»   » ಟ್ವೀಟ್ ಮಾಡೋದು ಮಾಡಿ ಸಮಜಾಯಿಷಿ ನೀಡಿದ ಆರ್.ಜಿ.ವಿ

ಟ್ವೀಟ್ ಮಾಡೋದು ಮಾಡಿ ಸಮಜಾಯಿಷಿ ನೀಡಿದ ಆರ್.ಜಿ.ವಿ

Posted By:
Subscribe to Filmibeat Kannada

ತಮಿಳು ಸೂಪರ್ ಸ್ಟಾರ್ ರಜನಿಕಾಂತ್ ಅವರ ಬಗ್ಗೆ ಕಾಮೆಂಟ್ ಗಳನ್ನು ಮಾಡಿ ಸೂಪರ್ ಸ್ಟಾರ್ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದ ವಿವಾದಾತ್ಮಕ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಅವರು ಮತ್ತೊಂದು ಹೇಳಿಕೆ ನೀಡಿದ್ದಾರೆ.

ಹೌದು ಇದೀಗ ವರ್ಮಾ ಅವರು 'ರಜನಿಕಾಂತ್ ಅವರ ಜೊತೆ ಸಿನಿಮಾ ಮಾಡಿದರೆ ಅವರ ಅಭಿಮಾನಿಗಳು ನನ್ನನ್ನು ಕೊಂದೇ ಹಾಕುತ್ತಾರೆ' ಎಂದು ಹಿಂದಿ ಭಾಷೆಯಲ್ಲಿ ಮೂಡಿಬರುತ್ತಿರುವ 'ವೀರಪ್ಪನ್' ಚಿತ್ರದ ಟ್ರೈಲರ್ ಬಿಡುಗಡೆ ಸಮಾರಂಭದಲ್ಲಿ ವರ್ಮಾ ಅವರು ಹೇಳಿಕೊಂಡಿದ್ದಾರೆ.[ಅದು 'ಕಾಂಪ್ಲಿಮೆಂಟ್'.! ರಜನಿ ಅಭಿಮಾನಿಗಳಿಗೆ ವರ್ಮಾ ಸ್ಪಷ್ಟನೆ]

'Rajinikanth fans will kill me if I make a film with him': Says RGV

'ಬ್ಯಾಡ್ ಲುಕರ್' ಅವರಿಗೆ ನೆಟ್ಟಗೆ ಡ್ಯಾನ್ಸ್ ಬರೋಲ್ಲ, ಅಂತೆಲ್ಲಾ ಸೂಪರ್ ಸ್ಟಾರ್ ರಜನಿಕಾಂತ್ ಅವರ ಬಗ್ಗೆ ನಾನಾ ತರದ ಟ್ವೀಟ್ ಮಾಡಿ ರಜನಿ ಅವರ ಅಭಿಮಾನಿಗಳಿಂದ ಇನ್ನಿಲ್ಲದಂತೆ ವಿರೋಧ ಎದುರಿಸಿದ ಆರ್.ಜಿ.ವಿ ಅವರು ತಮ್ಮ ತಪ್ಪನ್ನು ಮುಚ್ಚಿಕೊಳ್ಳಲು ತರೇಹವಾರಿ ಸರ್ಕಸ್ ಗಳನ್ನು ಮಾಡುತ್ತಿದ್ದಾರೆ.[ಇದ್ಬೇಕಿತ್ತಾ? ಸೂಪರ್ ಸ್ಟಾರ್ ರಜನಿ ಬಗ್ಗೆ ಲೇವಡಿ ಮಾಡಿದ ವರ್ಮಾ.!]

'Rajinikanth fans will kill me if I make a film with him': Says RGV

'ರಜನಿಕಾಂತ್ ಅವರ ಅಭಿಮಾನಿಗಳು ಮೂಕರಾದಂತಿದೆ. ಅವರಿಗೆ ನಾನು ಯಾವ ಅರ್ಥದಲ್ಲಿ ರಜನಿ ಅವರ ಬಗ್ಗೆ ಈ ರೀತಿ ಟ್ವೀಟ್ ಮಾಡಿದೆ ಎಂಬುದನ್ನು ತಿಳಿಯದೆ, ನಾನು ರಜನಿಯನ್ನು ಟೀಕಿಸಿದೆ ಎಂದು ಭಾವಿಸಿದ್ದಾರೆ'.

'Rajinikanth fans will kill me if I make a film with him': Says RGV

'ನಿಜಾರ್ಥದಲ್ಲಿ ನಾನು ರಜನಿ ಅವರನ್ನು ಅಭಿನಂದಿಸಿದ್ದೇನೆ. ಸ್ಪೂರದ್ರೂಪಿ ವ್ಯಕ್ತಿಯೊಬ್ಬ ದೊಡ್ಡ ಸ್ಟಾರ್ ನಟರಾಗುವುದರಲ್ಲಿ ಆಶ್ಚರ್ಯವಿಲ್ಲ ಆದರೆ ರಜನಿಯಂತವರು ಸ್ಟಾರ್ ಆಗುವುದಿದೆಯಲ್ಲಾ ಅದು ದೊಡ್ಡ ವಿಷಯ' ಎಂದು ವರ್ಮಾ ಅವರು ಟ್ರೈಲರ್ ಬಿಡುಗಡೆ ಸಮಾರಂಭದಲ್ಲಿ ಹೇಳಿದ್ದಾರೆ.[ರಜನಿ ಬಗ್ಗೆ ವರ್ಮಾ ಕಾಮೆಂಟ್.! ಟ್ವಿಟ್ಟರ್ ನಲ್ಲಿ ಸಿಟ್ಟಿಗೆದ್ದ ರಜನಿ ಫ್ಯಾನ್ಸ್.!]

'Rajinikanth fans will kill me if I make a film with him': Says RGV

ಅಂದಹಾಗೆ ನಟಿ ಆಮಿ ಜಾಕ್ಸನ್ ಅವರು ರಜನಿ ಅವರ ಜೊತೆ ತೆಗೆಸಿಕೊಂಡ ಸೆಲ್ಫಿ ಫೋಟೋವನ್ನು ಟ್ವಿಟ್ಟರ್ ನಲ್ಲಿ ಪೋಸ್ಟ್ ಮಾಡಿದ್ದಕ್ಕೆ ವರ್ಮಾ ಅವರು ಸಾಲು-ಸಾಲಾಗಿ ಟ್ವೀಟ್ ಮಾಡಿ ಎಲ್ಲರ ಕೆಂಗಣ್ಣಿಗೆ ಗುರಿಯಾಗಿದ್ದರು. 'ಎಂದಿರನ್ 2' ಚಿತ್ರದಲ್ಲಿ ರಜನಿಕಾಂತ್ ಮತ್ತು ಆಮಿ ಅವರು ಒಟ್ಟಾಗಿ ಮಿಂಚಿದ್ದಾರೆ.

English summary
Filmmaker Ram Gopal Varma says fans of Rajinikanth will “kill” him if he tries to make a movie with him, after the director tweeted as to how can “somebody with his looks” become a superstar.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada