»   » ರಜನಿಕಾಂತ್ ಚಿತ್ರ ಕೋಚಡೈಯಾನ್ ರೆಡಿ

ರಜನಿಕಾಂತ್ ಚಿತ್ರ ಕೋಚಡೈಯಾನ್ ರೆಡಿ

Posted By:
Subscribe to Filmibeat Kannada
ಕನ್ನಡದಲ್ಲಿ ದುನಿಯಾ ವಿಜಯ್ ದ್ವಿಪಾತ್ರಾಭಿನಯದ ರಜಿನಿ ಕಾಂತ ರೀಲೀಸ್ ಆಗಿ (ಚಿತ್ರ ವಿಮರ್ಶೆ ಓದಿ) ಯಶಸ್ವಿಯಾಗಿ ಪ್ರದರ್ಶನ ಕಾಣುತ್ತಿದೆ. ಅತ್ತ ಸೂಪರ್ ಸ್ಟಾರ್ ರಜನಿಕಾಂತ್ ಅವರ ಬಹುನಿರೀಕ್ಷಿತ 'ಕೋಚಡೈಯಾನ್' ಚಿತ್ರದ ಪ್ರಥಮ ಪ್ರತಿ ಸಿದ್ಧವಾಗಿದೆ. ಇನ್ನೇನಿದ್ದರೂ ತೆರೆಗೆ ಅಪ್ಪಳಿಸುವುದೊಂದೇ ಬಾಕಿ.

ರಜನಿಕಾಂತ್ ಅವರ ಚಿತ್ರ ಎಂದರೆ ಕಥೆ, ಚಿತ್ರಕಥೆ ಬಗ್ಗೆ ಅವರ ಅಭಿಮಾನಿಗಳು ತಲೆಕೆಡಿಸಿಕೊಳ್ಳಲ್ಲ. ರಜನಿಕಾಂತ್ ಅವರ ಸ್ಟೈಲ್, ಡೈಲಾಗ್ಸ್ ಅವರಿಗೆ ಮುಖ್ಯ. ಹೆಗಲ ಮೇಲೆ ಟವಲ್ ಹಾಕಿಕೊಳ್ಳುವುದರಲ್ಲೂ ಒಂದು ಸ್ಟೈಲ್ ಇರುತ್ತದೆ. ಇನ್ನು ಸಿಗರೇಟ್, ಬೀಡಿ ಸ್ಟೈಲ್ ಬಗ್ಗೆ ಹೇಳಲೇಬೇಕಾಗಿಲ್ಲ.

ವಯಸ್ಸು 60 ದಾಟಿದ್ದರೂ ಪ್ರಾಯದ ಹುಡುಗನಂತೆ ನಾಯಕಿ ಜೊತೆ ಡ್ಯುಯೆಟ್ ಹಾಡುತ್ತಾರೆ. ಎದುರಾಳಿಗಳನ್ನು ಬೇಕಿದ್ದರೆ ಶಲ್ಯದಲ್ಲೇ ಸದೆಬಡಿಯುತ್ತಾರೆ. ಇದಿಷ್ಟಿದ್ದರೆ ಸಾಕಲ್ಲವೆ. ಅಭಿಮಾನಿಗಳ ಶಿಳ್ಳೆಗೆ ಥಿಯೇಟರ್ ಛಾವಣಿ ಹಾರಿಹೋಗುತ್ತದೆ.

ಕೋಚಡೈಯಾನ್ ಚಿತ್ರದ ಬಗ್ಗೆಯೂ ಇದೇ ರೀತಿಯ ನಿರೀಕ್ಷೆಗಳಿವೆ. ದೀಪಿಕಾ ಪಡುಕೋಣೆ, ಶರತ್ ಕುಮಾರ್, ಶೋಭನಾ, ಜಾಕಿ ಶ್ರಾಫ್ ಮುಂತಾದವರು ಚಿತ್ರದಲ್ಲಿದ್ದಾರೆ. ಈ ಚಿತ್ರ 3d ತಂತ್ರಜ್ಞಾನದಲ್ಲಿ ಮೂಡಿಬರುತ್ತಿರುವುದು ಇನ್ನೊಂದು ವಿಶೇಷ.

ಚಿತ್ರದ ಪ್ರಥಮ ಪ್ರತಿಯನ್ನು ಚಿತ್ರದ ನಿರ್ದೇಶಕ ಕೆ.ಎಸ್.ರವಿಕುಮಾರ್, ರಜನಿಕಾಂತ್ ಸೇರಿದಂತೆ ಚಿತ್ರತಂಡ ನೋಡಿದೆ. ಚಿತ್ರ ಅದ್ಭುತವಾಗಿ ಮೂಡಿಬಂದಿದ್ದು ಎಲ್ಲರೂ ಸಖತ್ ಖುಷಿಯಾಗಿದ್ದಾರೆ ಎಂದು ರಜನಿ ಅವರ ಪುತ್ರಿ ಸೌಂದರ್ಯಾ ಆರ್ ಅಶ್ವಿನ್ ಅವರು ತಮ್ಮ ಫೇಸ್ ಬುಕ್ ಅಕೌಂಟ್ ನಲ್ಲಿ ಹೇಳಿಕೊಂಡಿದ್ದಾರೆ.

ಎ.ಆರ್.ರೆಹಮಾನ್ ಅವರ ಸಂಗೀತ ಚಿತ್ರಕ್ಕಿದ್ದು ಏಪ್ರಿಲ್ ನಲ್ಲಿ ಆಡಿಯೋ ಬಿಡುಗಡೆಯಾಗಲಿದೆ. ಇದಕ್ಕಾಗಿ ಸೋನಿ ಮ್ಯೂಸಿಕ್ ಕಂಪನಿ ಭರ್ಜರಿ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ಬಹುಶಃ ಚಿತ್ರವೂ ಆದಷ್ಟು ಶೀಘ್ರ ತೆರೆಗೆ ಅಪ್ಪಳಿಸಲಿದೆ ಎನ್ನುತ್ತವೆ ಮೂಲಗಳು. (ಏಜೆನ್ಸೀಸ್)

English summary
Superstar Rajinikanth along with Tamil director KS Ravikumar watched the first edited copy of his upcoming Tamil period-drama Kochadaiyaan on Thursday in Chennai (February 28).
Please Wait while comments are loading...