Don't Miss!
- Sports
ಟಿ20 ವಿಶ್ವಕಪ್ ಗೆದ್ದ ಶಫಾಲಿ ವರ್ಮಾ ಪಡೆಗೆ ಬಿಸಿಸಿಐ ಸನ್ಮಾನ: 5 ಕೋಟಿ ರುಪಾಯಿ ಬಹುಮಾನ
- Lifestyle
ಬಜೆಟ್ನಲ್ಲಿ ಪ್ರಸ್ತಾಪವಾದ ಸಿಕಲ್ ಸೆಲ್ ಅನಿಮಿಯಾ ಕಾಯಿಲೆ ಎಷ್ಟು ಡೇಂಜರಸ್ ಗೊತ್ತೆ?
- News
Assembly election 2023: ಯಾವುದೇ ಪಕ್ಷದ ಜೊತೆ ಹೊಂದಾಣಿಕೆ ಇಲ್ಲ: ಚನ್ನಪಟ್ಟಣದಲ್ಲಿ ಸಿ.ಪಿ.ಯೋಗೇಶ್ವರ್ ಸ್ಪಷ್ಟನೆ
- Automobiles
ಹೊಸ ಇನೋವಾ ಹೈಕ್ರಾಸ್ ಬಲದೊಂದಿಗೆ ಮಾರಾಟದಲ್ಲಿ ದಾಖಲೆ ಮಟ್ಟದ ಬೆಳವಣಿಗೆ ಸಾಧಿಸಿದ ಟೊಯೊಟಾ
- Technology
ಚೀನಾದಲ್ಲಿ ಸೌಂಡ್ ಮಾಡಿದ್ದ ಈ ಡಿವೈಸ್ ಇದೀಗ ಜಾಗತಿಕ ಮಾರುಕಟ್ಟೆಗೆ ಎಂಟ್ರಿ!
- Finance
Union Budget 2023: ಹೊಸ ತೆರಿಗೆ ಪದ್ಧತಿಯಡಿಯಲ್ಲಿ ತೆರಿಗೆ ಲೆಕ್ಕಾಚಾರ ಹೇಗೆ?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಜೀವ ಪಣಕ್ಕಿಟ್ಟು ಹಿಂದೆಂದೂ ಮಾಡದ ಸಾಹಸಗಳನ್ನು ಮಾಡಿದ ರಜನೀಕಾಂತ್
ರಜನೀಕಾಂತ್ ಅವರ ಸ್ಟೈಲ್, ಡೈಲಾಗ್ ಡೆಲಿವರಿ, ಭಿನ್ನ ನಟನೆ, ಆಕ್ಷನ್ ಅವರನ್ನು ಸೂಪರ್ ಸ್ಟಾರ್ ಪಟ್ಟಕ್ಕೇರಿಸಿದೆ. ಭಾರತದಲ್ಲಿಯೇ ಅತಿ ಹೆಚ್ಚು ಅಭಿಮಾನಿಗಳನ್ನು ಹೊಂದಿರುವ ನಟ ಅವರು.
ಸಿನಿಮಾಗಳಲ್ಲಿ ವಿಲನ್‌ಗಳನ್ನು ಗಾಳಿಯಲ್ಲಿ ಹಾರಿ-ಹಾರಿ ಒದೆಯುವ, ಬಿಲ್ಡಿಂಗುಗಳಿಂದ ಜಂಪ್ ಮಾಡುವ ರಜನೀಕಾಂತ್ ಅಭಿಮಾನಿಗಳ ನೆಚ್ಚಿನ ಆಕ್ಷನ್ ಸ್ಟಾರ್.
ಸಿನಿಮಾಗಳಲ್ಲಿ ರಜನೀಕಾಂತ್ ಮಾಡುವ ಸ್ಟಂಟ್‌ಗಳಿಗಿಂತಲೂ ಅತ್ಯಂತ ಅಪಾಯಕಾರಿಯಾದ, ಸ್ಟಂಟ್ ಮನ್‌ಗಳ ಸಹಾಯವಿಲ್ಲದೆ ಮಾಡಿದ್ದಾರೆ ರಜನೀಕಾಂತ್.
ಹೌದು, ನಿಜ, ರಜನೀಕಾಂತ್ ಅವರು ಇತ್ತೀಚೆಗೆ ಡಿಸ್ಕವರಿ ಚಾನೆಲ್‌ನ ಖ್ಯಾತ ಸಾಹಸಿ ಬಿಯರ್ ಗ್ರಿಲ್ಸ್ ಅವರೊಂದಿಗೆ 'ಇನ್‌ಟು ದಿ ವೈಲ್ಡ್' ಕಾರ್ಯಕ್ರಮದಲ್ಲಿ ಭಾಗವಹಿಸಿ, ಅದ್ಭುತ ಸಾಹಸಯಾತ್ರೆಯನ್ನು ಮಾಡಿದ್ದಾರೆ.

