»   » ಜೇಮ್ಸ್ ಬಾಂಡ್ ಕಾರು ಕದ್ದ ಸೂಪರ್ ಸ್ಟಾರ್ ರಜಿನಿಕಾಂತ್

ಜೇಮ್ಸ್ ಬಾಂಡ್ ಕಾರು ಕದ್ದ ಸೂಪರ್ ಸ್ಟಾರ್ ರಜಿನಿಕಾಂತ್

Posted By:
Subscribe to Filmibeat Kannada

ಕಾಲಿವುಡ್ ಚಿತ್ರರಂಗ ಕ್ಷೇತ್ರದ ಸೂಪರ್ ಸ್ಟಾರ್ ರಜನಿಕಾಂತ್ ಅವರ ಬಹುನಿರೀಕ್ಷಿತ ಚಿತ್ರ 'ಕಬಾಲಿ' ಶೂಟಿಂಗ್ ಹಂತದಲ್ಲಿರುವ ವಿಚಾರ ನಿಮಗೆ ಗೊತ್ತೇ ಇದೆ. ಜೊತೆಗೆ ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಗಳ ಮೂಲಕ ಕೂಡ ಸಿನಿಮಾ ಸಖತ್ ಸೌಂಡ್ ಮಾಡುತ್ತಿದೆ.

ಅಂದಹಾಗೆ ರಜಿನಿಕಾಂತ್ ಅವರ 'ಕಬಾಲಿ' ಚಿತ್ರದ ಪೋಸ್ಟರ್ ಗಳನ್ನು ನೋಡುತ್ತಿದ್ದರೆ, ಹಾಲಿವುಡ್ ಚಿತ್ರಗಳ ಪೋಸ್ಟರ್ ಗಳನ್ನು ಕಾಪಿ ಮಾಡಿದ್ದಾರೆಯೇ ಅಥವಾ ಹಾಲಿವುಡ್ ಚಿತ್ರಗಳ ರೀಮೇಕ್ ಮಾಡಿರಬಹುದೇ? ಅಂತ ಸಿನಿಪಂಡಿತರಿಗೆ ಅನುಮಾನ ಮೂಡುವಂತಹ ಪೋಸ್ಟರ್ ಗಳು ಚಿತ್ರದಲ್ಲಿವೆ.[ರಜನಿಕಾಂತ್ 'ಕಬಾಲಿ' ಚಿತ್ರಕಥೆ ಹೇಳ್ತೀವಿ ಕೇಳಿ!]

Rajinikanth's 'Kabali' poster copied

ಹಾಲಿವುಡ್ ಹಾರರ್ ಚಿತ್ರ 'ಟಿಕ್ ಟಿಕ್' ನಂತಹದೇ ಒಂದು ಪೋಸ್ಟರ್ ಕೂಡ 'ಕಬಾಲಿ'ಯಲ್ಲಿದೆ. ಇದೀಗ ಇನ್ನೊಂದು ಹೊಸ ಪೋಸ್ಟರ್ ರಿಲೀಸ್ ಆಗಿದ್ದು, ಅದು ಕೂಡ ಹಾಲಿವುಡ್ ಚಿತ್ರದ ಪೋಸ್ಟರನ್ನೇ ಹೋಲುತ್ತಿದೆ.[ಅರವತ್ತೈದನೇ ಹುಟ್ಟುಹಬ್ಬಕ್ಕೆ ರಜನಿಯ ಆರು ಸ್ಟೈಲುಗಳು]

Rajinikanth's 'Kabali' poster copied

ಹಾಲಿವುಡ್ ನ ಖ್ಯಾತ ನಟ ಜೇಮ್ಸ್ ಬಾಂಡ್ ಅವರ ಆಸ್ಟೀನ್ ಮಾರ್ಟಿನ್ ಕಾರು ಮತ್ತು ಕೈಯಲ್ಲಿ ಪಿಸ್ತೂಲ್ ಹಿಡಿದು ಅದಕ್ಕೆ ಒರಗಿ ನಿಂತಿರುವ ಜೇಮ್ಸ್ ಬಾಂಡ್ ಅವರ ಸರಣಿ ಚಿತ್ರಗಳನ್ನು ಮಾಡುವ ಹಾಲಿವುಡ್ ನಟ ಡೇನಿಯಲ್ ಕ್ರೇಗ್ ಬಾಂಡ್ ಅವರ ಥರಾನೇ ರಜಿನಿಕಾಂತ್ ಅವರು ಕೂಡ ಹೊಸ ಪೋಸ್ಟರ್ ನಲ್ಲಿ ಪೋಸ್ ನೀಡಿದ್ದಾರೆ.[ಕ್ರೇಗ್ ಮತ್ತೆ ಸೂಪರ್ ಏಜೆಂಟ್ ಜೇಮ್ಸ್ ಬಾಂಡ್]

Rajinikanth's 'Kabali' poster copied

ಈಗಾಗಲೇ ಬಿಡುಗಡೆ ಆಗಿರುವ ಹೊಸದಾದ 'ಕಬಾಲಿ' ಪೋಸ್ಟರ್ ನಲ್ಲಿ ರಜಿನಿಕಾಂತ್ ಅವರ ಈ ಪೋಸ್ ಕೂಡ ಹಾಲಿವುಡ್ ಚಿತ್ರಗಳ ಪೋಸ್ಟರ್ ಗಳನ್ನು ಕಾಪಿ ಮಾಡಿದಂತಿದೆ. ಇನ್ನು ರಜಿನಿಕಾಂತ್ ಅವರು ಒರಗಿ ನಿಂತಿರುವ ಕಾರು ಕೂಡ ಜೇಮ್ಸ್ ಬಾಂಡ್ ಅವರದು. ಅಂತೂ ಪೋಸ್ಟರ್ ಕದ್ದಿದ್ದಾರೆ ಅಂತಾಯ್ತು.[ಶಿವಣ್ಣ 'ಶಿವಲಿಂಗ' ಮೇಲೆ ಸೂಪರ್ ಸ್ಟಾರ್ ರಜನಿಕಾಂತ್ ಕಣ್ಣು!]

Rajinikanth's 'Kabali' poster copied

ಒಟ್ನಲ್ಲಿ 'ಕಬಾಲಿ' ಚಿತ್ರತಂಡ ಸಿಕ್ಕಾಪಟ್ಟೆ ಹಾಲಿವುಡ್ ಸಿನಿಮಾಗಳ ಪೋಸ್ಟರ್ ಗಳನ್ನು ಕಾಪಿ ಮಾಡುತ್ತಿದೆ. ಇನ್ನು ಅಷ್ಟಕ್ಕೂ 'ಕಬಾಲಿ' ಸಿನಿಮಾ ರೀಮೇಕಾ?, ಸ್ವಮೇಕಾ? ಅಥವಾ ಹಾಲಿವುಡ್ ಚಿತ್ರಗಳಿಂದ ಪ್ರೇರಣೆ ಪಡೆದುಕೊಂಡು ಮಾಡಿದ ಸಿನಿಮಾ ಇರಬಹುದೇ? ಎಂಬ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಮಾತ್ರ ಸಿನಿಮಾ ಬಿಡುಗಡೆ ಆದ ಮೇಲೆ ದೊರೆಯಲಿದೆ.

English summary
Now a days in all field, everyone is a victim of plagiarism. It is happening more in cinema industry, a recent victim is Rajinikanth's 'Kabali' poster. It is believed that 'Kabali' poster was inspired from the Hollywood Movie.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada