For Quick Alerts
  ALLOW NOTIFICATIONS  
  For Daily Alerts

  ಹಳ್ಳಿಹೈದನ 'ಲವ್ ಈಸ್ ಪಾಯಿಸನ್' ಕಥೆ ಏನಾಯ್ತು?

  By Rajendra
  |

  'ಜಂಗಲ್ ಜಾಕಿ' ಎಂದೇ ಖ್ಯಾತನಾಗಿದ್ದ ಹಳ್ಳಿಹೈದ ರಾಜೇಶ್ ದುರಂತ ಸಾವಪ್ಪಿದ ಬಳಿಕ ಆತನ ಕೊನೆಯ ಚಿತ್ರ 'ಲವ್ ಈಸ್ ಪಾಯಿಸನ್' ಕಥೆ ಸದ್ದಿರಲಿಲ್ಲ. ಇದೀಗ ಚಿತ್ರದ ರೀ ರೆಕಾರ್ಡಿಂಗ್ ಹಾಗೂ ಮಿಕ್ಸಿಂಗ್ ಕಾರ್ಯ ಕಿರಣ್ ಸಂಗೀತ ನಿರ್ದೇಶನದಲ್ಲಿ ಡಿಸೆಂಬರ್ 7ರಂದು ರಾಜೇಶ್ ರಾಮನಾಥ್ ಸ್ಟುಡಿಯೋದಲ್ಲಿ ಮುಕ್ತಾಯಗೊಂಡಿತು.

  ಮೈಸೂರಿನ ಶ್ರೀರಾಮಪುರದ ಬಳಿ ಪರಸಯ್ಯನಹುಂಡಿಯಲ್ಲಿರುವ ತಮ್ಮ ನಿವಾಸದ ಮೂರನೇ ಮಹಡಿಯಿಂದ ಕೆಳಗೆ ಬಿದ್ದು ರಾಜೇಶ್ ದುರಂತ ಸಾವಿಪ್ಪಿದ್ದ. ಇನ್ನೂ ಚಿತ್ರೀಕರಣ ಹಂತದಲ್ಲಿದ್ದ 'ಲವ್ ಈಸ್ ಪಾಯಿಸನ್' ಚಿತ್ರದ ಕಥೆಯೂ ಅಲ್ಲಿಗೆ ಮುಗಿಯಿತು ಎಂದೇ ಎಲ್ಲರೂ ಭಾವಿಸಿದ್ದರು. ಈಗ ಚಿತ್ರ ಬಿಡುಗಡೆಗೆ ಸಿದ್ಧವಾಗಿದೆ. [ರಾಜೇಶ್ ವಿಧಿ ವಿಲಾಸಕ್ಕೆ ಬಲಿಯಾದನೇ?]

  ಆಕಾಶ್ ಎಂಟರ್ ಪ್ರೈಸಸ್ ಲಾಂಛನದಡಿಯಲ್ಲಿ ಕೆ.ಸೋಮಶೇಖರ್, ಕೇಶವ ನಿರ್ಮಿಸುತ್ತಿರುವ ಚೊಚ್ಚಲ ಚಿತ್ರದ ಧ್ವನಿಸುರುಳಿ ಬಿಡುಗಡೆ ಸಮಾರಂಭವು ಡಿ.11ರಂದು ನಡೆಯಲಿದೆ. ಜನವರಿಯಲ್ಲಿ ಈ ಚಿತ್ರವು ತೆರೆಕಾಣಲಿದೆ ಎಂದು ನಿರ್ಮಾಪಕ ಸೋಮಶೇಖರ್ ತಿಳಿಸಿದ್ದಾರೆ.

  ರಾಜೇಶ್ ಅಭಿನಯದ ಕೊನೆಯ ಚಿತ್ರ ಇದಾದ ಕಾರಣ ಈ ಚಿತ್ರದ ಬಗ್ಗೆ ಸಾಕಷ್ಟು ನಿರೀಕ್ಷೆಗಳಿಗಿಂತಲೂ ಹೆಚ್ಚಾಗಿ ಅನುಕಂಪವಿದೆ. ಈ ಅನುಕಂಪದ ಅಲೆ ಬಾಕ್ಸ್ ಆಫೀಸ್ ಚಿಂದಿ ಉಡಾಯಿಸಿದರೆ ರಾಜೇಶ್ ಆತ್ಮಕ್ಕೆ ಶಾಂತಿ ಸಿಕ್ಕಂತಾಗುತ್ತದೆ. ಇದಿಷ್ಟೇ ಅಲ್ಲದೆ ಅವರ ತಂದೆತಾಯಿಗೂ ಒಂದಷ್ಟು ಸಹಾಯವಾಗಬಹುದು. ['ಜಂಗಲ್ ಜಾಕಿ' ರಾಜೇಶನಿಗೆ ಮೋಸ ಮಾಡಿದ್ರಾ?]

  ಉಳಿದಂತೆ ಈ ಚಿತ್ರಕ್ಕೆ ರವಿಶಂಕರ್ ನಾಗ್ ಸಂಭಾಷಣೆ, ಕವಿರಾಜ್, ಸಾಹಿತ್ಯ, ಸಾಯಿಕಿರಣ್ ಸಂಗೀತ, ವೀನನ್ ಮೂರ್ತಿ ಛಾಯಾಗ್ರಹಣ, ಬಾಬುಖಾನ್ ಕಲೆ, ಶಂಕರ್ ನೃತ್ಯ, ಥ್ರಿಲ್ಲರ್ ಮಂಜು ಸಾಹಸ ಈಶ್ವರ್ ಸಂಕಲನವಿದ್ದು, ವೇಣು ನಿರ್ಮಾಣ ನಿರ್ವಹಣೆ, ಚಿತ್ರದ ಕಥೆ, ಚಿತ್ರಕಥೆ ನಿರ್ದೇಶನದ ಹೊಣೆಯನ್ನು ನಂದನ ಪ್ರಭು ಹೊತ್ತಿದ್ದಾರೆ.

  ತಾರಾಗಣದಲ್ಲಿ ರಾಜೇಶ್, ಖುಷಿ, ದೋಹಿ, ಚಂದ್ರು, ಸಾಧುಕೋಕಿಲ, ಯತಿರಾಜ್, ಟೆನ್ನಿಸ್ ಕೃಷ್ಣ, ಬುಲೆಟ್ ಪ್ರಕಾಶ್ ಮುಂತಾದವರಿದ್ದು, ಬಾಲಿವುಡ್‍ನ ನಟಿ ಪೂನಂ ಪಾಂಡೆ ಚಿತ್ರದ ಗೀತೆಯೊಂದರಲ್ಲಿ ಹೆಜ್ಜೆಹಕಿದ್ದಾರೆ. (ಒನ್ಇಂಡಿಯಾ ಕನ್ನಡ)

  English summary
  'Jungle Jackie' Rajesh acted last Kannada movie 'Love is Poison' all set to release in January, 2014. The hero of the film, Rajesh, passed away recently as he fell from the building he was staying in.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X