»   » ಸೂಪರ್ ಸ್ಟಾರ್ ರಜನಿಗೆ ವಿಕ್ರಂ, ಅಜಿತ್ ಚಾಲೆಂಜ್!

ಸೂಪರ್ ಸ್ಟಾರ್ ರಜನಿಗೆ ವಿಕ್ರಂ, ಅಜಿತ್ ಚಾಲೆಂಜ್!

Posted By:
Subscribe to Filmibeat Kannada

ಕಾಲಿವುಡ್ ಬಾಕ್ಸಾಫೀಸ್ ನ ಸಾಮ್ರಾಟನಾಗಿರುವ ಸೂಪರ್ ಸ್ಟಾರ್ ರಜನಿಕಾಂತ್ ಗೆ ಯಾರಾದರೂ ಚಾಲೆಂಜ್ ಹಾಕುವುದುಂಟಾ.?! ಅಪ್ಪಿ-ತಪ್ಪಿ ಚಾಲೆಂಜ್ ಹಾಕಿದ್ರೂ, ಅದ್ರಲ್ಲಿ ಯಾರಾದ್ರೂ ಗೆಲ್ಲೋದುಂಟಾ.?! ಗೆಲ್ಲುತ್ತೀವೋ, ಇಲ್ಲವೋ ಅದು ಆಮೇಲಿನ ವಿಚಾರ ಅಂತ ರಜನಿ ಜೊತೆ ಅಖಾಡಕ್ಕಿಳಿದೇ ಬಿಟ್ಟಿದ್ದಾರೆ ಅಜಿತ್ ಮತ್ತು ವಿಕ್ರಂ.

ಹೌದು, ಹಿಂದೆಂದೂ ನೋಡಿರದ ಬಿಗ್ ಸ್ಟಾರ್ ವಾರ್ ವೊಂದಕ್ಕೆ ಕಾಲಿವುಡ್ ಸದ್ಯದಲ್ಲೇ ಸಾಕ್ಷಿಯಾಗಲಿದೆ. ಸ್ಟೈಲ್ ಕಿಂಗ್ ರಜನಿಕಾಂತ್, ಅಜಿತ್ ಮತ್ತು ವಿಕ್ರಂ ನಡುವೆ ಬಿಗ್ ವಾರ್ ನಡೆಯಲಿದೆ. ಅರ್ಥಾತ್ ಕೆಲವೇ ದಿನಗಳ ಅಂತರದಲ್ಲಿ ಈ ಮೂವರು ನಟರ ಬಿಗ್ ಬಜೆಟ್ ಚಿತ್ರಗಳು ತೆರೆಗೆ ಬಂದು ಬಾಕ್ಸಾಫೀಸ್ ನಲ್ಲಿ ಸೆಣಸಾಡಲಿವೆ.

Rajinikanth

ಈಗಾಗಲೇ ಜಗಜ್ಜಾಹೀರಾಗಿರುವಂತೆ ರಜನಿ ಅಭಿನಯದ 'ಲಿಂಗಾ' ಚಿತ್ರ ಡಿಸೆಂಬರ್ 12 ಕ್ಕೆ ಅಂದ್ರೆ, ರಜನಿ ಹುಟ್ಟುಹಬ್ಬದಂದೇ ಬಿಡುಗಡೆಯಾಗುತ್ತಿದೆ. ಸೂಪರ್ ಸ್ಟಾರ್ ಅಭಿಮಾನಿಗಳಿಗೆ ಹಬ್ಬದ ಸಂಭ್ರಮವಾಗಿರುವ ಈ ಸಂದರ್ಭದಲ್ಲೇ ತಮ್ಮ 'ಐ' ಚಿತ್ರವನ್ನು ತೆರೆಮೇಲೆ ತರುವ ತಯಾರಿ ನಡೆಸುತ್ತಿದ್ದಾರೆ ವಿಕ್ರಂ. [ಯೂಟ್ಯೂಬ್ ನಲ್ಲಿ ರಜನಿ 'ಲಿಂಗಾ' ಲಕಲಕ ಡಾನ್ಸ್]

''ಕ್ರಿಸ್ಮಸ್ ಮತ್ತು ಹೊಸ ವರ್ಷದ ಸಂದರ್ಭದಲ್ಲಿ ಸಿನಿಮಾ ರಿಲೀಸ್ ಮಾಡಿದ್ರೆ, ಹೆಚ್ಚು ಲಾಭ ಖಂಡಿತ'' ಅನ್ನುವ ಫಾರ್ಮುಲಾವನ್ನ ಬಾಲಿವುಡ್ ನಿಂದ ಆಮದು ಮಾಡಿಕೊಂಡು ಇದೀಗ 'ಲಿಂಗಾ' ಚಿತ್ರದ ಕಲೆಕ್ಷನ್ ಗೆ ಅಡ್ಡುಗಾಲು ಹಾಕೋಕೆ ಬರ್ತಿದೆ 'ಐ'.

Ajith2

'ಲಿಂಗಾ' ಚಿತ್ರದ ಟ್ರೇಲರ್ ಬಿಡುಗಡೆಯಾದ ಕೆಲವೇ ದಿನಗಳ ಹಿಂದೆಯಷ್ಟೇ ಶಂಕರ್ ನಿರ್ದೇಶನದ 'ಐ' ಚಿತ್ರದ ಟ್ರೇಲರ್ ರಿಲೀಸ್ ಆಗಿತ್ತು. ಯಾವುದೇ ಆಂಗಲ್ ನಿಂದ ನೋಡಿದ್ರೂ ಕುತೂಹಲ ಕೆರಳಿಸುವ 'ಐ' ಕ್ರಿಸ್ಮಸ್ ಅಥವಾ ಹೊಸ ವರ್ಷಕ್ಕೆ ತೆರೆಗೆ ಬರುವುದು ಖಚಿತ. ಅಲ್ಲಿಗೆ ರಜನಿ ಸಾರ್ ಏಕಚಕ್ರಾಧಿಪತಿಯಂತೆ ಮೆರೆಯುವುದು 2 ವಾರಗಳ ಕಾಲ ಮಾತ್ರ. [ರಜನಿಕಾಂತ್ 'ಲಿಂಗಾ' ಚಿತ್ರದ ರಿಲೀಸ್ ಗೆ ಕಂಟಕ]

ಅಷ್ಟಕ್ಕೆ 'ಐ' ಸಿನಿಮಾ ರೇಸ್ ನಲ್ಲಿ ಮುಂದು ಬರಲಿದೆ ಅಂತಲ್ಲ. 'ಐ' ಚಿತ್ರಕ್ಕೆ ಪೈಪೋಟಿ ನೀಡೋಕೆ ಅಜಿತ್ ಕೂಡ ಸಜ್ಜಾಗಿದ್ದಾರೆ. ಗೌತಮ್ ಮೆನನ್ ನಿರ್ದೇಶನದ 'ಯೆನ್ನೈ ಅರಿಂದಾಲ್' ಚಿತ್ರ ಸಂಕ್ರಾಂತಿ ಹಬ್ಬಕ್ಕೆ ತೆರೆಗೆ ಬರೋದು ಕನ್ಫರ್ಮ್.

Vikram

ಇಷ್ಟೊತ್ತಿಗಾಗಲೇ ರಿಲೀಸ್ ಆಗಿರ್ಬೇಕಿದ್ದ 'ಯೆನ್ನೈ ಅರಿಂದಾಲ್', 'ಲಿಂಗಾ' ಕೃಪೆಯಿಂದ ಥಿಯೇಟರ್ ಸಿಗದೆ ಮುಂದಕ್ಕೆ ಹೋಗಿದೆ. ಸಂಕ್ರಾಂತಿ ಹಬ್ಬಕ್ಕೆ ಅಜಿತ್ ಅಭಿನಯದ ಚಿತ್ರ ತೆರೆಗೆ ಬಂದ್ರೆ, 'ಲಿಂಗಾ' ಅರ್ಧದಷ್ಟು ಚಿತ್ರಮಂದಿರಗಳಿಂದ ಎತ್ತಂಗಡಿಯಾಗಿರುತ್ತೆ. [ಪುನೀತ್ ಜೊತೆ 'ಐ' ಅದ್ದೂರಿ ಆಡಿಯೋ ಬಿಡುಗಡೆ]

ಅಲ್ಲಿದೆ, ಕೆಲವೇ ವಾರಗಳ ಅಂತರದಲ್ಲಿ ಬಿಗ್ ಸ್ಟಾರ್ ಗಳ ಸಿನಿಮಾಗಳನ್ನ ಕಣ್ತುಂಬಿಕೊಳ್ಳುವ ಭಾಗ್ಯ ಅಭಿಮಾನಿಗಳಿಗೆ ಸಿಕ್ಕಿದ್ರೂ, ಬಾಕ್ಸಾಫೀಸ್ ಬಾದ್ ಷಾ ಆಗೋದಕ್ಕೆ ಸ್ಟಾರ್ ಗಳು ಸೆಣಸಾಡಬೇಕಾದ ಪರಿಸ್ಥಿತಿ ಎದುರಾಗಿದೆ. ಇದ್ರಲ್ಲಿ ಯಾರು ಗೆಲ್ಲಬೇಕು ಅನ್ನುವುದನ್ನ ಅಭಿಮಾನಿಗಳೇ ನಿರ್ಧಾರಮಾಡಬೇಕು.

English summary
Kollywood will witness a biggest star war ever this December and January. Rajnikanth starrer Lingaa is all set to release on December 12th. Meanwhile Vikram's I and Ajith's Yennai Arindhal is also releasing in few weeks gap.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada