»   » ರಜನಿ ಭಕ್ತರಿಗೆ 'ಕಬಾಲಿ' ಕ್ಲೈಮ್ಯಾಕ್ಸ್ 'ಖುಷಿ' ಕೊಡಲ್ಲ.?

ರಜನಿ ಭಕ್ತರಿಗೆ 'ಕಬಾಲಿ' ಕ್ಲೈಮ್ಯಾಕ್ಸ್ 'ಖುಷಿ' ಕೊಡಲ್ಲ.?

Posted By:
Subscribe to Filmibeat Kannada

ಟಿಪಿಕಲ್ ಮ್ಯಾನರಿಸಂಗೆ ಮಾಸ್ಟರ್...ಸ್ಟೈಲ್ ಗೆ ಕಿಂಗ್...ಇದು ರಜನಿಕಾಂತ್ ಕೇರ್ ಆಫ್ ಅಡ್ರೆಸ್.

ಬಾಕ್ಸ್ ಆಫೀಸ್ ಸರ್ವಾಧಿಕಾರಿ...ಡೈನಾಮಿಕ್ ಡೈಲಾಗುಗಳ ಒಡೆಯ...ಗ್ರೇಟ್ ಎಂಟರ್ ಟೇನರ್, ಈ ರಜನಿ. ವಯಸ್ಸು 60 ದಾಟಿದ್ರೂ, ರಜನಿಗೆ ಇರುವ ಮೇನಿಯಾ, ಮಾಸ್ ಹಿಸ್ಟೀರಿಯಾ ಇಡೀ ಜಗತ್ತಿನಲ್ಲಿ ಯಾರಿಗೂ ಇಲ್ಲ.! ಅದಕ್ಕೆ 'ಕಬಾಲಿ' ಚಿತ್ರಕ್ಕಿಂತ ಲೇಟೆಸ್ಟ್ ಉದಾಹರಣೆ ಬೇಕಾ.?

ನಾಲ್ಕು ದಶಕಗಳ ಸಿನಿ ಕೆರಿಯರ್ ನಲ್ಲಿ ತರಹೇವಾರಿ ಪಾತ್ರಗಳನ್ನ ನಿಭಾಯಿಸಿರುವ ರಜನಿಕಾಂತ್ 'ಕಬಾಲಿ' ಚಿತ್ರದಲ್ಲಿ ಮಲೇಶಿಯಾ ಡಾನ್ ಆಗಿ ಮಿಂಚಿದ್ದಾರೆ ಅಂತ ವರದಿ ಆಗಿದೆ. [ರಜನಿಕಾಂತ್ 'ಕಬಾಲಿ' ಚಿತ್ರಕಥೆ ಹೇಳ್ತೀವಿ ಕೇಳಿ!]

ಈಗಾಗಲೇ 'ಡಾನ್' ಅವತಾರದಲ್ಲಿ ರಜನಿಕಾಂತ್ ಹಲವಾರು ಸಿನಿಮಾಗಳಲ್ಲಿ ಮಿಂಚಿರಬಹುದು. ಆದ್ರೆ, ಅದೆಲ್ಲಕ್ಕಿಂತ 'ಕಬಾಲಿ' ಸೂಪರ್ ಸ್ಪೆಷಲ್. ಅದ್ಹೇಗೆ ಎಂಬ ಸಂಪೂರ್ಣ ವಿವರ ಇಲ್ಲಿದೆ, ಕೆಳಗಿರುವ ಸ್ಲೈಡ್ ಗಳಲ್ಲಿ ಓದಿರಿ.....

'ಕಬಾಲಿ' ರಿಯಲಿಸ್ಟಿಕ್ ಸಿನಿಮಾ.!

'ಕಬಾಲಿ' ಚಿತ್ರದಲ್ಲಿ ರಿಯಲಿಸ್ಟಿಕ್ ಅಂಶಗಳಿಗೆ ಹೆಚ್ಚು ಒತ್ತು ಕೊಡಲಾಗಿದ್ಯಂತೆ. ರಜನಿ 'ಸ್ಟಾರ್' ಎಂಬ ಕಾರಣಕ್ಕೆ 'ಅತಿ' ಬಿಲ್ಡಪ್ ಕೊಡದೆ, ಎಷ್ಟು ಬೇಕೋ ಅಷ್ಟು ಮಾತ್ರ ಒಗ್ಗರಣೆ ಹಾಕಿದ್ದಾರಂತೆ ನಿರ್ದೇಶಕ ಪಾ.ರಂಜಿತ್. [ಬ್ರೇಕಿಂಗ್ ನ್ಯೂಸ್: 'ಕಬಾಲಿ' ಎಂಟ್ರಿ ಸೀನ್ ಆನ್ ಲೈನ್ ನಲ್ಲಿ ಲಭ್ಯ.!]

