»   » ಸೂಪರ್ ಸ್ಟಾರ್ ರಜನಿ 'ಲಿಂಗಾ' ಚಿತ್ರಕ್ಕೆ ಬಿತ್ತು ಕತ್ರಿ!

ಸೂಪರ್ ಸ್ಟಾರ್ ರಜನಿ 'ಲಿಂಗಾ' ಚಿತ್ರಕ್ಕೆ ಬಿತ್ತು ಕತ್ರಿ!

Posted By:
Subscribe to Filmibeat Kannada

ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ 'ಲಿಂಗಾ' ಚಿತ್ರಕಥೆಯಲ್ಲಿ ತಲೆಬುಡವಿಲ್ಲ! ರಜನಿ ನಟನೆ ಒಂದನ್ನ ಬಿಟ್ಟರೆ 'ಲಿಂಗಾ' ಚಿತ್ರದಲ್ಲಿ ಬೇರೆನೂ ಇಲ್ಲ. 'ಲಿಂಗಾ' ನಿದ್ರೆ ಬರುವ ಗುಳಿಗೆ ಇದ್ದಂತೆ! ಅಂತೆಲ್ಲಾ ಕಮೆಂಟ್ ಗಳು ವ್ಯಾಪಕವಾದ ಮೇಲೆ ಈಗ ನಿದ್ರೆಯಿಂದ ಎಚ್ಚೆತ್ತಿರುವಂತಿದೆ 'ಲಿಂಗಾ' ಚಿತ್ರತಂಡ.

ಸುಮಾರು 3 ಗಂಟೆಯ ಸುದೀರ್ಘ ಕಥನವಾಗಿದ್ದ 'ಲಿಂಗಾ' ಚಿತ್ರಕ್ಕೆ ಕತ್ರಿ ಹಾಕುವುದಕ್ಕೆ ಚಿತ್ರತಂಡ ಮುಂದಾಗಿದೆ. 'ಲಿಂಗಾ' ಚಿತ್ರವನ್ನು ಶಾರ್ಟ್ ಅಂಡ್ ಸ್ವೀಟ್ ಮಾಡುವುದಕ್ಕೆ ಬರೋಬ್ಬರಿ 9 ನಿಮಿಷಗಳನ್ನು ಕಟ್ ಮಾಡಲಿದೆಯಂತೆ ಚಿತ್ರತಂಡ. ಎಲ್ಲೆಲ್ಲಿ ರಬ್ಬರ್ ಎಳೆಯದಂತೆ ಭಾಸವಾಗಿ ಪ್ರೇಕ್ಷಕ ಮಹಾಪ್ರಭು ಆಕಳಿಸುತ್ತಾನೋ ಅಲ್ಲೆಲ್ಲಾ 'ಲಿಂಗಾ' ಟ್ರಿಮ್ ಆಗಲಿದ್ದಾನೆ. ['ಲಿಂಗಾ' ವಿಮರ್ಶೆ: ತೆರೆಯ ಮೇಲೆ ರಜನಿ ರಿಂಗರಿಂಗಾ]

'ಲಿಂಗಾ' ಚಿತ್ರತಂಡದ ಪ್ರಕಾರ, ಚಿತ್ರದ ಮೊದಲಾರ್ಧದಲ್ಲಿ ಆರು ನಿಮಿಷ ಮತ್ತು ದ್ವಿತೀಯಾರ್ಧದಲ್ಲಿ ಮೂರು ನಿಮಿಷ ಎಡಿಟ್ ಆಗಲಿದೆ. ಇದರಿಂದ ಚಿತ್ರಕ್ಕೆ ಮತ್ತಷ್ಟು ವೇಗ ಸಿಗಲಿದ್ದು, ಚಿತ್ರಕಥೆಗೆ ಎಲ್ಲೂ ಲಿಂಕ್ ಮಿಸ್ ಆಗುವುದಿಲ್ಲ. ಆ ಮೂಲಕ 'ಲಿಂಗಾ' ಚಿತ್ರವನ್ನು ಕಣ್ತುಂಬಿಕೊಳ್ಳುವ ಬಗ್ಗೆ ಯೋಚನೆ ಮಾಡುತ್ತಿದ್ದ ಅಭಿಮಾನಿಗಳಿಗೆ ಸಿಹಿ ಸುದ್ದಿ ಕೊಟ್ಟಿದೆ ಚಿತ್ರತಂಡ. [ಸ್ಯಾಂಡಲ್ ವುಡ್ ಮಹಾಚುನಾವಣೆ 2014 - ನಿಮ್ಮ ಮತ ಯಾರಿಗೆ?]

Rajinikanth

ರಜನಿಕಾಂತ್ ಮತ್ತು ಕೆ.ಎಸ್.ರವಿಕುಮಾರ್ ರವರ ಹ್ಯಾಟ್ರಿಕ್ ಕಾಂಬಿನೇಷನ್ ಸಿನಿಮಾ 'ಲಿಂಗಾ'. ಹೀಗಾಗಿ ಚಿತ್ರದ ಬಗ್ಗೆ ನಿರೀಕ್ಷೆ ಗರಿಗೆದರಿತ್ತು. ಆದರೆ, ರಜನಿಯನ್ನ ವೈಭವೀಕರಿಸುವ ನೆಪದಲ್ಲಿ ಚಿತ್ರದ ಕಾಲಾವಧಿ ಹೆಚ್ಚಾಗಿತ್ತು. [ಸೂಪರ್ ಸ್ಟಾರ್ ರಜನಿ ಹುಟ್ಟುಹಬ್ಬಕ್ಕೆ 'ಅಚ್ಚರಿ' ಗಿಫ್ಟ್!]

ಅದು ಅತಿಯಾಯ್ತು ಅಂತ ಅಭಿಮಾನಿಗಳು ಕಣ್ಣುಕೆಂಪಗೆ ಮಾಡಿಕೊಂಡಿದ್ದೇ ತಡ, ಚಿತ್ರಕ್ಕೆ ಕತ್ರಿ ಬಿದ್ದಿದೆ. ಈಗಲಾದ್ರೂ, ಚಿತ್ರಮಂದಿರಲ್ಲಿ ಪ್ರೇಕ್ಷಕರು 'ತೂಕಡಿಸಿ, ತೂಕಡಿಸಿ ಬೀಳದಿದ್ದರೆ' ಸಾಕು..! (ಏಜೆನ್ಸೀಸ್)

English summary
Super Star Rajinikanth starrer Lingaa movie received mixed response among the fans. Therefore, the makers of the film have decided to trim the film by 9 minutes.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada