For Quick Alerts
  ALLOW NOTIFICATIONS  
  For Daily Alerts

  ಕಬಾಲಿ ದಾಖಲೆ: ರಿಲೀಸ್ ಗೂ ಮುನ್ನ 200 ಕೋಟಿ ಕಲೆಕ್ಷನ್.?

  By ಸುನಿ
  |

  ತಮಿಳು ಚಿತ್ರರಂಗದ 'ದಿ ಲೆಜೆಂಡ್', 'ತಲೈವರ್' ರಜನಿಕಾಂತ್ ಅವರ 'ಕಬಾಲಿ' ಎಂಬ ಅಗ್ನಿ ಎಲ್ಲಾ ಕಡೆ ಕಾಡ್ಗಿಚ್ಚಿನಂತೆ ಹತ್ತಿ, ಹೊತ್ತಿ ಉರಿಯುತ್ತಿದೆ. ಬರೀ ತಮಿಳುನಾಡು ಜನತೆ ಮಾತ್ರವಲ್ಲದೇ ಇಡೀ ವಿಶ್ವದಾದ್ಯಂತ ರಜನಿಕಾಂತ್ ಅಭಿಮಾನಿಗಳು 'ಕಬಾಲಿ' ನೋಡಲು ತುದಿಗಾಲಲ್ಲಿ ನಿಂತಿದ್ದಾರೆ. ಅಂತೂ ಎಲ್ಲಾ ಕಡೆ ರಜನಿ ಹವಾ ಬಲು ಜೋರಾಗೇ ಇದೆ.

  'ಕಬಾಲಿ' ತೆರೆ ಕಾಣಲು ಇನ್ನೇನು ಮೂರೇ ದಿನಗಳು ಬಾಕಿ ಉಳಿದಿದ್ದು, ಜುಲೈ 22ರಂದು ತೆರೆಗೆ ಅಪ್ಪಳಿಸುತ್ತಿದೆ. ಆ ದಿನದಂದು ಚೆನ್ನೈನಲ್ಲಿ ಹಬ್ಬದ ವಾತಾವರಣ ಸೃಷ್ಟಿಯಾಗಲಿದ್ದು, ಆ ದಿನ ಕೆಲವು ಕಂಪನಿ ಕೆಲಸಗಾರರಿಗೂ ರಜೆ ಘೋಷಣೆ ಮಾಡಲಾಗಿದೆ.[ಅಮೆರಿಕದಲ್ಲಿ ಕಬಾಲಿ ಟಿಕೆಟ್ 2 ಗಂಟೆಯಲ್ಲಿ ಸೋಲ್ಡ್ ಔಟ್]

  ಸೂಪರ್ ಸ್ಟಾರ್ ರಜನಿಕಾಂತ್ ಅವರು 'ಕಬಾಲಿ' ಮೂಲಕ ಮತ್ತೆ ತಮ್ಮ ಹಳೇ ಸ್ಟೈಲ್ ಗೆ ಮರಳಿದ್ದು, ಈ ಬಾರಿ 'ಕಬಾಲಿ' ಮೂಲಕ 'ತಲೈವರ್' ಅಭಿಮಾನಿಗಳಿಗೆ ಮತ್ತೆ 'ಬಾಷಾ' ಖದರ್, 'ಬಾಷಾ' ಸ್ಟೈಲ್, 'ಬಾಷಾ' ಡೈಲಾಗ್ ಕಾಣ ಸಿಗಲಿದೆ.

  ಅಂದಹಾಗೆ ಚಿತ್ರರಂಗದ ಇತಿಹಾಸದಲ್ಲಿಯೇ ಇದುವರೆಗೂ ಯಾವ ಸಿನಿಮಾ ಕೂಡ ಮಾಡದ ರೀತಿಯಲ್ಲಿ 'ಕಬಾಲಿ' ದಾಖಲೆ ಹುಟ್ಟುಹಾಕಿದ್ದು, ಬಿಡುಗಡೆಗೆ ಮುನ್ನವೇ ಬರೋಬ್ಬರಿ 200 ಕೋಟಿ ರೂಪಾಯಿವರೆಗೆ ಕಮಾಯಿಸಿದೆ. ಅದು ಹೇಗಪ್ಪಾ ಅಂತ ಯೋಚನೆ ಮಾಡುತ್ತೀದ್ದೀರಾ, ಹಾಗಿದ್ರೆ ಕೆಳಗಿನ ಸ್ಲೈಡ್ಸ್ ಕ್ಲಿಕ್ಕಿಸಿ...

  ಬಿಡುಗಡೆಗೆ ಮುನ್ನ 220 ಕೋಟಿ ಸಂಪಾದನೆ

  ಬಿಡುಗಡೆಗೆ ಮುನ್ನ 220 ಕೋಟಿ ಸಂಪಾದನೆ

  ಸೂಪರ್ ಸ್ಟಾರ್ ರಜನಿಕಾಂತ್ ಅವರ ಸಿನಿಮಾ ಎಂದ ಕೂಡಲೇ ವಿತರಣೆ ಮಾಡಲು ಎಲ್ಲರೂ ಪೈಪೋಟಿಯಲ್ಲಿ ಮುಂದೆ ಬರುತ್ತಾರೆ. ಅಂತೆಯೇ ದೇಶ-ವಿದೇಶದಲ್ಲಿ ಚಿತ್ರದ ವಿತರಣಾ ಹಕ್ಕು ಅತ್ಯಂತ ದೊಡ್ಡ ಮೊತ್ತಕ್ಕೆ ಸೇಲ್ ಆಗಿರುವುದರಿಂದ ಒಟ್ಟು ಮೊತ್ತ ಬರೋಬ್ಬರಿ 220 ಕೋಟಿ ರೂಪಾಯಿ ಇರಬಹುದು ಎಂದು ಅಂದಾಜಿಸಲಾಗಿದೆ.[ರಜನಿಗೆ SMS ಕಳುಹಿಸಲು ಏರ್ ಟೆಲ್ ನಿಂದ ವಿಶೇಷ ಕೂಪನ್]

  ತಮಿಳುನಾಡಿನಾದ್ಯಂತ 68 ಕೋಟಿಗೆ ಸೇಲ್

  ತಮಿಳುನಾಡಿನಾದ್ಯಂತ 68 ಕೋಟಿಗೆ ಸೇಲ್

  ಪಾ.ರಂಜಿತ್ ನಿರ್ದೇಶನದ 'ಕಬಾಲಿ' ತಮಿಳುನಾಡಿನಾದ್ಯಂತ ಬರೋಬ್ಬರಿ 68 ಕೋಟಿ ರೂಪಾಯಿ ಮೊತ್ತಕ್ಕೆ ಹಂಚಿಕೆಯಾಗಿದ್ದು, ಬರೀ ಚೆನ್ನೈನ ಚೆಂಗಲ್ ಪೇಟೆಯಲ್ಲಿಯೇ ಭರ್ತಿ 18 ಕೋಟಿ ರೂಪಾಯಿಗೆ 'ಕಬಾಲಿ' ವಿತರಣೆಯಾಗಿದೆ.['ಕಬಾಲಿ' ಸೆನ್ಸಾರ್ ಆಯ್ತು: ರಿಲೀಸ್ ಡೇಟ್ ಕೂಡ ಫಿಕ್ಸ್ ಆಯ್ತು.!]

  ಆಂಧ್ರಪ್ರದೇಶ ಮತ್ತು ತೆಲಂಗಾಣ

  ಆಂಧ್ರಪ್ರದೇಶ ಮತ್ತು ತೆಲಂಗಾಣ

  ಆಂಧ್ರಪ್ರದೇಶ ಮತ್ತು ತೆಲಂಗಾಣದಲ್ಲಿ 'ಕಬಾಲಿ' ವಿತರಣಾ ಹಕ್ಕನ್ನು 'ಶಣ್ಮುಗ ಫಿಲ್ಮ್ಸ್' ವಹಿಸಿಕೊಂಡಿದ್ದು, ಬರೋಬ್ಬರಿ 32 ಕೋಟಿ ರೂಪಾಯಿ ಕೊಟ್ಟು ಚಿತ್ರದ ವಿತರಣಾ ಹಕ್ಕನ್ನು ಪಡೆದುಕೊಂಡಿದೆ.[ಅಂದಿನ ಬಸ್ ಕಂಡಕ್ಟರ್ ಇಂದು ವಿಮಾನದ ಮೇಲೆ ಜಾಹೀರಾತಾದ್ರು]

  ಕರ್ನಾಟಕ ಮತ್ತು ಕೇರಳ

  ಕರ್ನಾಟಕ ಮತ್ತು ಕೇರಳ

  ಕರ್ನಾಟಕ ಮತ್ತು ಕೇರಳ ಜಂಟಿಯಾಗಿ ಸುಮಾರು 17.5 ಕೋಟಿ ರೂಪಾಯಿ ಮೊತ್ತಕ್ಕೆ ಚಿತ್ರದ ವಿತರಣಾ ಹಕ್ಕನ್ನು ಪಡೆದುಕೊಂಡಿದೆ. ಫಾಕ್ಸ್ ಸ್ಟಾರ್ ಇಂಡಿಯಾ ಉತ್ತರ ಭಾರತದಲ್ಲಿ ಸಿನಿಮಾ ಪ್ರದರ್ಶನ ಮಾಡಲು ಸುಮಾರು 15.5 ಕೋಟಿ ರೂಪಾಯಿ ಕೊಟ್ಟು 'ಕಬಾಲಿ' ವಿತರಣಾ ಹಕ್ಕನ್ನು ಖರೀದಿ ಮಾಡಿದೆ.

  ವಿದೇಶದಲ್ಲಿ.?

  ವಿದೇಶದಲ್ಲಿ.?

  ನಿರ್ಮಾಪಕ 'ಕಲೈಪುಲಿ' ಎಸ್ ಥನು ಬಂಡವಾಳ ಹೂಡಿರುವ 'ಕಬಾಲಿ' ಚಿತ್ರವನ್ನು ಮಲೇಷ್ಯಾದಲ್ಲಿ ಪ್ರದರ್ಶನ ಮಾಡಲು ಸುಮಾರು 10 ಕೋಟಿ ರೂಪಾಯಿ ಕೊಟ್ಟು ವಿತರಣಾ ಹಕ್ಕು ಖರೀದಿ ಮಾಡಲಾಗಿದೆ. ಯುಎಸ್ಎ ಮತ್ತು ಕೆನಡಾದಲ್ಲಿ ಸುಮಾರು 8.5 ಕೋಟಿ ರೂಪಾಯಿಗೆ ವಿತರಣಾ ಹಕ್ಕು ಸೋಲ್ಡ್ ಔಟ್ ಆಗಿದೆ.

  ಸ್ಯಾಟಲೈಟ್ ಮತ್ತು ಮ್ಯೂಸಿಕ್

  ಸ್ಯಾಟಲೈಟ್ ಮತ್ತು ಮ್ಯೂಸಿಕ್

  'ಕಬಾಲಿ' ಚಿತ್ರದ ಸ್ಯಾಟಲೈಟ್ ಮತ್ತು ಮ್ಯೂಸಿಕ್ ಹಕ್ಕನ್ನು 'ಜಯ' ಟಿವಿ ಪಡೆದುಕೊಂಡಿದೆ. ಭರ್ತಿ 40 ಕೋಟಿ ರೂಪಾಯಿಗೆ 'ಕಬಾಲಿ' ಸ್ಯಾಟಲೈಟ್ ಮತ್ತು ಮ್ಯೂಸಿಕ್ ಹಕ್ಕು ಸೇಲ್ ಆಗಿದೆ.

  ಬಜೆಟ್ ಗಿಂತ ಜಾಸ್ತಿ ಕಮಾಯಿಸಿದ 'ಕಬಾಲಿ'

  ಬಜೆಟ್ ಗಿಂತ ಜಾಸ್ತಿ ಕಮಾಯಿಸಿದ 'ಕಬಾಲಿ'

  ಒಟ್ಟಾಗಿ 'ಕಬಾಲಿ' ರಿಲೀಸ್ ಗೆ ಮುನ್ನವೇ ಬರೋಬ್ಬರಿ 200 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಅಂತೂ ಚಿತ್ರದ ನಿರ್ಮಾಣಕ್ಕೆ ಹಾಕಿದ ಬಜೆಟ್ ಗಿಂತ ಜಾಸ್ತಿ ಚಿತ್ರದ ವಿತರಣೆಯ ಮೂಲಕ ವಾಪಸ್ ಬಂದಿದೆ. ಅಂದಹಾಗೆ 'ಕಬಾಲಿ' ಚಿತ್ರದ ಬಜೆಟ್ 120 ಕೋಟಿ ರೂಪಾಯಿ.

  ನಾಯಿಮರಿಗೆ 'ಕಬಾಲಿ' ಎಂದು ನಾಮಕರಣ

  ನಾಯಿಮರಿಗೆ 'ಕಬಾಲಿ' ಎಂದು ನಾಮಕರಣ

  ರಜನಿ ಅಭಿಮಾನಿಗಳ 'ಕಬಾಲಿ' ಕ್ರೇಜ್ ಹೇಗಿದೆ ಅನ್ನೋದಕ್ಕೆ ಇದು ಉತ್ತಮ ಉದಾಹರಣೆ. ಚೆನ್ನೈ ಮೂಲದ ಶಿವ ಎನ್ನುವವರ ಮನೆಯ ಸದಸ್ಯನಂತಿರುವ ನಾಯಿಯೊಂದು ಮರಿ ಹಾಕಿದ್ದು, ಇದೀಗ ಆ ನಾಯಿಮರಿಗೆ 'ಕಬಾಲಿ' ಎಂದು ನಾಮಕರಣ ಮಾಡಿದ್ದಾರೆ. ಅಂದಹಾಗೆ ಶಿವ ಅವರ ಇಡೀ ಕುಟುಂಬವೇ 'ತಲೈವರ್' ರಜನಿಕಾಂತ್ ಅವರ ಕಟ್ಟಾ ಅಭಿಮಾನಿಗಳಂತೆ.

  English summary
  Pre-release businesses ever in Rajinikanth's Tamil movie 'Kabali' has reportedly fetched over 220 Crore rupees. Actress Radhika Apte, Actress Dhansika, Actor Kishore in the lead role. The movie is directed by Pa.Ranjith.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X