»   » 'ಕಬಾಲಿ' ತಣ್ಣಗಾಯ್ತು: ರಜನಿ ಚೆನ್ನೈಗೆ ವಾಪಸ್ ಬಂದ್ರು.!

'ಕಬಾಲಿ' ತಣ್ಣಗಾಯ್ತು: ರಜನಿ ಚೆನ್ನೈಗೆ ವಾಪಸ್ ಬಂದ್ರು.!

Posted By:
Subscribe to Filmibeat Kannada

ವಿಶ್ವದಾದ್ಯಂತ 'ಕಬಾಲಿ'...'ಕಬಾಲಿ' ಅಂತ ಎಲ್ಲರೂ ಜಪ-ತಪ ಮಾಡ್ತಿದ್ರೆ, ಸೂಪರ್ ಸ್ಟಾರ್ ರಜನಿಕಾಂತ್ ಮಾತ್ರ ಅಮೇರಿಕಾದಲ್ಲಿದ್ರು.

ಹಾಗ್ನೋಡಿದ್ರೆ, ತಿಂಗಳ ಹಿಂದೆಯೇ ಪುತ್ರಿ ಐಶ್ವರ್ಯ ಧನುಷ್ ಜೊತೆ 'ತಲೈವಾ' ರಜನಿಕಾಂತ್ ಅಮೇರಿಕಾಗೆ ಹಾರಿದ್ರು. 'ಕಬಾಲಿ' ಆಡಿಯೋ ರಿಲೀಸ್ ಸಮಾರಂಭಕ್ಕೂ ರಜನಿ ಮಿಸ್ ಆಗಿದ್ರು. 'ಕಬಾಲಿ' ರಿಲೀಸ್ ಸಂದರ್ಭದಲ್ಲೂ ಭಾರತದಲ್ಲಿ ಇರ್ಲಿಲ್ಲ. [ಚಿತ್ರ ವಿಮರ್ಶೆ: 'ಕಬಾಲಿ ಡಾ', 'ನೆರಪ್ಪು ಡಾ' ತುಂಬಾ ನಿಧಾನ ಡಾ.!]

'ಕಬಾಲಿ' ಚಿತ್ರದ ಪೈರಸಿ ಪೆಡಂಭೂತದ ಬಗ್ಗೆ ನಿರ್ಮಾಪಕ ಕಲೈಪುಲಿ.ಎಸ್.ಧನು ಮತ್ತು ನಿರ್ದೇಶಕ ಪಾ.ರಂಜಿತ್ ತಲೆ ಕೆಡಿಸಿಕೊಂಡು ಕೋರ್ಟ್-ಕಟ್ಟಲೆ ಅಂತ ಓಡಾಡುತ್ತಿದ್ದರೂ, ರಜನಿ ಮಾತ್ರ ತುಟಿ ಎರಡು ಮಾಡಿರ್ಲಿಲ್ಲ. ಮುಂದೆ ಓದಿ....

ರಜನಿ ವಾಪಸ್ ಬಂದಿದ್ದಾರೆ

ಸುಮಾರು ಒಂದು ತಿಂಗಳ ಕಾಲ ಅಮೇರಿಕಾದಲ್ಲಿ ತಂಗಿದ್ದ ರಜನಿಕಾಂತ್ ನಿನ್ನೆ ಸಂಜೆ ಚೆನ್ನೈ ವಾಪಸ್ ಬಂದಿಳಿದಿದ್ದಾರೆ. [40 ದೇಶಗಳಲ್ಲಿ ರಜನಿ ಕಬಾಲಿ ಕ್ರೇಜ್ ಸೂಪರ್ ಡಾ]

ಅಮೇರಿಕಾದಲ್ಲೇ ಚಿತ್ರ ವೀಕ್ಷಣೆ

ಜುಲೈ 21 ರಂದು ಅಮೇರಿಕಾದಲ್ಲೇ, ತಮ್ಮ ಆಪ್ತರ ಜೊತೆಗೆ ರಜನಿಕಾಂತ್ 'ಕಬಾಲಿ' ಚಿತ್ರವನ್ನ ವೀಕ್ಷಿಸಿದರು. ['ಕಬಾಲಿ' ಇಡೀ ಸಿನಿಮಾ ಇಂದು ಆನ್ ಲೈನ್ ನಲ್ಲೂ ಬಿಡುಗಡೆ.!]

ಅಮೇರಿಕಾದಲ್ಲಿ ಏನ್ಮಾಡ್ತಿದ್ರು.?

ಅಮೇರಿಕಾದ ವರ್ಜೀನಿಯಾದಲ್ಲಿ ಇರುವ ಗುರು ಸಚ್ಚಿದಾನಂದ ರವರ 'Lotus all faiths temple'ನ 30ನೇ ವಾರ್ಷಿಕೋತ್ಸವ ಸಮಾರಂಭದಲ್ಲಿ ಪುತ್ರಿ ಐಶ್ವರ್ಯ ಧನುಷ್ ಜೊತೆ ರಜನಿಕಾಂತ್ ಭಾಗವಹಿಸಿದ್ದರು.

ರಜನಿ ಆರೋಗ್ಯ ಹೇಗಿದೆ.?

ರಜನಿ ಆರೋಗ್ಯದಲ್ಲಿ ಕೊಂಚ ಏರುಪೇರಾಗಿರುವ ಕಾರಣ ಅಮೇರಿಕಾದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಅಂತ ಕೆಲ ಪತ್ರಿಕೆಗಳು ವರದಿ ಮಾಡಿತ್ತು. ಆದ್ರೆ, ರಜನಿ ಆರೋಗ್ಯವಾಗಿದ್ದಾರೆ ಅಂತ ಅವರ ಕುಟುಂಬದ ಮೂಲಗಳು ತಿಳಿಸಿವೆ.

ಮುಂದೆ..?

ಆಗಸ್ಟ್ ಮೊದಲ ವಾರದಿಂದ ತಮಿಳು ಸಿನಿಮಾ '2.0' ಶೂಟಿಂಗ್ ನಲ್ಲಿ ರಜನಿಕಾಂತ್ ಭಾಗವಹಿಸಲಿದ್ದಾರೆ.

English summary
According to the reports, Super Star Rajinikanth has returned back to Chennai after a month long vacation in America.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada