ಮಂಡ್ಯ ಕೊನೆ ದಿನದ ಪ್ರಚಾರದಲ್ಲಿ ರಜನಿಕಾಂತ್?
Recommended Video
ಚುನಾವಣಾ ಪ್ರಚಾರದ ಭರಾಟೆ ಜೋರಾಗಿದೆ. ಅದರಲ್ಲೂ ರಾಜ್ಯದ ಗಮನ ಸೆಳೆದಿರುವ ಮಂಡ್ಯ ಚುನಾವಣಾ ಅಖಾಡ ಕಾದ ಕಾವಲಿಯಂತಾಗಿದೆ. 18ರಂದು ನಡೆಯುವ ಚುನಾವಣೆ ಹಿನ್ನಲೆ ಬಹಿರಂಗ ಪ್ರಚಾರಕ್ಕೆ ನಾಳೆ ಕೊನೆಯ ದಿನವಾಗಿದ್ದು ಮತದಾರರನ್ನು ಸೆಳೆಯುವ ಅಂತಿಮ ಹಂತದ ಕಸರತ್ತಿನಲ್ಲಿ ಅಭ್ಯರ್ಥಿಗಳು ಬ್ಯುಸಿಯಾಗಿದ್ದಾರೆ.
ಮಂಡ್ಯ ಜೆಡಿಎಸ್ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಪರ ಆಂಧ್ರ ಪ್ರದೇಶ ಸಿಎಂ ಚಂದ್ರಬಾಬು ನಾಯ್ಡು ಮತಯಾಚಿಸಲು ಮಂಡ್ಯ ಕಣಕ್ಕೆ ಎಂಟ್ರಿ ಕೊಡುತ್ತಿದ್ದಾರೆ. ಇತ್ತ ಸುಮಲತಾ ಪರ ಮತಯಾಚನೆ ಮಾಡಲು ಸೂಪರ್ ಸ್ಟಾರ್ ರಜನಿಕಾಂತ್ ಬರುತ್ತಿದ್ದಾರೆ ಎನ್ನುವ ಸುದ್ದಿ ಕೇಳಿ ಬರುತ್ತಿದೆ.
ಆದ್ರೀಗ ಈ ವಿಚಾರಕ್ಕೆ ಖುದ್ದು ಸುಮಲತಾ ಅವರೇ ಬ್ರೇಕ್ ಹಾಕಿದ್ದಾರೆ. ಮಂಚನಹಳ್ಳಿಯಲ್ಲಿ ಮಾತನಾಡಿದ ಸುಮಲತಾ "ಮಂಡ್ಯ ಪ್ರಚಾರಕ್ಕೆ ಆಗಲಿ ಅಥವಾ ಬಹಿರಂಗ ಸಭೆಗೆ ರಜನಿಕಾಂತ್ ಬರಲ್ಲ. ಪ್ರಚಾರ ವಿಚಾರವಾಗಿ ಅವರನ್ನು ಸಂಪರ್ಕ ಮಾಡಿಲ್ಲ" ಎಂದು ಸುಮಲತಾ ಸ್ಪಷ್ಟಪಡಿಸಿದ್ದಾರೆ.

ಈಗಾಗಲೆ ನಟ ದರ್ಶನ್ ಮತ್ತು ಯಶ್ ಇಬ್ಬರು ಸುಮಲತಾ ಪರ ಮತಯಾಚನೆ ಮಾಡುತ್ತಿದ್ದಾರೆ. ಮತದಾರರನ್ನು ಓಲೈಸಲು ಇಂದು ಮತ್ತು ನಾಳೆ ಎರಡೇ ದಿನಗಳಿದೆ. ನಾಳೆ ನಡೆಯಲಿರುವ ಬಹಿರಂಗ ಸಭೆಯಲ್ಲಿ ಯಶ್, ದರ್ಶನ್ ಅಭಿಷೇಕ್ ಸೇರಿದಂತೆ ನೂರಾರು ಸಂಖ್ಯೆಯ ಬೆಂಬಲಿಗರು ಭಾಗವಹಿಸಲಿದ್ದಾರೆ.


Click it and Unblock the Notifications