ವಯಸ್ಸಿಗೆ ತಕ್ಕ ಪಾತ್ರ ಇದೆ.!

'ಕಬಾಲಿ' ಚಿತ್ರದಲ್ಲಿ ರಜನಿಕಾಂತ್ ರವರ ವಯಸ್ಸಿಗೆ ಸರಿ ಹೊಂದುವ ಪಾತ್ರ ಇದೆ. [ಸಲ್ಮಾನ್ ಖಾನ್ ಗೂ ರಜನಿಕಾಂತ್ ಗೂ ಇರುವ ವ್ಯತ್ಯಾಸ ಇಷ್ಟೆ.!]

ನೀವಂದುಕೊಂಡಂತೆ ಕ್ಲೈಮ್ಯಾಕ್ಸ್ ಇರಲ್ಲ.!

ಸಹಜವಾಗಿ ರಜನಿಕಾಂತ್ ಅಭಿಮಾನಿಗಳು ಹ್ಯಾಪಿ ಎಂಡಿಂಗ್ ಸಿನಿಮಾಗಳನ್ನ ಇಷ್ಟಪಡುವವರು. ಹಾಗೇ, 'ಕಬಾಲಿ' ಕ್ಲೈಮ್ಯಾಕ್ಸ್ ನೋಡಿ ಶಿಳ್ಳೆ-ಚಪ್ಪಾಳೆ ಹೊಡೆದುಕೊಂಡು ಥಿಯೇಟರ್ ನಿಂದ ಹೊರಬರಬಹುದು ಅಂತ ನೀವು ಅಂದುಕೊಂಡಿದ್ದರೆ, ಮೊದಲು ನಿರ್ದೇಶಕರ ಮಾತನ್ನೊಮ್ಮೆ ಕೇಳಿಬಿಡಿ. [ಕಬಾಲಿ ಆನ್ಲೈನ್ ನಲ್ಲಿ ಲೀಕಾದರೂ ನೋ ಪ್ರಾಬ್ಲಂ: ರಜನಿ ಫ್ಯಾನ್ಸ್]

'ಕಬಾಲಿ' ಕ್ಲೈಮ್ಯಾಕ್ಸ್ ಬಗ್ಗೆ ನಿರ್ದೇಶಕರ ಮಾತು

''ನಿರ್ಮಾಪಕ ಕಲೈಪುಲಿ.ಎಸ್.ಧನು ಹಾಗೂ ರಜನಿಕಾಂತ್ ಪುತ್ರಿ ಸೌಂದರ್ಯ ರವರಿಗೆ 'ಕಬಾಲಿ' ಕ್ಲೈಮ್ಯಾಕ್ಸ್ ಬಗ್ಗೆ ಸಮಾಧಾನ ಇರ್ಲಿಲ್ಲ. ಅವರಿಬ್ಬರ ಪ್ರಕಾರ ಸಿನಿಮಾ 'ಹ್ಯಾಪಿ ಎಂಡಿಂಗ್' ಆಗ್ಬೇಕಿತ್ತು'' - ಪಾ.ರಂಜಿತ್, 'ಕಬಾಲಿ' ನಿರ್ದೇಶಕ

ರಜನಿಕಾಂತ್ ಗೆ 'ಕ್ಲೈಮ್ಯಾಕ್ಸ್' ಇಷ್ಟ ಆಯ್ತಾ?

''ಆದ್ರೆ, ಸಿನಿಮಾ ನೋಡಿದ ಮೇಲೆ ಕ್ಲೈಮ್ಯಾಕ್ಸ್ ಚೇಂಜ್ ಮಾಡುವುದು ಬೇಡ. ಈಗ ಹೇಗಿದ್ಯೋ, ಹಾಗೇ ಇರಲಿ. ಅದೇ 'ಕಬಾಲಿ' ಚಿತ್ರದ ದೊಡ್ಡ ಹೈಲೈಟ್ ಆಗಲಿ ಅಂತ ರಜನಿಕಾಂತ್ ಸರ್ ನನಗೆ ಹೇಳಿದರು'' ಅಂತ ಸಂದರ್ಶನವೊಂದರಲ್ಲಿ 'ಕಬಾಲಿ' ಚಿತ್ರದ ನಿರ್ದೇಶಕ ಪಾ.ರಂಜಿತ್ ಹೇಳಿಕೊಂಡಿದ್ದಾರೆ. [ಗೆದ್ದ ವಾಣಿಜ್ಯ ಮಂಡಳಿ: ಸ್ಟಾರ್ ಹೋಟೆಲ್ ಗಳಲ್ಲಿ 'ಕಬಾಲಿ' ಕ್ಯಾನ್ಸಲ್.!]

