»   » ಸೂಪರ್ ಸ್ಟಾರ್ ರಜನಿ 'ಲಿಂಗಾ' ಸ್ಟೋರಿಲೈನ್ ಲೀಕ್

ಸೂಪರ್ ಸ್ಟಾರ್ ರಜನಿ 'ಲಿಂಗಾ' ಸ್ಟೋರಿಲೈನ್ ಲೀಕ್

Posted By:
Subscribe to Filmibeat Kannada

ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ 'ಕೊಚ್ಚಾಡಿಯಾನ್' ಚಿತ್ರ ಮೇ 23ಕ್ಕೆ ತೆರೆಗೆ ಸುನಾಮಿ ತರಹ ಅಪ್ಪಳಿಸುತ್ತಿದೆ. ಇನ್ನೊಂದು ಕಡೆ ರಜನಿಕಾಂತ್ ಅವರು 'ಲಿಂಗಾ' ಎಂಬ ಚಿತ್ರದಲ್ಲಿ ಬಿಜಿಯಾಗಿದ್ದಾರೆ. ಕೆ.ಎಸ್.ರವಿಕುಮಾರ್ ಆಕ್ಷನ್, ಕಟ್ ಹೇಳುತ್ತಿರುವ ಈ ಚಿತ್ರವನ್ನು ರಾಕ್ ಲೈನ್ ವೆಂಕಟೇಶ್ ನಿರ್ಮಿಸುತ್ತಿದ್ದಾರೆ.

ರಜನಿ ಜೊತೆಗೆ ಸೋನಾಕ್ಷಿ ಸಿನ್ಹಾ, ಅನುಷ್ಕಾ ಶೆಟ್ಟಿ ಇಬ್ಬರು ಹೀರೋಯಿನ್ ಗಳು ತೆರೆ ಬೆಳಗಲಿದ್ದಾರೆ. ಈ ಚಿತ್ರದ ಬಗ್ಗೆ ಇತ್ತೀಚೆಗೆ ಸೋನಾಕ್ಷಿ ಸಿನ್ಹಾ ಮಾತನಾಡುತ್ತಾ 'ಲಿಂಗಾ' ಚಿತ್ರದ ಸ್ಟೋರಿ ಲೈನ್ ಬಗ್ಗೆ ಅಲ್ಪಸ್ವಲ್ಪ ವಿವರಗಳನ್ನು ಬಹಿರಂಗಪಡಿಸಿದ್ದಾರೆ. [ರಜನಿಯನ್ನು ಭೇಟಿಯಾಗಿ ನಲಿದಾಡಿದ ದೃಷ್ಟಿಹೀನರು]

Rajinikanth Lingaa

ಅವರು ಹೇಳಿರುವುದೇನೆಂದರೆ, "ಸುಮಾರು 400 ವರ್ಷಗಳ ಹಿಂದೆ ನಡೆದಂತಹ ನೈಜ ಘಟನೆ ಆಧಾರವಾಗಿ ಈ ಚಿತ್ರವನ್ನು ತೆರೆಗೆ ತರಲಾಗುತ್ತಿದೆ" ಎಂದಿದ್ದರು. ಸೋನಾಕ್ಷಿ ಈ ರೀತಿ ಹೇಳಿದ್ದೇ ತಡ ಸ್ಟೋರಿಲೈನ್ ಮೇಲೆ ನಾನಾ ವದಂತಿಗಳು ಹಬ್ಬಿವೆ.

ಈ ಚಿತ್ರದಲ್ಲಿ ಮುಳ್ಳಪೆರಿಯಾರ್ ಅಣೆಕಟ್ಟಿನ ಪ್ರಸ್ತಾವನೆ ಇರುತ್ತದೆ ಎಂಬ ಅನುಮಾನಗಳೂ ವ್ಯಕ್ತವಾಗುತ್ತಿವೆ. ಸುಮಾರು 400 ವರ್ಷಗಳ ಹಿಂದೆ ಬ್ರಿಟೀಷರು ನಿರ್ಮಿಸಿದ ಈ ಅಣೆಕಟ್ಟು ವಿಚಾರದಲ್ಲಿ ತಮಿಳುನಾಡು, ಕೇರಳ ರಾಜ್ಯಗಳ ನಡುವೆ ವಿವಾದ ಇನ್ನೂ ಜೀವಂತವಾಗಿದೆ. ಹಾಗಾಗಿ 'ಲಿಂಗಾ' ಚಿತ್ರ ಚರ್ಚೆಯ ವಸ್ತುವಾಗಿದೆ.

ಆದರೆ ಇದು ಎಷ್ಟರ ಮಟ್ಟಿಗೆ ಸತ್ಯ ಎಂಬುದು ಗೊತ್ತಾಗಬೇಕಾದರೆ ಚಿತ್ರ ಬಿಡುಗಡೆ ತನಕ ಕಾಯಲೇಬೇಕು. ಆಸ್ಕರ್ ಪ್ರಶಸ್ತಿ ಪುರಸ್ಕೃತ ಸಂಗೀತ ನಿರ್ದೇಶಕ ಎ.ಆರ್. ರೆಹಮಾನ್ ಸಂಗೀತ ಚಿತ್ರಕ್ಕಿದೆ. ಕೆ.ಎಸ್.ರವಿಕುಮಾರ್ ಹಾಗೂ ರಜನಿ ಕಾಂಬಿನೇಷನ್ ಎಂದರೆ ನಿರೀಕ್ಷೆಗಳು ಮುಗಿಲು ಮುಟ್ಟುತ್ತವೆ.

ಈ ಹಿಂದೆ ರಜನಿಕಾಂತ್ ಅವರ ಮುತ್ತು, ನರಸಿಂಹ ಸೂಪರ್ ಹಿಟ್ ಚಿತ್ರಗಳನ್ನು ಕೆ.ಎಸ್.ರವಿಕುಮಾರ್ ಕೊಟ್ಟಿದ್ದಾರೆ. ಈಗ ತೆರೆಕಾಣುತ್ತಿರುವ ಅನಿಮೇಷನ್ ಚಿತ್ರ 'ಕೊಚ್ಚಾಡಿಯಾನ್' ಕಥೆ ರವಿಕುಮಾರ್ ಅವರದು.

English summary
Superstar Rajinikanth's upcoming movie 'Lingaa' storyline inspired by 400 yrs real life incident. Sonakshi Sinha is all set to make her debut in South with this film and Anushka is also playing one of the lead roles. 
Please Wait while comments are loading...