ಅದ್ಭುತ ಸಾಹಸಗಳನ್ನು ಮಾಡಿದ ರಜನಿ
ಬನ್ನೇರುಘಟ್ಟ ರಾಷ್ಟ್ರೀಯ ಅರಣ್ಯದಲ್ಲಿ ಬಿಯರ್ ಗ್ರಿಲ್ಸ್ ಜೊತೆಗೆ ರಜನೀಕಾಂತ್ ಕಾಡಿನಲ್ಲಿ ಅದ್ಭುತ ಸಾಹಸ ಯಾತ್ರೆಯನ್ನು ಕೈಗೊಂಡರು. ಇದರ ಚಿತ್ರೀಕರಣ ಕೆಲವು ದಿನಗಳ ಹಿಂದೆ ಆಗಿತ್ತು. ಸೋಮವಾರ ಎಪಿಸೋಡ್ ಡಿಸ್ಕವರಿ ಚಾನೆಲ್‌ನಲ್ಲಿ ಪ್ರಸಾರವಾಯಿತು.

ಐವತ್ತು ಅಡಿ ಎತ್ತರದ ಬ್ರಿಡ್ಜ್ ದಾಟಿದ ರಜನಿ
ಐವತ್ತು ಅಡಿ ಎತ್ತರದ ಮುರಿದ ಕಬ್ಬಿಣದ ಬ್ರಿಡ್ಜ್ ಅನ್ನು ಹಗ್ಗದ ಸಹಾಯದಿಂದ ಬಿಯರ್ ಗ್ರಿಲ್ಸ್ ಮಾರ್ಗದರ್ಶನದಲ್ಲಿ 70 ವರ್ಷದ ರಜನೀಕಾಂತ್ ದಾಟಿದ್ದು, ನೋಡುಗರನ್ನು ಸೀಟಿನ ತುದಿಗೆ ಕೂರುವಂತೆ ಮಾಡಿತು. ಇಂತಹಾ ಇನ್ನೂ ಕೆಲವು ಸಾಹಸಗಳನ್ನು ರಜನೀಕಾಂತ್ 'ಇನ್ ಟು ದಿ ವೈಲ್ಡ್' ನಲ್ಲಿ ಮಾಡಿದ್ದಾರೆ.

ದಿಬ್ಬ ಹತ್ತಿ ಇಳಿದ ರಜನೀಕಾಂತ್
ನಂತರ ಹಗ್ಗ ಕಟ್ಟಿಕೊಂಡು ದಿಬ್ಬವನ್ನು ಇಳಿದ ರಜನೀಕಾಂತ್, ನಂತರ ಅದೇ ಕಡಿದಾದ ದಿಬ್ಬವನ್ನು ಹಗ್ಗದ ಸಹಾಯದಿಂದ ಏರಿದರು. ಈ ಸಮಯದಲ್ಲಿ ಸ್ವಲ್ಪ ಕಷ್ಟಪಟ್ಟ ಅವರು ಬಿದ್ದುಬಿಟ್ಟರು. ಆದರೆ ಬಿಯರ್ ಗ್ರಿಲ್ಸ್ ಸಹಾಯದೊಂದಿಗೆ ದಿಬ್ಬ ಏರಿಯೇ ಬಿಟ್ಟರು ರಜನೀ.

