»   » ಮೈನವಿರೇಳಿಸುವ ರಜನಿ 'ಲಿಂಗಾ' ಚಿತ್ರದ ಹೈಲೈಟ್ಸ್

ಮೈನವಿರೇಳಿಸುವ ರಜನಿ 'ಲಿಂಗಾ' ಚಿತ್ರದ ಹೈಲೈಟ್ಸ್

By: ಶಂಕರ್, ಚೆನ್ನೈ
Subscribe to Filmibeat Kannada

ನಟ ಸಾರ್ವಭೌಮ ರಾಜ್ ಕುಮಾರ್ ಅವರ ಸ್ಮಾರಕ ಉದ್ಘಾಟನೆ ಸಮಾರಂಭಕ್ಕೆ ಆಗಮಿಸಿದ್ದ ಸೂಪರ್ ಸ್ಟಾರ್ ರಜನಿಕಾಂತ್ ಅವರು ಅಣ್ಣಾವ್ರವನ್ನು ತಮ್ಮದೇ ಆದ ಶೈಲಿಯಲ್ಲಿ ಬಣ್ಣಿಸಿದ್ದರು. ರಜನಿ ಅವರ ಮಾತುಗಳಿಗೆ ಅಣ್ಣಾವ್ರ ಅಭಿಮಾನಿಗಳು ತಲೆದೂಗಿದ್ದನ್ನೂ ಓದಿದ್ದೇವೆ.

ಇದೀಗ ರಜನಿ ಅಭಿನಯದ ಅದ್ದೂರಿ 'ಲಿಂಗಾ' ಚಿತ್ರ ಅಂದುಕೊಂಡಂತೆ ಸಮಯಕ್ಕೆ ಸರಿಯಾಗಿ ತೆರೆಕಾಣಲು ಸಜ್ಜಾಗಿದೆ. ಇತ್ತೀಚೆಗೆ ಸೆನ್ಸಾರ್ ಮುಗಿಸಿಕೊಂಡಿರುವ ಚಿತ್ರಕ್ಕೆ 'ಯು' ಸರ್ಟಿಫಿಕೇಟ್ ಸಿಕ್ಕಿದೆ.

ಚಿತ್ರಕ್ಕೆ 'ಯು' ಸರ್ಟಿಫಿಕೇಟ್ ಸಿಕ್ಕಿರುವ ಕಾರಣ ಫ್ಯಾಮಿಲಿ ಆಡಿಯನ್ಸ್ ಸಹ ಚಿತ್ರವನ್ನು ನಿರೀಕ್ಷಿಸುವಂತಾಗಿದೆ. ಲಿಂಗಾ ಚಿತ್ರದ ಸಮಯ 2 ಗಂಟೆ 45 ನಿಮಿಷ (175 ನಿಮಿಷ, 42 ಸೆಕೆಂಡ್). ರಜನಿ ಅವರ ಹುಟ್ಟುಹಬ್ಬದ ದಿನ ಅಂದರೆ ಡಿಸೆಂಬರ್ 12ರಂದು ಚಿತ್ರ ತೆರೆಗೆ ದಾಂಗುಡಿ ಇಡುತ್ತಿದೆ.

ಕನ್ನಡಿಗ ರಾಕ್ ಲೈನ್ ವೆಂಕಟೇಶ್ ನಿರ್ಮಾಪಕರು

ಕೆ.ಎಸ್. ರವಿಕುಮಾರ್ ನಿರ್ದೇಶಿಸಿರುವ ಚಿತ್ರಕ್ಕೆ ಕನ್ನಡಿಗ 'ಧೀರ' ರಾಕ್ ಲೈನ್ ವೆಂಕಟೇಶ್ ನಿರ್ಮಾಪಕರು. ಅನುಷ್ಕಾ ಶೆಟ್ಟಿ, ಸೋನಾಕ್ಷಿ ಸಿನ್ಹಾ ಇಬ್ಬರು ಹೀರೋಯಿನ್ ಗಳು ಚಿತ್ರದಲ್ಲಿದ್ದು ಪ್ರೇಕ್ಷಕರು ಭರ್ಜರಿ ಮನರಂಜನೆಯನ್ನು ನಿರೀಕ್ಷಿಸಬಹುದು.

ಎ.ಆರ್. ರೆಹಮಾನ್ ಅವರ ಸಂಗೀತ

ಎ.ಆರ್. ರೆಹಮಾನ್ ಅವರ ಸಂಗೀತ ಚಿತ್ರದ ಇನ್ನೊಂದು ಪ್ರಮುಖ ಆಕರ್ಷಣೆಯಾಗಿ ನಿಲ್ಲಲಿದೆ. ತೆಲುಗು ನಟ ಜಗಪತಿಬಾಬು ಚಿತ್ರದಲ್ಲಿ ಖಳನಟನಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ನಲವತ್ತು ವರ್ಷಗಳ ರಜನಿ ವೃತ್ತಿ ಬದುಕಿನಲ್ಲಿ ಅವರ ಹುಟ್ಟುಹಬ್ಬದಂದು ಬಿಡುಗಡೆಯಾಗುತ್ತಿರುವ ಮೊದಲ ಸಿನಿಮಾ 'ಲಿಂಗಾ'.

ವಿತರಣೆ ಹಕ್ಕುಗಳಿಗೆ ರು.160 ಕೋಟಿ

ರಜನಿಕಾಂತ್ ಚಿತ್ರ ಎಂದರೆ ಜಗತ್ತಿನಾದ್ಯಂತ ಅಭಿಮಾನಿಗಳು ಇದ್ದಾರೆ. ಈ ಚಿತ್ರವೂ ಅಷ್ಟೇ ವಿಶ್ವದಾದ್ಯಂತ ಬಿಡುಗಡೆಯಾಗುತ್ತಿದ್ದು ಎರೋಸ್ ಇಂಟರ್ ನ್ಯಾಶನಲ್ ಸಂಸ್ಥೆ ಚಿತ್ರದ ವಿತರಣೆ ಹಕ್ಕುಗಳನ್ನು ರು.160 ಕೋಟಿಗೆ ಪಡೆದುಕೊಂಡಿದೆ.

ಸರಿಸುಮಾರು ರು.100 ಕೋಟಿ ಬಜೆಟ್

ಸರಿಸುಮಾರು ರು.100 ಕೋಟಿ ಬಜೆಟ್ ನಲ್ಲಿ ಈ ಚಿತ್ರವನ್ನು ರಾಕ್ ಲೈನ್ ವೆಂಕಟೇಶ್ ನಿರ್ಮಿಸಿದ್ದಾರೆ. ಈ ಚಿತ್ರವನ್ನು ಕೇವಲ 85 ದಿನಗಳಲ್ಲಿ ಪೂರ್ಣಗೊಳಿಸಿರುವುದು ಇನ್ನೊಂದು ಗಮನಾರ್ಹ ಸಂಗತಿ.

ಬೆಂಗಳೂರಿನಲ್ಲಿ ಆರಂಭವಾದ ಚಿತ್ರ

ಆಗಸ್ಟ್ 27ರಂದು ಲಿಂಗಾ ಚಿತ್ರದ ಶೂಟಿಂಗ್ ಬೆಂಗಳೂರಿನಲ್ಲಿ ಆರಂಭವಾಯಿತು. ನಿರ್ಮಾಣೇತರ ಕೆಲಸ ಕಾರ್ಯಗಳನ್ನು ಗಣನೆಗೆ ತೆಗೆದುಕೊಂಡರೆ ಡಿಸೆಂಬರ್ 12ಕ್ಕೆ ಒಟ್ಟು 110 ದಿನಗಳಾಗುತ್ತವೆ.

ಬೆಂಗಳೂರು, ಶಿವಮೊಗ್ಗದಲ್ಲಿ ಚಿತ್ರೀಕರಣ

ಬೆಂಗಳೂರು, ಶಿವಮೊಗ್ಗ ಆ ಬಳಿಕ ಹೈದರಾಬಾದ್ ಫಿಲಂ ಸಿಟಿಯಲ್ಲಿ ಹೆಚ್ಚಿನ ಭಾಗದ ಚಿತ್ರೀಕರಣ ಮಾಡಲಾಗಿದೆ. ಅರುವತ್ತರ ರಜನಿಕಾಂತ್ ಅವರು ಕೇವಲ ಒಂದೇ ಒಂದು ದಿನದಲ್ಲಿ ಡಬ್ಬಿಂಗ್ ಹೇಳಿ ಮುಗಿಸಿದ್ದಾರೆ.

ಕೊಚ್ಚಾಡಿಯಾನ್ ಬಳಿಕ ಬರುತ್ತಿರುವ ಲಿಂಗಾ

ಕೊಚ್ಚಾಡಿಯಾನ್ ಚಿತ್ರದ ಬಳಿಕ ರಜನಿಕಾಂತ್ ಅಭಿನಯದ ಚಿತ್ರ ಇದು. ಕೊಚ್ಚಾಡಿಯಾನ್ ಚಿತ್ರ ನಿರೀಕ್ಷಿಸಿದ ಮಟ್ಟದಲ್ಲಿ ಪ್ರೇಕ್ಷಕರನ್ನು ರಂಜಿಸಲಿಲ್ಲ, ಬಾಕ್ಸ್ ಆಫೀಸಲ್ಲಿ ಚಿತ್ರ ದಯನೀಯವಾಗಿ ಸೋತಿತು. ಸಂಪೂರ್ಣ ಕಮರ್ಷಿಯಲ್ ಅಂಶಗಳೊಂದಿಗೆ ರಜನಿಕಾಂತ್ ಅವರು ಲಿಂಗಾ ಚಿತ್ರದ ಮೂಲಕ ಇದೀಗ ಪ್ರೇಕ್ಷಕರ ಮುಂದೆ ಬರುತ್ತಿದ್ದಾರೆ.

ಮಾಸ್ ಲುಕ್ ನಲ್ಲಿ ಕಾಣಿಸುವ ನಾಯಕ ನಟ

"ರಜನಿಕಾಂತ್ ಅವರನ್ನು ಮತ್ತೊಮ್ಮೆ ಮಾಸ್ ಲುಕ್ ನಲ್ಲಿ ತೋರಿಸುವ ಪ್ರಯತ್ನವೇ ಈ ಚಿತ್ರ. ಸ್ವಾತಂತ್ರ್ಯಕ್ಕೂ ಮುನ್ನ, ಆ ಬಳಿಕ ತಲೆಮಾರಿಗೆ ಸಂಬಂಧಿಸಿದ ಎರಡು ಪಾತ್ರಗಳಲ್ಲಿ ರಜನಿಕಾಂತ್ ಕಾಣಿಸಲಿದ್ದಾರೆ" ಎನ್ನುತ್ತಾರೆ ನಿರ್ದೇಶಕರು.

ಮಾಸ್ ಮಸಾಲಾ ಆಕ್ಷನ್ ನಾಯಕ

ಚಿತ್ರದಲ್ಲಿ ರಜನಿಕಾಂತ್ ಅವರು ಮಾಸ್ ಮಸಾಲಾ ಆಕ್ಷನ್ ನಾಯಕನಾಗಿ ಕಾಣಿಸುತ್ತಾರೆ. ಎಲ್ಲಾ ವರ್ಗದ ಪ್ರೇಕ್ಷಕರನ್ನೂ ರಂಜಿಸುವಂತೆ ತೆರೆಗೆ ತರಲಾಗಿದೆ. ರಜನಿ ಅವರ ಪಾತ್ರದ ಚಿತ್ರಣ ಹೊಸತನದಿಂದ ಕೂಡಿರುತ್ತದೆ ಎನ್ನುತ್ತದೆ ಚಿತ್ರತಂಡ.

ದ್ವಿಪಾತ್ರಾಭಿನಯದಲ್ಲಿ ರಜನಿಕಾಂತ್

ಈ ಚಿತ್ರದಲ್ಲಿ ರಜನಿಕಾಂತ್ ಅವರು ಕಳ್ಳನಾಗಿ, ಇಂಜಿನಿಯರ್ ಆಗಿ ದ್ವಿಪಾತ್ರದಲ್ಲಿ ಅಭಿನಯಿಸಿದ್ದಾರೆ. ಫ್ಲ್ಯಾಶ್ ಬ್ಯಾಕ್ ನಲ್ಲಿ ಇಂಜಿನಿಯರ್ ಪಾತ್ರ ಬರುತ್ತದೆ ಎಂದು ಊಹಿಸಲಾಗಿದೆ. ಕಳ್ಳನ ಪಾತ್ರಕ್ಕೂ, ಬ್ರಿಟೀಷ್ ರ ಆಳ್ವಿಕೆಯಲ್ಲಿ ಕಾಣಿಸುವ ಇಂಜಿಯರ್ ಪಾತ್ರಕ್ಕೂ ಇರುವ ಸಂಬಂಧವೇನು? ಇಂಜಿನಿಯರ್ ಆಗಿ ರಜನಿ ಏನು ಮಾಡುತ್ತಾರೆ, ಪ್ರಸ್ತುತ ಸನ್ನಿವೇಶಕ್ಕೆ ಅದನ್ನು ಹೇಗೆ ಥಳುಕು ಹಾಕಲಾಗಿದೆ ಎಂಬುದು ಗೊತ್ತಾಗಬೇಕಾದರೆ ಚಿತ್ರವನ್ನು ನೋಡಲೇಬೇಕು.

ಈ ಚಿತ್ರವೂ ವಿವಾದಗಳಿಮ್ದ ಹೊರತಲ್ಲ

ಈ ಚಿತ್ರವೂ ವಿವಾದಗಳಿಂದ ಹೊರತಲ್ಲ. ರವಿರತ್ನಂ ಎಂಬುವವರು ಇದು ತಮ್ಮ 'ಮುಲ್ಲೆವನಂ 999' ಚಿತ್ರದ ಕಥೆಯನ್ನು ಹೋಲುತ್ತದೆ ಎಂದು ಮದ್ರಾಸ್ ಹೈಕೋರ್ಟ್ ಮೆಟ್ಟಿಲೇರಿದ್ದಾರೆ. 2013ರಲ್ಲಿ ಯೂಟ್ಯೂಬ್ ನಲ್ಲಿ ಆ ಚಿತ್ರವನ್ನು ತಾವು ಬಿಡುಗಡೆ ಮಾಡಿದ್ದೆವು ಎಂದು ಅವರು ಹೇಳುತ್ತಿದ್ದಾರೆ.

ಕೊಯಮತ್ತೂರಿನ 83 ಥಿಯೇಟರ್ ಗಳಲ್ಲಿ 'ಲಿಂಗಾ'

ಸರಿಸುಮಾರು ಐದು ವರ್ಷದ ಬಳಿಕ ರಜನಿಕಾಂತ್ ಅಭಿನಯಿಸಿರುವ ಚಿತ್ರ ಇದಾಗಿರುವ ಕಾರಣ ಅಭಿಮಾನಿಗಳಲ್ಲಿ ಅತೀವ ಕುತೂಹಲವಂತೂ ಇದ್ದೇ ಇದೆ. ಚೆನ್ನೈ ಬಳಿಕ ಅತ್ಯಧಿಕ ಸಂಖ್ಯೆ ಚಿತ್ರಮಂದಿರಗಳಿರುವ ನಗರ ಕೊಯಂಬತ್ತೂರು. ಇಲ್ಲಿ ಸರಿಸುಮಾರು 90 ಥಿಯೇಟರ್ ಗಳಿವೆ. ಇವುಗಳಲ್ಲಿ 83 ಚಿತ್ರಮಂದಿರಗಳಲ್ಲಿ 'ಲಿಂಗಾ' ಪ್ರದರ್ಶನ ಕಾಣಲಿದೆ.

English summary
'Lingaa' has been cleared by the Censor Board with a Clean 'U' Certificate. Here is censor certificate of this crazy project starring Rajinikanth, Sonakshi Sinha and Anushka Shetty. The film is 175 minutes, 42 seconds long. Worldwide theatrical release is on December 12th on the eve of Superstar's birthday.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada