»   » ಕಾವೇರಿ ವಿವಾದ: ವಾಟಾಳ್ ಹೇಳಿಕೆಗೆ ರಜನಿಕಾಂತ್ ಕೊಟ್ಟ ಉತ್ತರ ನೋಡಿ

ಕಾವೇರಿ ವಿವಾದ: ವಾಟಾಳ್ ಹೇಳಿಕೆಗೆ ರಜನಿಕಾಂತ್ ಕೊಟ್ಟ ಉತ್ತರ ನೋಡಿ

Posted By:
Subscribe to Filmibeat Kannada

ಕಾವೇರಿ ನದಿ ನೀರು ನಿರ್ವಹಣೆ ಮಂಡಳಿಯನ್ನು ಕೇಂದ್ರ ಸರಕಾರ ರಚಿಸಬೇಕು ಎಂದು ಆಗ್ರಹಿಸಿ ತಮಿಳುನಾಡು ಪ್ರತಿಭಟನೆ ನಡೆಸುತ್ತಿದೆ. ಅದೇ ರೀತಿ ತಮಿಳುನಾಡು ಪ್ರತಿಭಟನೆಯನ್ನ ಖಂಡಿಸಿ ಎಂದು ಕರ್ನಾಟಕದಲ್ಲಿ ಕನ್ನಡ ಪರ ಸಂಘಟನೆಗಳು ಪ್ರತಿಭಟನೆ ಹೋರಾಟ ಮಾಡುತ್ತಿದ್ದಾರೆ.

ಇತ್ತೀಚಿಗಷ್ಟೆ ಕನ್ನಡ ಹೋರಾಟಗಾರ ವಾಟಾಳ್ ನಾಗರಾಜ್ ಮಾತನಾಡಿ ''ಸೂಪರ್ ಸ್ಟಾರ್ ರಜನಿಕಾಂತ್ ಮತ್ತು ಕಮಲ್ ಹಾಸನ್ ಅವರ ಚಿತ್ರಗಳನ್ನ ಕರ್ನಾಟಕದಲ್ಲಿ ಬಿಡುಗಡೆ ಮಾಡಲು ಬಿಡುವುದಿಲ್ಲ'' ಎಂದಿದ್ದರು.

ಇದಕ್ಕೀಗ ತಮಿಳು ನಟ ರಜನಿಕಾಂತ್ ಪ್ರತಿಕ್ರಿಯಿಸಿದ್ದಾರೆ. ಕಾವೇರಿ ನದಿ ನೀರು ವಿವಾದಕ್ಕೆ ಸಂಬಂಧಿಸಿದಂತೆ ತಮಿಳುನಾಡು ಚಿತ್ರ ನಟರ ಸಂಘದ ವತಿಯಿಂದ ಭಾನುವಾರ ಪ್ರತಿಭಟನೆ ನಡೆಸಲಾಯಿತು. ಇದಕ್ಕು ಮುಂಚೆ ಮಾಧ್ಯಮಗಳ ಜೊತೆ ಮಾತನಾಡಿದ ರಜಿನಿ, ವಾಟಾಳ್ ಅವರ ಹೇಳಿಕೆಗೆ ತಮ್ಮದೇ ಸ್ಟೈಲ್ ನಲ್ಲಿ ಉತ್ತರಿಸಿದ್ದಾರೆ. ಅಷ್ಟಕ್ಕೂ, ರಜನಿ ಏನಂದ್ರು.? ಮುಂದೆ ಓದಿ.....

ಕರ್ನಾಟಕ ಸರ್ಕಾರದ ಮೇಲೆ ನಂಬಿಕೆ ಇದೆ

''ಕರ್ನಾಟಕದಲ್ಲಿ ನನ್ನ ಸಿನಿಮಾ ರಿಲೀಸ್ ಮಾಡಲು ಬಿಡುವುದಿಲ್ಲ ಎಂದು ಹೋರಾಟಗಾರರು ಹೇಳಿದ್ದಾರೆ. ನಾವು ಏನೂ ತಪ್ಪು ಮಾಡಿಲ್ಲ. ನ್ಯಾಯಕ್ಕಾಗಿ ಹೋರಾಟ ಮಾಡುತ್ತಿದ್ದೇವೆ. ರಿಲೀಸ್ ಗೆ ಸಂಕಷ್ಟ ಎದುರಾದರೇ ನಿರ್ಮಾಪಕರು ನೋಡಿಕೊಳ್ಳುತ್ತಾರೆ. ಅದನ್ನ ಮೀರಿ ಕಾನೂನು ಎಂಬುದು ಒಂದಿದೆ. ಕರ್ನಾಟಕ ಸರ್ಕಾರ ಖಂಡಿತವಾಗಿ ಭದ್ರತೆ ನೀಡ್ತಾರೆ ಎಂಬುದು ನನಗೆ ನಂಬಿಕೆ ಇದೆ'' ಎಂದಿದ್ದಾರೆ.

