»   » ಕ್ಯಾಮೆರಾ ಕಣ್ಣಲ್ಲಿ ಸೆರೆಯಾದ 'ಕಿರಿಕ್ ಜೋಡಿ' ಅದ್ಧೂರಿ ನಿಶ್ಚಿತಾರ್ಥ

ಕ್ಯಾಮೆರಾ ಕಣ್ಣಲ್ಲಿ ಸೆರೆಯಾದ 'ಕಿರಿಕ್ ಜೋಡಿ' ಅದ್ಧೂರಿ ನಿಶ್ಚಿತಾರ್ಥ

Posted By:
Subscribe to Filmibeat Kannada

ನಿರೀಕ್ಷೆಯಂತೆ ಜುಲೈ 3 ರಂದು 'ಕಿರಿಕ್ ಜೋಡಿ'ಯ ನಿಶ್ಚಿತಾರ್ಥ ಅದ್ಧೂರಿಯಾಗಿ ನೆರವೇರಿದೆ. ರಕ್ಷಿತ್ ಶೆಟ್ಟಿ ಮತ್ತು ರಶ್ಮಿಕಾ ಮಂದಣ್ಣ ಜೀವನದ ಮಧುರ ಕ್ಷಣಕ್ಕೆ ಕುಟುಂಬಸ್ಥರು, ಆಪ್ತರು, ಸ್ನೇಹಿತರು ಎಲ್ಲರು ಸಾಕ್ಷಿಯಾದರು.

ಕೊಡಗಿನ ವಿರಾಜಪೇಟೆಯ ಸೆರಿನಿಟಿ ಹಾಲ್ ನಲ್ಲಿ ರಕ್ಷಿತ್-ರಶ್ಮಿಕಾ ಅವರ ಎಂಗೇಜ್ ಮೆಂಟ್ ಕಲರ್ ಫುಲ್ ಆಗಿ ಮುಗಿದಿದೆ. ರಕ್ಷಿತ್ ಮತ್ತು ರಶ್ಮಿಕಾ ಪರಸ್ಪರ ಉಂಗುರ ಬದಲಾಯಿಸಿಕೊಂಡು ದಾಂಪತ್ಯ ಜೀವನದ ಮೊದಲ ಹೆಜ್ಜೆ ಇಟ್ಟರು.

ಸ್ಯಾಂಡಲ್ ವುಡ್ ನ ಈ ಯುವತಾರೆಯ ನಿಶ್ಚಿತಾರ್ಥದಲ್ಲಿ ಹತ್ತು ಹಲವು ವಿಶೇತೆಗಳು ಗಮನ ಸೆಳೆಯಿತು. ಈ ವಿಶೇಷತೆಗಳು ಕ್ಯಾಮೆರಾ ಕಣ್ಣಲ್ಲಿ ಸೆರೆಯಾಗಿದೆ. ಈ ಅದ್ಭುತ ಕ್ಷಣಗಳನ್ನ ಚಿತ್ರಗಳ ಸಮೇತ ನೋಡಿಕೊಂಡು ಬರೋಣ ಬನ್ನಿ......ಮುಂದೆ ಓದಿ.....

ಸೆರಿನಿಟಿ ಹಾಲ್ ಗೆ ಬಂದ 'ಕಿರಿಕ್ ಜೋಡಿ'

ವಿರಾಜಪೇಟೆಯಲ್ಲಿರುವ ಸೆರಿನಿಟಿ ಹಾಲ್ ಗೆ ನವಜೋಡಿಗಳು ಸಂಜೆ 6.30ಕ್ಕೆ ಆಗಮಿಸಿದ ಕ್ಷಣ ಇದು. ರಕ್ಷಿತ್ ಮತ್ತು ರಶ್ಮಿಕಾ ಜೋಡಿಯ ನಿಶ್ಚಿತಾರ್ಥ ಕಾರ್ಯಕ್ರಮವನ್ನ ಈ ಸೆರಿನಿಟಿ ಹಾಲ್ ನಲ್ಲಿ ಅಯೋಜಿಸಲಾಗಿತ್ತು.

ವಿಡಿಯೋ: ರಕ್ಷಿತ್ ಶೆಟ್ಟಿ-ರಶ್ಮಿಕಾ ಮಂದಣ್ಣ ಜೀವನದ ಸುವರ್ಣ ಕ್ಷಣ

ವೇದಿಕೆ ಮೇಲೆ ಕಂಗೊಳಿಸಿದ ರಾಜ-ರಾಣಿ

ರಕ್ಷಿತ್ ಮತ್ತು ರಶ್ಮಿಕಾ ಅವರ ಎಂಗೇಜ್ ಮೆಂಟ್ ಗಾಗಿ ಇಡೀ ವೇದಿಕೆಯಲ್ಲಿ ಪೀಚ್ ಕಲರ್ ನಲ್ಲಿ ಶೃಂಗಾರಗೊಳಿಸಲಾಗಿತ್ತು. ನವಜೋಡಿಗಳು ಕೂಡ ಪೀಚ್ ಕಲರ್ ಕಾಸ್ಟ್ಯೂಮ್ ನಲ್ಲಿ ರಾಜ-ರಾಣಿಯಂತೆ ವೇದಿಕೆ ಮೇಲೆ ಕಂಗೊಳಿಸಿದರು.