ಅಲ್ಲಿಗೆ, ಕ್ಲೈಮ್ಯಾಕ್ಸ್ ನಲ್ಲಿ ಟ್ರ್ಯಾಜೆಡಿ.?

ಪಾ.ರಂಜಿತ್ ರವರ ಮಾತುಗಳನ್ನ ಕೇಳಿದ್ರೆ, 'ಕಬಾಲಿ' ಸಿನಿಮಾದಲ್ಲಿ ಟ್ರ್ಯಾಜೆಡಿ ಎಂಡಿಂಗ್ ಇರಬಹುದು ಎಂಬ ಅನುಮಾನ ತಮಿಳು ಸಿನಿ ಅಂಗಳದಲ್ಲಿ ಕಾಡುತ್ತಿದೆ.

ರಜನಿಗೆ ಏನಾದರೂ ಆದ್ರೆ 'ಭಕ್ತರು' ಸುಮ್ನೆ ಬಿಡ್ತಾರಾ.?

ರಜನಿ ಸಿನಿಮಾಗಳಿಗೆ ಎಲ್ಲರೂ ಮುಗಿಬೀಳುವುದೇ ಅವರ ಸ್ಟೈಲ್ ನೋಡೋಕೆ. ಅಂಥದ್ರಲ್ಲಿ, ಸಿನಿಮಾ ಕ್ಲೈಮ್ಯಾಕ್ಸ್ ನಲ್ಲಿ ರಜನಿಗೆ ಏನಾದರೂ ಹೆಚ್ಚು-ಕಮ್ಮಿ ಆದ್ರೆ ಅವರ ಭಕ್ತರು ಸುಮ್ನೆ ಇರ್ತಾರಾ.?

ಇತಿಹಾಸದಲ್ಲಿ ಇಂತಹ ಸಾಹಸಕ್ಕೆ ಯಾರೂ ಕೈ ಹಾಕಿಲ್ಲ.!

ವಿಶ್ವದಾದ್ಯಂತ ಫ್ಯಾನ್ ಫಾಲೋವರ್ಸ್ ಹುಟ್ಟಿಕೊಂಡ ಮೇಲೆ ಕ್ಲೈಮ್ಯಾಕ್ಸ್ ನಲ್ಲಿ ರಜನಿ ಸದಾ ವಿಜಯ ಪತಾಕೆ ಹಾರಿಸಿದವರು. ಈಗ 'ಕಬಾಲಿ'ಯಲ್ಲಿ ರಜನಿ ನೆಲಕ್ಕುರುಳಿದರೆ, 'ತಲೈವಾ' ಭಕ್ತರು ಏನ್ ಮಾಡ್ತಾರೋ ಎಂಬುದೇ ಸದ್ಯದ ಮಿಲಿಯನ್ ಡಾಲರ್ ಪ್ರಶ್ನೆ.

ಅಥವಾ ಬೇರೆ ಟ್ವಿಸ್ಟ್ ಇದ್ಯಾ.?

'ಕಬಾಲಿ' ಕ್ಲೈಮ್ಯಾಕ್ಸ್ ನಲ್ಲಿ ರಜನಿ ಸೇಫ್ ಆಗಿದ್ದರೂ, ಸ್ಯಾಡ್ ಎಂಡಿಂಗ್ ಬರುವ ಹಾಗೆ ಬೇರೆ ಟ್ವಿಸ್ಟ್ ಇದ್ಯಾ.? ಎಂಬ ಪ್ರಶ್ನೆಗೆ ನಾಳೆ ಉತ್ತರ ಸಿಗಲಿದೆ. 'ಕಬಾಲಿ' ಕುರಿತ ಎಲ್ಲಾ ಕುತೂಹಲಗಳಿಗೆ ನಾಳೆ ತೆರೆ ಬೀಳಲಿದೆ.

English summary
Director Pa.Ranjith has given a hint that Super Star Rajinikanth starrer Tamil Movie 'Kabali' will end on a sad note.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada