'ಬಾಹುಬಲಿ' ಮುಂದೆ ಬಹುದೊಡ್ಡ ಸೋಲು ಕಂಡ ರಜನಿ '2.0'
Recommended Video

ಸೂಪರ್ ಸ್ಟಾರ್ ರಜನಿಕಾಂತ್ ಹಾಗೂ ಬಾಲಿವುಡ್ ನಟ ಅಕ್ಷಯ್ ಕುಮಾರ್ ಅಭಿನಯದ '2.0' ಸಿನಿಮಾ ವಿಶ್ವಜಗತ್ತಿನಲ್ಲಿ ದಾಖಲೆ ಮಾಡಿದೆ. ಬಾಹುಬಲಿ ನಂತರ ಮತ್ತೆ ಆ ಚರಿತ್ರೆಯನ್ನ ಸೃಷ್ಟಿಸುತ್ತಿದೆ ರಜನಿ ಸಿನಿಮಾ.
ಸುಮಾರು 545 ಕೋಟಿ ಬಜೆಟ್ ನಲ್ಲಿ ತಯಾರಾಗಿರುವ ಮೆಗಾ ಸಿನಿಮಾ ಇದಾಗಿದ್ದು, ಮೊದಲ ದಿನ ನೂರು ಕೋಟಿ ಹಾಗೂ ಎರಡನೇ ದಿನಕ್ಕೆ 200 ಕೋಟಿ ಗಳಿಸುವ ಮೂಲಕ ಭಾರತೀಯ ಚಿತ್ರರಂಗದಲ್ಲಿ ಅಬ್ಬರಿಸಿದೆ.
ಇಂತಹ ಸಿನಿಮಾ 'ಬಾಹುಬಲಿ' ಮುಂದೆ ಬಹುದೊಡ್ಡ ಸೋಲು ಕಂಡಿದೆ ಎನ್ನುವುದು ತಲೈವಾ ಫ್ಯಾನ್ಸ್ ನಿರಾಸೆ ಅನುಭವಿಸುವಂತೆ ಮಾಡಿದೆ. 'ಬಾಹುಬಲಿ' ಸಿನಿಮಾ ಎರಡು ದಿನದಲ್ಲಿ ಮಾಡಿದ್ದ ದಾಖಲೆಯನ್ನ ಹಿಂದಿಕ್ಕುವಲ್ಲಿ ರಜನಿ ಸಿನಿಮಾ ಸೋತಿದೆ. ಅಷ್ಟಕ್ಕೂ, ಬಾಹುಬಲಿ ದಾಖಲೆ ಏನು.? ಮುಂದೆ ಓದಿ.....

ಬಾಹುಬಲಿ ದಾಖಲೆ ಏನು.?
ಎಸ್ ಎಸ್ ರಾಜಮೌಳಿ ನಿರ್ದೇಶನ 'ಬಾಹುಬಲಿ ದಿ ಕನ್ ಕ್ಲೂಷನ್' (ಪಾರ್ಟ್ 2) ಸಿನಿಮಾ, ಎರಡು ದಿನಕ್ಕೆ ವಿಶ್ವದಾದ್ಯಂತ 385 ಕೋಟಿ ಗಳಿಸಿತ್ತು. ಈ ದಾಖಲೆಯನ್ನ ಹಿಂದಿಕ್ಕುವಲ್ಲಿ 2.0 ಸಿನಿಮಾ ಸೋತಿದೆ.

2.0 ಗಳಿಸಿದ್ದೆಷ್ಟು.?
ಮೊದಲ ದಿನ ನೂರು ಕೋಟಿ ಗಳಿಸಿದ್ದ ರಜನಿಕಾಂತ್ ಸಿನಿಮಾ, ಎರಡನೇ ದಿನವೂ ಅದೇ ಅಬ್ಬರ ಮುಂದುವರಿಸಿತ್ತು. ಹೀಗಾಗಿ, ಎರಡು ದಿನಕ್ಕೆ '2.0' ಗಳಿಸಿದ್ದು, ಬರೋಬ್ಬರಿ 215 ಕೋಟಿ. ಅಲ್ಲಿಗೆ ಬಾಹುಬಲಿ ಮುಂದೆ ಶಂಕರ್ ಸಿನಿಮಾ ಬಹುದೊಡ್ಡ ಸೋಲು ಕಂಡಿದೆ.

ಮೊದಲ ದಿನವೂ ರಜನಿ ಚಿತ್ರಕ್ಕೆ ಹಿನ್ನಡೆ
'2.0' ಮೊದಲ ದಿನ 115 ಕೋಟಿ ಗಳಿಸಿತ್ತು. ಆದ್ರೆ, ಬಾಹುಬಲಿ ಪಾರ್ಟ್ 2 ಸಿನಿಮಾ ಮೊದಲ ದಿನ 121 ಕೋಟಿ ಗಳಿಸುವ ಮೂಲಕ, ಮೊದಲ ದಿನ ಅತಿ ಹೆಚ್ಚು ಗಳಿಕೆ ಕಂಡ ಭಾರತೀಯ ಚಿತ್ರ ಎಂದು ಗುರುತಿಸಿಕೊಂಡಿದೆ.

ನಾಲ್ಕು ದಿನಕ್ಕೆ 400 ಕೋಟಿ
ಸದ್ಯ ಮೊದಲ ವಾರದಲ್ಲಿ 2.0 ಚಿತ್ರಕ್ಕೆ ಭಾರಿ ಮುನ್ನಡೆ ಸಿಕ್ಕಿದೆ. ಮೊದಲ ದಿನ ನೂರು ಕೋಟಿ, ಎರಡನೇ ದಿನ ನೂರು ಕೋಟಿ ಗಳಿಸಿದ್ದ ಸಿನಿಮಾ, ಈಗ ನಾಲ್ಕು ದಿನಕ್ಕೆ 400 ಕೋಟಿ ಗಳಿಕೆ ಕಂಡಿದೆ.

ಬಾಹುಬಲಿಯ ಲೈಫ್ ಟೈಂ ರೆಕಾರ್ಡ್.?
ಪ್ರಭಾಸ್, ರಾಣಾ, ಅನುಷ್ಕಾ ಶರ್ಮಾ, ತಮನ್ನಾ, ರಮ್ಯಾಕೃಷ್ಣ ಅಭಿನಯಿಸಿದ್ದ ಬಹುಕೋಟಿಯ ಸಿನಿಮಾ 'ಬಾಹುಬಲಿ ದಿ ಕನ್ ಕ್ಲೂಷನ್' 1800 ಕೋಟಿಗೂ ಅಧಿಕ ಗಳಿಸಿದೆ. ಈಗ 545 ಕೋಟಿ ಬಜೆಟ್ ನಲ್ಲಿ ತಯಾರಾಗಿರುವ 2.0 ಸಿನಿಮಾ ಮೊದಲ ನಾಲ್ಕು ದಿನದಲ್ಲಿ 400 ಕೋಟಿ ಗಳಿಸಿರುವುದು ನಿಜಕ್ಕೂ ದಾಖಲೆಯೇ. ಆದ್ರೆ, ಬಾಹುಬಲಿ ನಿರ್ಮಿಸಿರುವ ಲೈಫ್ ಟೈಂ ದಾಖಲೆಯನ್ನ ಬ್ರೇಕ್ ಮಾಡುತ್ತಾ ಕಾದು ನೋಡಬೇಕಿದೆ.


Click it and Unblock the Notifications











