For Quick Alerts
  ALLOW NOTIFICATIONS  
  For Daily Alerts

  ನಾಯಿ ಜೊತೆ ಕಾಶ್ಮೀರ ಕಣಿವೆಯಲ್ಲಿ ನಟ ರಕ್ಷಿತ್ ಶೆಟ್ಟಿ

  |

  ನಟ ರಕ್ಷಿತ್ ಶೆಟ್ಟಿ ಅವರು ಕಾಶ್ಮೀರಕ್ಕೆ ಹೋಗಿದ್ದಾರೆ. ತಮ್ಮ 777 ಚಾರ್ಲಿ ಸಿನಿಮಾದ ಕೊನೆಯ ಹಂತದ ಚಿತ್ರೀಕರಣಕ್ಕಾಗಿ ಅವರು ಕಾಶ್ಮೀರದಲ್ಲಿದ್ದಾರೆ.

  ರಕ್ಷಿತ್ ಶೆಟ್ಟಿ ಮತ್ತು ಚಿತ್ರತಂಡವು ಕಣಿವೆಯ ಸುಂದರ, ಪ್ರಶಾಂತ ಸ್ಥಳಗಳಲ್ಲಿ 777 ಚಾರ್ಲಿ ಸಿನಿಮಾದ ಚಿತ್ರೀಕರಣ ನಡೆಸುತ್ತಿದೆ. ಕಾಶ್ಮೀರ ಮಾತ್ರವಲ್ಲದೆ, ಚಂಡೀಘಡ, ಹಿಮಾಚಲ ಪ್ರದೇಶಗಳಲ್ಲಿ ಸಹ ಚಿತ್ರೀಕರಣ ನಡೆಯಲಿದೆ.

  ಚಿತ್ರದ ಕ್ಲೈಮ್ಯಾಕ್ಸ್‌ ದೃಶ್ಯಕ್ಕೆ ಹಿಮ ಬೀಳುವ ಸನ್ನಿವೇಶ ಬೇಕು, ಆ ಸನ್ನಿವೇಶ ಡಿಸೆಂಬರ್ ನಲ್ಲಿ ದೊರೆಯುತ್ತದೆ. ಈಗ ಕ್ಲೈಮ್ಯಾಕ್ಸ್‌ಗೂ ಮುನ್ನಾ ಇರುವ ದೃಶ್ಯಗಳನ್ನು ಚಿತ್ರೀಕರಿಸಿಕೊಳ್ಳುತ್ತಿದ್ದೇವೆ ಎಂದಿದ್ದಾರೆ ಸಿನಿಮಾದ ನಿರ್ದೇಶಕ ಕಿರಣ್ ರಾಜ್.

  ಕೆಲವು ದಿನಗಳ ಹಿಂದಷ್ಟೆ ಇದೇ ಸಿನಿಮಾದ ಚಿತ್ರೀಕರಣ, ರಾಜಸ್ಥಾನದ ಜೈಪುರ ಹಾಗೂ ಇನ್ನೂ ಹಲವು ಕಡೆಗಳಲ್ಲಿ ನಡೆದಿದೆ. ಇದೀಗ ಚಿತ್ರತಂಡವು ಕಾಶ್ಮೀರ, ಹಿಮಾಚಲ ಪ್ರದೇಶ, ಚಂಡೀಘಡಗಳಲ್ಲಿ ಚಿತ್ರೀಕರಣ ನಡೆಸಲಿದೆ.

  ರಕ್ಷಿತ್ ಶೆಟ್ಟಿ ನಾಯಕರಾಗಿರುವ ಈ ಸಿನಿಮಾಕ್ಕೆ ಶಾರದಾ ಶೃಂಗೇರಿ ನಾಯಕಿ, ರಾಜ್ ಬಿ ಶೆಟ್ಟಿ, ದಾನಿಶ್ ಸೇಟ್ ಇನ್ನೂ ಹಲವರು ನಟಿಸಿದ್ದಾರೆ. ಸಿನಿಮಾವನ್ನು ಪುಷ್ಕರ್ ಮಲ್ಲಿಕಾರ್ಜುನಯ್ಯ ನಿರ್ಮಿಸಿದ್ದಾರೆ.

  ಈ ಸಿನಿಮಾ ನಂತರ ರಕ್ಷಿತ್ ಶೆಟ್ಟಿ 'ಸಪ್ತಸಾಗರದಾಚೆ ಎಲ್ಲೊ' ಸಿನಿಮಾದಲ್ಲಿ ನಟಿಸಲಿದ್ದಾರೆ, ಆ ನಂತರ ತಮ್ಮದೇ ನಿರ್ದೇಶನದ ಸಿನಿಮಾದಲ್ಲಿ ನಟಿಸುವ ಸಾಧ್ಯತೆ ಇದೆ. ನಂತರ ರಿಷಬ್ ಶೆಟ್ಟಿ ನಿರ್ದೇಶನದ ಕಿರಿಕ್ ಪಾರ್ಟಿ 2 ಕೈಗೆತ್ತಿಕೊಳ್ಳಲಿದ್ದಾರೆ.

  English summary
  Actor Rakshit Shetty and team were in Kashir for 777 charlie shooting. This will be last schedule of shooting.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X