For Quick Alerts
  ALLOW NOTIFICATIONS  
  For Daily Alerts

  ಕೊರೊನಾ ಕಾರಣದಿಂದ ವಿದೇಶಕ್ಕೆ ಹೋಗಲೇಬೇಕಾದ ಪರಿಸ್ಥಿತಿಯಲ್ಲಿ ರಕ್ಷಿತ್ ಶೆಟ್ಟಿ

  |

  ಕರೊನಾ ವೈರಸ್‌ ನಿಂದಾಗಿ ವಿದೇಶದಲ್ಲಿ ಚಿತ್ರೀಕರಣ ಆಗಬೇಕಾಗಿದ್ದ ಚಿತ್ರಗಳೆಲ್ಲವೂ ದೇಶದಲ್ಲಿಯೇ ಚಿತ್ರೀಕರಣ ಮುಗಿಸಿದವು.

  Shwetha srivatsav playing with her cute daughter.

  ದರ್ಶನ್ ಅಭಿನಯದ ರಾಬರ್ಟ್ ಸಹ ವಿದೇಶ ಚಿತ್ರೀಕರಣವನ್ನು ರದ್ದು ಮಾಡಿ ಭಾರತದಲ್ಲಿಯೇ ಚಿತ್ರೀಕರಣ ಮಾಡಿತು. ವಿದೇಶದಲ್ಲಿ ನಡೆಯಬೇಕಿದ್ದ ಯುವರಾಜ ಸಿನಿಮಾದ ಚಿತ್ರೀಕರಣವೂ ಸಹ ಕೊರೊನಾ ಕಾರಣದಿಂದಾಗಿ ರದ್ದಾಯಿತು.

  ಕೊರೊನಾ ಕಾರಣದಿಂದಾಗಿ ವಿದೇಶದಲ್ಲಿ ನಡೆಯುವ ಚಿತ್ರೀಕರಣವನ್ನು ರದ್ದು ಮಾಡಿದರೆ, ಚಾರ್ಲಿ 777 ಚಿತ್ರದ ರಕ್ಷಿತ್ ಶೆಟ್ಟಿ ಮತ್ತು ತಂದ ಕೊರೊನಾ ಬಂದ ಕಾರಣದಿಂದಲೇ ವಿದೇಶಕ್ಕೆ ಹೋಗಿ ಚಿತ್ರೀಕರಣ ಮಾಡಬೇಕಾದ ಅನಿವಾರ್ಯತೆ ಎದುರಿಸುತ್ತಿದ್ದಾರೆ.

  ಹಿಮಾಚಲ ಪ್ರದೇಶದಲ್ಲಿ ಚಿತ್ರಿಸಲು ಉದ್ದೇಶಿಸಲಾಗಿತ್ತು

  ಹಿಮಾಚಲ ಪ್ರದೇಶದಲ್ಲಿ ಚಿತ್ರಿಸಲು ಉದ್ದೇಶಿಸಲಾಗಿತ್ತು

  ಹೌದು, ಚಾರ್ಲಿ ಸಿನಿಮಾವನ್ನು ಭಾರತದ ಹಿಮಾಚಲ ಪ್ರದೇಶದಲ್ಲಿ ಚಿತ್ರೀಕರಿಸಲು ಯೋಜನೆ ರೂಪಿಸಲಾಗಿತ್ತು. ಇನ್ನೇನು ಚಿತ್ರತಂಡ ಹಿಮಾಚಲ ಪ್ರದೇಶಕ್ಕೆ ಹಾರಬೇಕು ಎನ್ನುವಷ್ಟರಲ್ಲಿ ಲಾಕ್‌ಡೌನ್ ಘೋಷಣೆ ಆಯಿತು.

  ವಿದೇಶದಲ್ಲಿಯೇ ಚಿತ್ರೀಕರಿಸುವ ಅನಿವಾರ್ಯತೆ

  ವಿದೇಶದಲ್ಲಿಯೇ ಚಿತ್ರೀಕರಿಸುವ ಅನಿವಾರ್ಯತೆ

  ಆದರೆ ಇನ್ನೇನು ಲಾಕ್‌ಡೌನ್ ಕೊನೆಗೊಳ್ಳುವ ಸಮಯ ಸನಿಹವಾಗಿದೆ ಆದರೆ ಈಗ ಚಾರ್ಲಿ 777 ಚಿತ್ರತಂಡ ವಿದೇಶಕ್ಕೆ ಹೋಗಿ ಚಿತ್ರೀಕರಿಸಬೇಕಾದ ಅನಿವಾರ್ಯತೆಗೆ ಸಿಲುಕಿದೆ.

  ಹಿಮ ಪ್ರದೇಶದಲ್ಲಿ ಚಿತ್ರೀಕರಣ ನಡೆಸಬೇಕಿದೆ

  ಹಿಮ ಪ್ರದೇಶದಲ್ಲಿ ಚಿತ್ರೀಕರಣ ನಡೆಸಬೇಕಿದೆ

  ಚಾರ್ಲಿ 777 ಸಿನಿಮಾಕ್ಕೆ ಹಿಮ ಪ್ರದೇಶದಲ್ಲಿ ಚಿತ್ರೀಕರಣ ನಡೆಸಬೇಕಾಗಿದೆ. ಹಾಗಾಗಿ ತಂಡವು ಹಿಮಾಚಲ ಪ್ರದೇಶ ಆರಿಸಿತ್ತು. ಆದರೆ ಕಾಲದಲ್ಲಿ ಅಲ್ಲಿ ಮಂಜು ಬೀಳುವುದು ಕಡಿಮೆ ಆಗಿಬಿಡುತ್ತದೆ. ಹಾಗಾಗಿ ವಿದೇಶಕ್ಕೆ ತೆರಳಿಯೇ ಚಿತ್ರೀಕರಣ ಮಾಡಬೇಕಿದೆ.

  ನವೆಂಬರ್ ವರೆಗೂ ಕಾಯಬೇಕಾಗುತ್ತದೆ

  ನವೆಂಬರ್ ವರೆಗೂ ಕಾಯಬೇಕಾಗುತ್ತದೆ

  ಹಿಮಾಚಲ ಪ್ರದೇಶದಲ್ಲಿ ಚಿತ್ರೀಕರಣ ಮಾಡಬೇಕೆಂದರೆ ನವೆಂಬರ್ ವರೆಗೂ ಕಾಯಬೇಕಾಗುತ್ತದೆ. ಹಾಗಾಗಿ ಹಿಮಚ್ಛಾಧಿತ ಪ್ರದೇಶವುಳ್ಳ ಯಾವುದಾದರೂ ದೇಶಕ್ಕೆ ತೆರಳಿ ಅಲ್ಲಿಯೇ ಚಿತ್ರೀಕರಣ ಮಾಡುವ ಉದ್ದೇಶವನ್ನು ಚಿತ್ರತಂಡ ವ್ಯಕ್ತಪಡಿಸಿದೆ.

  English summary
  Actor Rakshit Shetty and team planing to go abroad for filming of their movie Charlie 777. They will go after the lock down ends.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X