ಐಪಿಎಲ್ ಪಂದ್ಯಗಳನ್ನ ರದ್ದುಗೊಳಿಸಬೇಕು

ತಮಿಳುನಾಡಿನಲ್ಲಿ ರೈತರು ನೀರಿಗಾಗಿ ಪ್ರತಿಭಟನೆ ಮಾಡುತ್ತಿರುವ ವೇಳೆ ಐಪಿಎಲ್ ಅಂತಹ ಮನರಂಜನೆ ಆಟವನ್ನ ರದ್ದುಗೊಳಿಸಬೇಕು ಎಂದು ಕೆಲವರು ಬೇಡಿಕೆ ಇಟ್ಟಿದ್ದಾರೆ. ಇದಕ್ಕೆ ಪ್ರತಿಕ್ರಿಯೆ ನೀಡಿದ ರಜನಿಕಾಂತ್ ''ಚೆನ್ನೈ ಸೂಪರ್ ಕಿಂಗ್ ತಂಡ ಪಂದ್ಯಗಳನ್ನ ನಿಲ್ಲಿಸಿದ್ರೆ ಸಂತೋಷ. ಅಥವಾ ಒಂದು ವೇಳೆ ಚೆನ್ನೈನಲ್ಲಿ ಪಂದ್ಯಾವಳಿಯನ್ನು ನಿಲ್ಲಿಸಲು ಆಗದಿದ್ದರೂ ಆಟಗಾರರು ರೈತರ ಬೆಂಬಲಕ್ಕೆ ನಿಲ್ಲಬೇಕು. ಚೆನ್ನೈ ಸೂಪರ್‌ ಕಿಂಗ್ಸ್ ಆಟಗಾರರು ನಿಲ್ಲಬೇಕು. ಇದಕ್ಕಾಗಿ ಪಂದ್ಯ ಆಡುವ ವೇಳೆ ಆಟಗಾರರು, ಪ್ರೇಕ್ಷಕರು ಕಪ್ಪು ಪಟ್ಟಿ ಧರಿಸಬೇಕು ಎಂದು ಆಗ್ರಹಿಸಿದರು.

ಕಾವೇರಿ ತೀರ್ಪು: ರಜನಿಕಾಂತ್ ಟ್ವೀಟ್ ಗೆ ಕನ್ನಡಿಗರ ಆಕ್ರೋಶ

ರಜನಿಯ ಎರಡು ಸಿನಿಮಾಗಳು ರೆಡಿ

ಸದ್ಯ ರಜನಿಕಾಂತ್ ಅಭಿನಯದ ಎರಡು ಸಿನಿಮಾಗಳು ರಿಲೀಸ್ ಗೆ ರೆಡಿಯಾಗಿವೆ. ಪಾ ರಂಜಿತ್ ನಿರ್ದೇಶನ ಹಾಗೂ ಧನುಶ್ ನಿರ್ಮಾಣದ ಕಾಲ ಕರಿಕಾಳನ್ ಸಿನಿಮಾ ಇದೇ ತಿಂಗಳು ತೆರೆಗೆ ಬರುವ ಸಾಧ್ಯತೆ ಇದೆ. ಅದಾದ ಬಳಿಕ ಶಂಕರ್ ನಿರ್ದೇಶನದಲ್ಲಿ ರಜನಿಕಾಂತ್ ಮತ್ತು ಅಕ್ಷಯ್ ಕುಮಾರ್ ಅಭಿನಯದ 2.0 ಚಿತ್ರವೂ ತೆರೆಕಾಣಬೇಕಿದೆ. ಈ ಚಿತ್ರಗಳಿಗೆ ಕಷ್ಟವಾಗಬಹುದು ಎಂಬ ಲೆಕ್ಕಾಚಾರ ಈಗ ಇಂಡಸ್ಟ್ರಿಯಲ್ಲಿದೆ.

'ಕುಚೇಲನ್' ಚಿತ್ರಕ್ಕೆ ಸಂಕಷ್ಟವಾಗಿತ್ತು

ಇದಕ್ಕೂ ಮುಂಚೆ ಹೋಗೆನೇಕಲ್ ಯೋಜನೆಗೆ ಸಂಬಂಧ ಪಟ್ಟಂತೆ ಕರ್ನಾಟಕ ಪ್ರತಿಭಟನಾಕಾರರ ವಿರುದ್ಧ ಹೇಳಿಕೆ ನೀಡಿದ್ದ ರಜನಿಯ ಕುಚೇಲನ್ ಚಿತ್ರವನ್ನ ನಿಷೇಧ ಮಾಡಿದ್ದರು. ನಂತರ ರಜನಿಕಾಂತ್ ಬಹಿರಂಗವಾಗಿ ಕ್ಷಮೆ ಕೇಳಿದ್ದರು. ಆಮೇಲೆ, ಸಿನಿಮಾ ಕರ್ನಾಟಕದಲ್ಲಿ ಬಿಡುಗಡೆಯಾಗಿತ್ತು.

ರಜನಿಯ '2.0' ಟೀಸರ್ ಲೀಕ್: ಬಹುತೇಕ ದೃಶ್ಯಗಳು ಬಹಿರಂಗ

English summary
''I am confident Karnataka government will give security to my films'' says Super star rajinikanth. Pro-Kannada activists have threatened not to allow the release of Rajinikanth and Kamal Haasan films in theatres across Karnataka.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X