭಾಯಿಸಿದ ಸ್ವರಾಜ್ ಶೆಟ್ಟಿಯೂ ಬಿರ್ದ್ ದ ಕಂಬಳ ದಲ್ಲಿ ಅಭಿನಯಿಸಲಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸ್ವರಜ್,ಕಂಬಳ ಎನ್ನುವ ತುಳುನಾಡಿನ ಸಂಸ್ಕೃತಿ ಕುರಿತ ಸಿನಿಮಾ ಇದಾಗಿದೆ. ನನ್ನ ಪಾತ್ರ ಸಾಕಷ್ಟು ವಿಭಿನ್ನವಾಗಿದೆ.ಇಷ್ಟಪಟ್ಟು ನಟಿಸಿದ್ದೇನೆ, ತುಳುವರು ಪ್ರೀತಿಯಿಂದ ಬರಮಾಡಿಕೊಳ್ಳಿ ಹೇಳಿದ್ದಾರೆ. ಸುದ್ದಿಗೋಷ್ಠಿಯಲ್ಲಿ ರಾಜೇಶ್ ಕುಡ್ಲ, ಕಂಬಳ ಓಟಗಾರ ಶ್ರೀನಿವಾಸ ಗೌಡ, ಕಲಾ ನಿರ್ದೇಶಕ ಚಂದ್ರಶೇಖರ್ ಸುವರ್ಣ ಸೇರಿದಂತೆ ಚಿತ್ರತಂಡದ ಪ್ರಮುಖರು ಭಾಗವಹಿಸಿದ್ದರು.