ಎಂಗೇಜ್ ಆದ 'ಕಿರಿಕ್' ಜೋಡಿ: ಉಂಗುರ ಬದಲಿಸಿಕೊಂಡ ರಕ್ಷಿತ್-ರಶ್ಮಿಕಾ

ಜ್ಯೋತಿ ಬೆಳಗಿಸಿದ ರಕ್ಷಿತ್, ರಶ್ಮಿಕಾ ತಾಯಿ

ಕರ್ಣ ಮತ್ತು ಸಾನ್ವಿಯ ನಿಶ್ಚಿತಾರ್ಥ ಕಾರ್ಯಕ್ರಮ ಆರಂಭಕ್ಕೂ ಮುನ್ನ ನಟ ರಕ್ಷಿತ್ ಶೆಟ್ಟಿ ಮತ್ತು ರಶ್ಮಿಕಾ ತಾಯಿ ಇಬ್ಬರು ಜ್ಯೋತಿ ಬೆಳಗಿಸಿದರು. ಈ ವೇಳೆ ಇಬ್ಬರು ಒಂದೇ ಫ್ರೇಮ್ ನಲ್ಲಿ ಸರೆಯಾಗಿದ್ದು ಹೀಗೆ.

ರಕ್ಷಿತ್-ರಶ್ಮಿಕಾ ನಿಶ್ಚಿತಾರ್ಥದಲ್ಲಿ 30ಕ್ಕೂ ಹೆಚ್ಚು ಬಗೆಯ ಖಾದ್ಯಗಳು, ಪಟ್ಟಿ ಇಲ್ಲಿದೆ

ಉಂಗುರ ಬದಲಿಸಿದ 'ಕಿರಿಕ್ ಪಾರ್ಟಿ'

ರಕ್ಷಿತ್ ಶೆಟ್ಟಿ ಅವರು ಭಾವಿ ಸಂಗಾತಿ ರಶ್ಮಿಕಾ ಮಂದಣ್ಣ ಅವರಿಗೆ ವಜ್ರದ ಉಂಗುರ ತೊಡಿಸಿದ ಮಧುರ ಕ್ಷಣ.

ಭಾವಿ ಸೊಸೆಗೆ ರಕ್ಷಿತ್ ಶೆಟ್ಟಿ ತಾಯಿಯ ಸ್ಪೆಷಲ್ ಉಡುಗೊರೆ ಏನು?

ರಶ್ಮಿಕಾಗೆ ಉಂಗುರ ತೊಡಿಸಿದ ರಕ್ಷಿತ್

ನಂತರ ರಶ್ಮಿಕಾ ಮಂದಣ್ಣ ಅವರು ತಮ್ಮ ಭಾವಿ ಪತಿ ರಕ್ಷಿತ್ ಶೆಟ್ಟಿ ಅವರಿಗೆ ವಜ್ರದ ಉಂಗುರ ತೊಡಿಸಿದ ಕ್ಷಣ.

'ಹೃದಯದ ಒಡತಿ' ರಶ್ಮಿಕಾಗೆ ರಕ್ಷಿತ್ ಶೆಟ್ಟಿ ಕೊಟ್ಟ 'ಒಲವಿನ ಉಡುಗೊರೆ' ಏನು.?

ನಿಶ್ಚಿತಾರ್ಥದ ನಂತರ ನವಜೋಡಿ

ಪರಸ್ಪರ ಉಂಗುರ ಬದಲಿಸಿಕೊಂಡ ನಂತರ ನವ ಜೋಡಿಗಳು 'ಮುಗುಳುನಗೆ' ಬೀರಿದ್ದು ಹೀಗೆ.

'ರಕ್ಷಿತ್-ರಶ್ಮಿಕಾ'ಗೆ ಬಹುದೊಡ್ಡ ಅಚ್ಚರಿ ನೀಡಿದ 'ಫಿಲ್ಮ್ ಫೇರ್' ಸಮಾರಂಭ.!

ಉಂಗುರು ಇದೇ ನೋಡಿ

ರಕ್ಷಿತ್ ಶೆಟ್ಟಿ ಮತ್ತು ರಶ್ಮಿಕಾ ಮಂದಣ್ಣ ಅವರು ನಿಶ್ಚಿತಾರ್ಥದ ವಿಶೇಷವಾಗಿ ವಜ್ರದ ಉಂಗುರ ಬದಲಿಸಿಕೊಂಡರು. ಆ ವಜ್ರದ ಉಂಗುರ ಇದೇ ನೋಡಿ.

