For Quick Alerts
  ALLOW NOTIFICATIONS  
  For Daily Alerts

  ಬಿಡುಗಡೆಗೂ ಮುಂಚೆಯೇ 110 ಕೋಟಿ ಗಳಿಸಿದ ರಜನಿಯ '2.0'

  By Bharath Kumar
  |
  ರಿಲೀಸ್ ಆಗದಿದ್ರೂ ರಜನಿ ಸಿನಿಮಾ ಗಳಿಸಿದ್ದು ಕೋಟಿ ಕೋಟಿ ಹಣ | Filmibeat Kannada

  ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ 'ಕಾಲಾ' ಸಿನಿಮಾ ಜೂನ್ 7 ರಂದು ಜಗತ್ತಿನಾದ್ಯಂತ ಬಿಡುಗಡೆಯಾಗುತ್ತಿದೆ. ಈ ನಡುವೆ 'ಕಾಲಾ' ಚಿತ್ರಕ್ಕಿಂತ ತಲೈವಾ ಅಭಿನಯದ ಮತ್ತೊಂದು ಸಿನಿಮಾ '2.0'ಗೆ ಬೇಡಿಕೆ ಹೆಚ್ಚಿದೆ.

  ಎಲ್ಲ ಅಂದುಕೊಂಡಂತೆ ಆಗಿದ್ದರೇ, ಇಷ್ಟೊತ್ತಿಗಾಗಲೇ '2.0' ಸಿನಿಮಾ ತೆರೆಕಾಣಬೇಕಿತ್ತು. ಆದ್ರೆ, ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ಹೆಚ್ಚು ಕೆಲಸವಿದ್ದ ಕಾರಣದಿಂದ ಸಿನಿಮಾ ಮುಂದೂಡಲಾಗಿತ್ತು. ಇದೀಗ, ಬಹುತೇಕ ಪೋಸ್ಟ್ ಪ್ರೊಡಕ್ಷನ್ ಮುಗಿಸಿರುವ '2.0' ಇದೇ ವರ್ಷ ತೆರೆಗೆ ಬರಲಿದೆ.

  ಸುಮಾರು 450 ಕೋಟಿ ವೆಚ್ಚದಲ್ಲಿ ತಯಾರಾಗಿರುವ ಈ ಚಿತ್ರ ಭಾರಿ ಮೊತ್ತವನ್ನ ಗಳಿಸುವ ನಿರೀಕ್ಷೆಯಿದೆ. ಅದರ ಮೊದಲ ಭಾಗದಂತೆ ಬಿಡುಗಡೆಗೂ ಮುಂಚೆಯೇ '2.0' ಸಿನಿಮಾ 110 ಕೋಟಿ ಗಳಿಸಿಕೊಂಡಿದೆ.

  ಕರ್ನಾಟಕದಲ್ಲಿ ರಜನಿಕಾಂತ್ 'ಕಾಲಾ' ಬಿಡುಗಡೆಯಾಗಲ್ಲ.!ಕರ್ನಾಟಕದಲ್ಲಿ ರಜನಿಕಾಂತ್ 'ಕಾಲಾ' ಬಿಡುಗಡೆಯಾಗಲ್ಲ.!

  ತಮಿಳು, ತೆಲುಗು, ಹಿಂದಿ ಸೇರಿದಂತೆ ಭಾರತದ ವಿವಿಧ ಭಾಷೆಗಳಲ್ಲಿ ಸಿನಿಮಾ ಬಿಡುಗಡೆಯಾಗಲಿದ್ದು, ಎಲ್ಲ ಭಾಷೆಯ ಸ್ಯಾಟ್ ಲೈಟ್ ಹಕ್ಕು ಖರೀದಿಯಾಗಿದ್ದು, ಸುಮಾರು 110 ಕೋಟಿ ಮೌಲ್ಯಕ್ಕೆ ಜೀ ನೆಟ್ ವರ್ಕ್ ಕೊಂಡುಕೊಂಡಿದೆ.

  ರಜನಿಕಾಂತ್ 'ಕಾಲ'ಗೆ ಕರ್ನಾಟಕದಲ್ಲಿ ಸಂಕಷ್ಟರಜನಿಕಾಂತ್ 'ಕಾಲ'ಗೆ ಕರ್ನಾಟಕದಲ್ಲಿ ಸಂಕಷ್ಟ

  ಇನ್ನುಳಿದಂತೆ ಶಂಕರ್ ಈ ಚಿತ್ರವನ್ನ ನಿರ್ದೇಶನ ಮಾಡಿದ್ದು, ರಜನಿಕಾಂತ್ ಮತ್ತು ಅಕ್ಷಯ್ ಕುಮಾರ್ ನಟಿಸಿದ್ದಾರೆ. ಆಮಿ ಜಾಕ್ಸನ್ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಎ.ಆರ್ ರೆಹಮಾನ್ ಸಂಗೀತ ಸಂಯೋಜನೆ ಮಾಡಿದ್ದು, ಈಗಾಗಲೇ ಚಿತ್ರದ ಆಡಿಯೋ ಬಿಡುಗಡೆಯಾಗಿದ್ದು, ಸಿನಿಮಾದ ಬಗ್ಗೆ ಕುತೂಹಲ ಹೆಚ್ಚಾಗಿದೆ.

  English summary
  Even before release, Rajini's enthiran 2.0’s satellite rights across all languages were bagged for Rs 110 crore by the Zee Network.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X