ಅಮಿತ್ ಶಾ-ಮೋದಿ ಅವರನ್ನ ರಜನಿಕಾಂತ್ ಹೋಲಿಸಿದ್ದು ಯಾರಿಗೆ?
Recommended Video
''ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಒಂದು ರೀತಿ ಕೃಷ್ಣ ಮತ್ತು ಅರ್ಜುನ ಇದ್ದಂತೆ'' ಎಂದು ಸೂಪರ್ ಸ್ಟಾರ್ ರಜನಿಕಾಂತ್ ಅವರ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಉಪ ರಾಷ್ಟ್ರಪತಿ ವೆಂಕಯ್ಯನಾಯ್ಡು ಅವರ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಭಾಗವಹಿಸಿದ್ದ ನಟ-ರಾಜಕಾರಣಿ ರಜನಿಕಾಂತ್, ಜಮ್ಮು ಕಾಶ್ಮೀರದ ವಿಚಾರದಲ್ಲಿ ಕೇಂದ್ರ ಸರ್ಕಾರ ತೆಗೆದುಕೊಂಡ ನಿರ್ಧಾರದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
''371ನೇ ವಿಧಿ ರದ್ದು ಮಾಡಿದ ನಿಮ್ಮ ಧೈರ್ಯ ಮತ್ತು ಅದನ್ನ ಕಾರ್ಯರೂಪಿಗೊಳಿಸಿದ ನಿಮ್ಮ ಯೋಜನೆ ನಿಜಕ್ಕೂ ಅದ್ಭುತ. ಲೋಕಸಭೆಯಲ್ಲಿ ನಿಮ್ಮ ಭಾಷಣ ಕೂಡ ನೋಡಿದೆ. ತುಂಬಾ ಚೆನ್ನಾಗಿ ಮಾತಾಡಿದ್ರಿ'' ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ರಜನಿ ಹೊಗಳಿದರು.

''ನರೇಂದ್ರ ಮೋದಿ ಮತ್ತು ಅಮಿತ್ ಶಾ ಇಬ್ಬರು ಕೃಷ್ಣಾರ್ಜುನ ಇದ್ದಂತೆ. ಆದರೆ, ಅವರಿಬ್ಬರಲ್ಲಿ ಯಾರು ಕೃಷ್ಣ ಯಾರು ಅರ್ಜುನ ಎಂಬುದು ಗೊತ್ತಿಲ್ಲ. ಅದನ್ನ ಅವರೇ ಹೇಳಬೇಕು'' ಎಂದು ವೇದಿಕೆಯಲ್ಲಿ ಶ್ಲಾಘಿಸಿದರು.
ಇನ್ನು ತಮಿಳುನಾಡು ರಾಜಕೀಯಕ್ಕೆ ಅಧಿಕೃತವಾಗಿ ಎಂಟ್ರಿ ಕೊಟ್ಟಿರುವ ರಜನಿಕಾಂತ್, ತಮ್ಮದೇ ಸ್ವಂತ ಪಕ್ಷ ಸ್ಥಾಪಿಸಿದ್ದಾರೆ. ತಮಿಳುನಾಡಿನ ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ರಜನಿ ಹೊಸ ಪಕ್ಷದಿಂದ ಸ್ಪರ್ಧಿಸುತ್ತಾರೆ ಎನ್ನಲಾಗಿದೆ.


Click it and Unblock the Notifications











