For Quick Alerts
  ALLOW NOTIFICATIONS  
  For Daily Alerts

  11 ಗಂಟೆಯ ಬಳಿಕ ಬೆಂಗಳೂರಿನಲ್ಲಿ 'ಕಾಲಾ' ಬಿಡುಗಡೆ ?

  By Naveen
  |
  Kaala movie : ಕಾಲಾಗೆ ಬಿಡುಗಡೆ ಭಾಗ್ಯ ಸಿಗೋ ಲ‍ಕ್ಷಣಗಳು ಕಾಣುತ್ತಿವೆ | Filmibeat Kannada

  ಇಂದು ಬಿಡುಗಡೆಯಾಗಬೇಕಿದ್ದ ತಮಿಳು ಸಿನಿಮಾ 'ಕಾಲಾ'ಗೆ ತೀವ್ರ ವಿರೋಧ ವ್ಯಕ್ತವಾಗಿದೆ. ಕಾವೇರಿ ವಿಚಾರದಲ್ಲಿ ತಮಿಳುನಾಡು ಪರ ಮಾತನಾಡಿದ್ದ ನಟ ರಜನಿಕಾಂತ್ ಚಿತ್ರದ ವಿರುದ್ಧ ಕನ್ನಡಪರ ಸಂಘಟನೆಗಳು ಪ್ರತಿಭಟನೆ ನಡೆಸುತ್ತಿವೆ.

  ಈ ಕಾರಣ 'ಕಾಲಾ' ಸಿನಿಮಾ ಇದುವರೆಗೆ ಬೆಂಗಳೂರಿನ ಯಾವುದೇ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿಲ್ಲ. ಆದರೆ 11 ಗಂಟೆಯ ನಂತರ ಚಿತ್ರ ಪ್ರದರ್ಶನ ಶುರು ಆಗುವ ಸಾಧ್ಯತೆ ಇದೆ. ಈ ಬಗ್ಗೆ ಮಾತನಾಡಿರುವ ವಿತರಕ ಕನಕಪುರ ಶ್ರೀನಿವಾಸ್ 11 ಗಂಟೆಯ ಬಳಿಕ ಬೆಂಗಳೂರಿನ ಮಲ್ಟಿಪ್ಲೆಕ್ಸ್ ಹಾಗೂ ಸಿಂಗಲ್ ಸ್ಕ್ರೀನ್ ಗಳಲ್ಲಿ ಶೋ ಪ್ರಾರಂಭ ಆಗಲಿದೆ ಎಂದು ಹೇಳಿದ್ದಾರೆ.

  ಬೆಂಗಳೂರಿನ ಚಿತ್ರಮಂದಿರಗಳಲ್ಲಿ 'ಕಾಲಾ'ಗೆ ಸಿಕ್ಕಿಲ್ಲ ಬಿಡುಗಡೆ ಭಾಗ್ಯ ಬೆಂಗಳೂರಿನ ಚಿತ್ರಮಂದಿರಗಳಲ್ಲಿ 'ಕಾಲಾ'ಗೆ ಸಿಕ್ಕಿಲ್ಲ ಬಿಡುಗಡೆ ಭಾಗ್ಯ

  ಇನ್ನು ಕರ್ನಾಟಕದ 150 ಚಿತ್ರಮಂದಿರಗಳಲ್ಲಿ 'ಕಾಲಾ' ಚಿತ್ರ ಪ್ರದರ್ಶನ ನಡೆಯಲಿದೆಯಂತೆ. ಪೊಲೀಸ್ ಬಿಗಿ ಭದ್ರತೆ ನಡುವೆ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಸಿನಿಮಾ ಪ್ರದರ್ಶನ ಆಗಲಿದೆಯಂತೆ.

  ಬೆಂಗಳೂರಿನ ಪ್ರಮುಖ ಚಿತ್ರಮಂದಿರಗಳಾದ ಊರ್ವಶಿ, ಭೂಮಿಕಾ, ಅಂಜನ್, ಪೂರ್ಣಿಮಾ, ಅಭಿನಯ ಸೇರಿದಂತೆ ಹಲವೆಡೆ ಸದ್ಯದ ವರೆಗೆ ಚಿತ್ರ ಪ್ರದರ್ಶನ ನಡೆದಿಲ್ಲ. ಪ್ರದರ್ಶನ ಇನ್ನೂ ಆಗದಿದ್ದರೂ 'ಕಾಲ' ಟಿಕೆಟ್ ಗಾಗಿ ಚಿತ್ರಮಂದಿರಗಳ ಮುಂದೆ ಅಭಿಮಾನಿಗಳು ಕಾದು ಕುಳಿತಿದ್ದಾರೆ. ಜೊತೆಗೆ ಚಿತ್ರಮಂದಿರಗಳ ಮುಂದೆ ಕೂಡ 'ಕಾಲಾ' ಪೋಸ್ಟರ್ ಬ್ಯಾನರ್ ಗಳು ಕಾಣುತ್ತಿಲ್ಲ.

  English summary
  'Kaala' controversy : Distributor Kanakapura Srinivas spoke about Super Star Rajinikanth 'Kaala' Tamil movie release in Bengaluru.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X