ಕೊಳಕಾದ ನೀರಿನ ಕೊಳವನ್ನು ದಾಟಿದ ರಜನೀಕಾಂತ್
ನಂತರ ದೊಡ್ಡ ಕೊಳಕಾದ ಕೊಳವನ್ನು ರಜನೀಕಾಂತ್ ದಾಟಿದರು. ರಿಚರ್ಡ್ ಜೊತೆಗೆ ನೀರಿನಲ್ಲಿ ಇಳಿದ ರಜನೀಕಾಂತ್, ಆ ದೊಡ್ಡ ಕೊಳದ ಮಧ್ಯಕ್ಕೆ ಹೋಗಿ ಅಲ್ಲಿಟ್ಟಿದ್ದ ಟ್ರಾಪಿಂಗ್ ಕ್ಯಾಮೆರಾ ತೆಗೆದುಕೊಂಡು ಬಂದರು. ಒಂದು ದಿನದ ಹಿಂದಷ್ಟೆ ಅದೇ ಜಾಗದಲ್ಲಿ ಹುಲಿಯೊಂದು ಓಡಾಡಿದ್ದ ಬಗ್ಗೆ ಕ್ಯಾಮೆರಾದಲ್ಲಿ ಸಾಕ್ಷಿ ಸಿಕ್ಕಿತು.

ಜೀಪ್ ಪಂಕ್ಚರ್ ಹಾಕಿದ ರಜನೀಕಾಂತ್
ಅಡವಿಯಲ್ಲಿ ಜೀಪ್ ಒಂದರಲ್ಲಿ ಪ್ರಯಾಣ ಮಾಡುವಾಗ ಜೀಪ್ ಪಂಕ್ಚರ್ ಸಹ ಆಯಿತು. ರಜನೀ ಮತ್ತು ಬಿಯರ್ ಗ್ರಿಲ್ ಪರಸ್ಪರ ಸಹಾಯ ಮಾಡಿ ಪಂಕ್ಚರ್ ಹಾಕಿದರು. ರಜನೀಕಾಂತ್ ಜೀಪ್ ಓಡಿಸಿದರು ಸಹ. ರಜನೀಕಾಂತ್ ತಾವು ಸ್ಟೈಲ್ ಆಗಿ ಗ್ಲಾಸ್ ಹಾಕಿಕೊಳ್ಳುವುದನ್ನು ಗ್ರಿಲ್ಸ್ ಗೆ ಹೇಳಿಕೊಟ್ಟರು.

ಸೂಪರ್ ಸ್ಟಾರ್ ಗೆ ಸ್ಟಾರ್ ನಟರ ಸಂದೇಶ
ರಜನೀಕಾಂತ್ ಅವರು ಸಿನಿಮಾ ಪ್ರವೇಶ ಮಾಡಿದ್ದರ ಬಗ್ಗೆ, ಭಾರತದಲ್ಲಿ ಆಗಬೇಕಾದ ಬದಲಾವಣೆಗಳ ಬಗ್ಗೆ ಬಿಯರ್ ಗ್ರಿಲ್ಸ್ ಬಳಿ ಮಾತನಾಡಿದರು. ರಜನೀಕಾಂತ್ ಅವರ ಸಾಹಸ ಯಾತ್ರೆಗೆ ಕಮಲ್ ಹಾಸನ್, ಮಾಧವನ್, ಅಕ್ಷಯ್ ಕುಮಾರ್ ಅವರುಗಳು ಶುಭಾಶಯ ಸಂದೇಶಗಳನ್ನು ಕಳುಹಿಸಿದ್ದರು.