ಭಾವಿ ಅಳಿಯ ರಕ್ಷಿತ್ ಶೆಟ್ಟಿಗೆ ರಶ್ಮಿಕಾ ತಂದೆ ಕೊಟ್ಟ ದುಬಾರಿ ಉಡುಗೊರೆ ಏನ್ಗೊತ್ತೇ.?

ಆಕರ್ಷಕ ಕೇಕ್

'ಕಿರಿಕ್ ಪಾರ್ಟಿ' ಎಂಗೇಜ್ ಮೆಂಟ್ ವಿಶೇಷವಾಗಿ ಸ್ಪೆಷಲ್ ಕೇಕ್ ತಯಾರಿಸಲಾಗಿತ್ತು. ನಿಶ್ಚಿತಾರ್ಥಕ್ಕಾಗಿ 18 ಕೆ.ಜಿ ಕೇಕ್ ಸಿದ್ದ ಮಾಡಲಾಗಿತ್ತು. ಆ ಕೇಕ್ ಇದೇ ನೋಡಿ.

ಕೇಕ್ ಕತ್ತರಿಸಿದ ಸಂಭ್ರಮ

ನವಜೋಡಿಗಳ ಸಂತೋಷದ ಸಂಭ್ರಮವನ್ನ ಹೆಚ್ಚಿಸಲು ಕೇಕ್ ಸಿದ್ದಮಾಡಲಾಗಿತ್ತು. ಈ ಕೇಕ್ ನ್ನ 'ಕಿರಿಕ್ ಜೋಡಿ' ಕತ್ತರಿಸಿ ಖುಷಿ ಪಟ್ಟರು.

'ಶಾಂಪೇನ್' ಸಂಭ್ರಮ

ಕೇಕ್ ಕತ್ತರಿಸಿದ ನಂತರ ರಕ್ಷಿತ್ ಶೆಟ್ಟಿ 'ಶಾಂಪೇನ್' ಬಾಟಲ್ ಓಪನ್ ಮಾಡಿ ಖುಷಿ ಪಟ್ಟರು.

ಫ್ಯಾಮಿಲಿ ಫೋಟೋ

ಉಂಗುರ ಬದಲಿಸಿಕೊಂಡು, ಕೇಕ್ ಕತ್ತರಿಸಿದ ಸಂಭ್ರಮಿಸಿದ ನಂತರ ಸೆರೆಯಾದ ಎರಡು ಕುಟುಂದ ಫ್ಯಾಮಿಲಿ ಫೋಟೋ ಇದು. ರಕ್ಷಿತ್ ಶೆಟ್ಟಿ ಅವರ ತಂದೆ-ತಾಯಿ, ಮತ್ತು ರಶ್ಮಿಕಾ ಅವರ ತಂದೆ-ತಾಯಿ ಒಟ್ಟಿಗೆ ವೇದಿಕೆಯಲ್ಲಿ ಕಾಣಿಸಿಕೊಂಡರು.

ಶೆಟ್ಟರ ಸ್ನೇಹಿತರು

'ಕಿರಿಕ್ ಜೋಡಿ'ಯ ಎಂಗೇಜ್ ಮೆಂಟ್ ಕಾರ್ಯಕ್ರಮಕ್ಕೆ ಆಗಮಿಸಿದ್ದ ಶೆಟ್ಟರ ಬಳಗ ಸೆಲ್ಫಿ ತೆಗಿಸಿಕೊಂಡಾಗ ಸೆರೆಯಾದ ಚಿತ್ರ. ಯಜ್ಞಾ ಶೆಟ್ಟಿ, ರಿಷಬ್ ಶೆಟ್ಟಿ ಮತ್ತು ಪತ್ನಿ, ಪ್ರಮೋದ್ ಶೆಟ್ಟಿ, ಶೀತಲ್ ಶೆಟ್ಟಿ, ಸ್ಪರ್ಶಾ ರೇಖಾ ಭಾಗಿಯಾಗಿದ್ದರು.

ಹಾಗೆ ಸುಮ್ಮನೆ

ನಿಶ್ಚಿತಾರ್ಥದ ವೇಳೆ ರಕ್ಷಿತ್-ರಶ್ಮಿಕಾ ಮಕ್ಕಳ ಜೊತೆ ಕಾಣಿಸಿಕೊಂಡ ಒಂದು ಸುಂದರ ಕ್ಷಣ.

ರಕ್ಷಿತ್ ಶೆಟ್ಟಿಗೆ ಮೊದಲ ಮತ್ತು ಕೊನೆಯ ಸೆಲೆಬ್ರಿಟಿ ಕ್ರಶ್ ಯಾರ ಮೇಲೆ?

English summary
Kannada Actor Rakshit Shetty got engaged to Kannada Actress Rashmika Mandanna on July 3rd in Virajpet, Kodagu.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada