»   » ಟ್ವಿಟ್ಟರ್ ನಲ್ಲೂ 'ಕಿರಿಕ್ ಪಾರ್ಟಿ' ಹೈಕ್ಳ ಹವಾ ಜೋರಾಗಿದೆ!

ಟ್ವಿಟ್ಟರ್ ನಲ್ಲೂ 'ಕಿರಿಕ್ ಪಾರ್ಟಿ' ಹೈಕ್ಳ ಹವಾ ಜೋರಾಗಿದೆ!

Posted By:
Subscribe to Filmibeat Kannada

ರಕ್ಷಿತ್ ಶೆಟ್ಟಿ ಅಭಿನಯದ ರಿಷಬ್ ಶೆಟ್ಟಿ ನಿರ್ದೇಶನದ 'ಕಿರಿಕ್ ಪಾರ್ಟಿ' ಚಿತ್ರಕ್ಕೆ ಇದ್ದ ಕಂಟಕ ಕೊನೆಕ್ಷಣದಲ್ಲಿ ನಿವಾರಣೆಯಾಗಿ ರಾಜ್ಯದಾದ್ಯಂತ ಶುಕ್ರವಾರ ಚಿತ್ರ ತೆರೆ ಕಂಡಿದೆ. ಮೊದಲ ದಿನದ ಮೊದಲ ಪ್ರದರ್ಶನದ ವೇಳೆಗೆ ಬೆಂಗಳೂರಿನಲ್ಲಿ ಟ್ವಿಟ್ಟರ್ ಟ್ರೆಂಡ್ ನಲ್ಲಿ ಕಿರಿಕ್ ಪಾರ್ಟಿ ಟಾಪ್ ಗೇರಿದೆ.

ಮೈಕ್ರೋ ಬ್ಲಾಗಿಂಗ್ ತಾಣ ಟ್ವಿಟ್ಟರ್ ನಲ್ಲಿ ಅಭಿಮಾನಿಗಳು ಚಿತ್ರದ ಮೊದಲ ದಿನದ ಅಬ್ಬರ, ಟಾಕೀಸ್ ಗಳ ಮುಂದಿರುವ ಕಟೌಟ್ ಎತ್ತರ, ಫೋಸ್ಟರ್ ಗಳ ಚಿತ್ತಾರವನ್ನೆಲ್ಲ ಟ್ವೀಟ್ ಮಾಡುತ್ತಿದ್ದಾರೆ.

ರಾಜ್ಯದ ಯಾವ ಜಿಲ್ಲೆಯಲ್ಲಿ ಯಾವ ಚಿತ್ರಮಂದಿರದಲ್ಲಿ ಕಿರಿಕ್ ಪಾರ್ಟಿ ಚಿತ್ರ ನೋಡಬಹುದು, ಚಿತ್ರದ ಹಾಡುಗಳು ಹೇಗಿವೆ? ಲಹರಿ ವೇಲು ಕಿರಿಕ್ ಮಾಡಿದ Who r u? ಸಾಂಗ್ ಇದ್ಯಾ? ಎಂಬ ಎಲ್ಲಾ ಕುತೂಹಲಕ್ಕೂ ಇಲ್ಲಿ ಉತ್ತರವಿದೆ. ಮಧ್ಯಾಹ್ನದ ಹೊತ್ತಿಗೆ ಒಂದು ಹಂತಕ್ಕೆ ಚಿತ್ರದ ಹಣೆಬರಹವನ್ನು 140 ಪ್ಲಸ್ ಕ್ಯಾರೆಕ್ಟರ್ ಗಳಲ್ಲಿ ನಮ್ಮ ಸಿನಿಪ್ರೇಮಿಗಳು ಕೆತ್ತಿಬಿಡುತ್ತಾರೆ. ಅಷ್ಟರಲ್ಲಿ ಟ್ರೆಂಡಿಂಗ್ ನಲ್ಲಿರುವ ಟ್ವೀಟ್ ಗಳನ್ನು ಒಮ್ಮೆ ನೋಡಿ...

ರಕ್ಷಿತ್ ಶೆಟ್ಟಿ ಅವರು ಈ ಚಿತ್ರದಲ್ಲಿ ನಟನಾಗಿ ಅಷ್ಟೇ ಅಲ್ಲ, ಚಿತ್ರಕಥೆಗಾರ, ನಿರ್ಮಾಪಕನಾಗಿ ಕೂಡಾ ಪಾತ್ರವಹಿಸಿರುವುದು ಗಮನಾರ್ಹ. ಹೊಸ ಪ್ರತಿಭೆಗಳಾದ ರಶ್ಮಿಕಾ ಮಂದಣ್ಣ, ಸಂಯುಕ್ತಾ ಹೆಗಡೆ ಅವರಿಗೆ ಈಗಾಗಲೇ ಫ್ಯಾನ್ ಫಾಲೋವರ್ಸ್ ಹೆಚ್ಚಾಗುತ್ತಿದೆ. ಕಾಲೇಜು ದಿನದ ಕಥೆ-ವ್ಯಥೆ ಹೊಂದಿರುವ ಈ ಚಿತ್ರ ಸೂಜಿಗಲ್ಲಿನಂತೆ ಯುವಕ-ಯುವತಿಯರನ್ನು ಚಿತ್ರಮಂದಿರದತ್ತ ಸೆಳೆಯುತ್ತಿದೆ..

ರಕ್ಷಿತ್ ಶೆಟ್ಟಿಗೆ ಮಹತ್ವದ ಚಿತ್ರ

ರಕ್ಷಿತ್ ಶೆಟ್ಟಿ ಅವರು ಈ ಚಿತ್ರದಲ್ಲಿ ನಟನಾಗಿ ಅಷ್ಟೇ ಅಲ್ಲ, ಚಿತ್ರಕಥೆಗಾರ, ನಿರ್ಮಾಪಕನಾಗಿ ಕೂಡಾ ಪಾತ್ರವಹಿಸಿರುವುದು ಗಮನಾರ್ಹ. ಹೊಸ ಪ್ರತಿಭೆಗಳಾದ ರಶ್ಮಿಕಾ ಮಂದಣ್ಣ, ಸಂಯುಕ್ತಾ ಹೆಗಡೆ ಅವರಿಗೆ ಈಗಾಗಲೇ ಫ್ಯಾನ್ ಫಾಲೋವರ್ಸ್ ಹೆಚ್ಚಾಗುತ್ತಿದೆ.

ಚಿತ್ರದ ಫಸ್ಟ್ ಹಾಫ್ ಏನು ಕಥೆ?

3 ವರ್ಷ, 6 ಸೆಮಿಸ್ಟರ್, 2 ಬ್ಯಾಕ್ ಲಾಗ್ ನಂತರ ಒಳ್ಳೆ ಟ್ವಿಸ್ಟ್, ಜತೆಗೆ ಸಕತ್ ಸಾಂಗ್ಸು, ಸೂಪರ್ ಗುರೂ

ವರ್ಷದ ಕೊನೆ ಒಂದು ಒಳ್ಳೆ ರೀತಿಯಲ್ಲಿ

ವರ್ಷದ ಕೊನೆಯಲ್ಲಿ ಒಂದು ಒಳ್ಳೆ ರೀತಿಯಲ್ಲಿ ಸಂಭ್ರಮಾಚರಣೆಯಲ್ಲಿ ತೊಡಗಲು ಕಿರಿಕ್ ಪಾರ್ಟಿ ಚಿತ್ರ ಸಿಕ್ಕಿದೆ. ಚಿತ್ರಕ್ಕೆ ಶುಭವಾಗಲಿ.

ಟ್ವಿಟ್ಟರ್ ನಲ್ಲಿ ಕಿರಿಕ್ ಪಾರ್ಟಿ ಟ್ರೆಂಡಿಂಗ್

ಟ್ವಿಟ್ಟರ್ ನಲ್ಲಿ ಕಿರಿಕ್ ಪಾರ್ಟಿ ಟ್ರೆಂಡಿಂಗ್ ಶುರುವಾಗಿದೆ. ಬೆಂಗಳೂರಿನ ಟ್ವಿಟ್ಟರ್ ಸರ್ಚ್ ನಲ್ಲಿ ಸತತ ನಾಲ್ಕು ಗಂಟೆಗಳಿಂದ ಟ್ರೆಂಡಿಂಗ್ ನಲ್ಲಿದೆ.

ಚಿತ್ರದ ಟಿಕೆಟ್ ದಾಖಲೆ ಮಾರಾಟ

ಕಿರಿಕ್ ಪಾರ್ಟಿ ಚಿತ್ರದ ಟಿಕೆಟ್ ಗಳು ದಾಖಲೆ ಪ್ರಮಾಣದಲ್ಲಿ ಮಾರಾಟವಾಗಿ ಮಿ ಅಂಡ್ ಮಿಸ್ಸೆಸ್ ರಾಮಾಚಾರಿ ದಾಖಲೆ ಮುರಿದಿದೆ ಎಂದು ಟ್ವೀಟ್ ಮಾಡಿರುವ ಅಭಿಶೇಕ್ ಎಸ್.ಎನ್

ರಕ್ಷಿತ್ ಶೆಟ್ಟಿ ಕಟೌಟ್ ನೋಡು ಮಗಾ

ರಕ್ಷಿತ್ ಶೆಟ್ಟಿ ಕಟೌಟ್ ನೋಡು ಮಗಾ.... ಏನು ಸಕತ್ತಾಗಿದೆ..ಎಂದು ಚಿತ್ರದ ಕಟೌಟ್, ಪೋಸ್ಟರ್ ಗಳನ್ನು ಪೋಸ್ಟ್ ಮಾಡುತ್ತಿರುವ ಅಭಿಮಾನಿಗಳು.

ದಾವಣೆಗೆರೆಯಿಂದ ಬಂದ ರಕ್ಷಿತ್ ಅಭಿಮಾನಿ

ರಕ್ಷಿತ್ ಅಭಿನಯದ ಕಿರಿಕ್ ಪಾರ್ಟಿ ನೋಡಲು ದಾವಣಗೆರೆಯಿಂದ ಬೆಂಗಳೂರಿಗೆ ಬಂದಿದ್ದೇನೆ ಎಂದ ಅಭಿಮಾನಿ.

ಚಿತ್ರದ ಸೆಕೆಂಡ್ ಹಾಫ್ ಕೂಡಾ ಸೂಪರ್

ಚಿತ್ರದ ಸೆಕೆಂಡ್ ಹಾಫ್ ಕೂಡಾ ಸೂಪರ್, ರೋಮಾನ್ಸ್, ಕಾಮಿಡಿ, ಗೆಳೆತನದ ಮೌಲ್ಯಗಳನ್ನು ಸಕತ್ತಾಗಿ ಹೆಣೆಯಲಾಗಿದೆ.

English summary
Rakshit Shetty Starrer Kirik Party film is trending on Twitter(Bengaluru) on First Day First Show today(December 30) Catch the latest reactions from and fans. Kirik Party film directed by Rishab Shetty, produced by G S Guptha and Rakshit Shetty. The film also has Rashmika Mandanna, Samyuktha Hegde and others.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada