»   » ನಿರೀಕ್ಷಿಸಿ..ರಕ್ಷಿತ್-ಪವನ್ ಕಾಂಬಿನೇಷನ್ ಚಿತ್ರ

ನಿರೀಕ್ಷಿಸಿ..ರಕ್ಷಿತ್-ಪವನ್ ಕಾಂಬಿನೇಷನ್ ಚಿತ್ರ

Posted By:
Subscribe to Filmibeat Kannada

ಹೌದು, ನಾವಿಬ್ಬರು ಇತ್ತೀಚೆಗೆ ಭೇಟಿ ಮಾಡಿ ಮಾತುಕತೆ ನಡೆಸಿದಂತೆ ನಮ್ಮಲ್ಲಿರುವ ಚಿತ್ರಕಥೆಯನ್ನು ಎರಡು ವಿಭಿನ್ನ ನಿರೂಪಣೆ ಮೂಲಕ ಬೆಳ್ಳಿತೆರೆಗೆ ತರಲು ಇಚ್ಛಿಸಿದ್ದೇವೆ. ಪ್ರೇಕ್ಷಕರು ಎರಡು ಚಿತ್ರವನ್ನು ಒಂದೇ ಬಾರಿಗೆ ನೋಡುವ ಅನುಭವ ಪಡೆಯಬಹುದು. ಅಫ್ ಕೋರ್ಸ್ ಈ ಚಿತ್ರ ಕೂಡಾ ಪ್ರೇಕ್ಷಕರೇ ಪ್ರಭುಗಳು ಎಂಬ ತತ್ತ್ವಕ್ಕೆ ಬದ್ಧವಾಗಿದ್ದು, ಲೂಸಿಯಾ ಮಾದರಿಯಲ್ಲಿ ಸಾರ್ವಜನಿಕರೇ ನಿರ್ಮಾಣ ಮಾಡುವ ಚಿತ್ರವಾಗಿರುತ್ತದೆ ಎಂದು ನಿರ್ದೇಶಕ ಪವನ್ ಕುಮಾರ್ ಅವರು ತಮ್ಮ ಫೇಸ್ ಬುಕ್ ಪುಟದಲ್ಲಿ ಹೇಳಿಕೊಂಡಿದ್ದಾರೆ.

ಇತ್ತೀಚೆಗೆ ಉಳಿದವರು ಕಂಡಂತೆ ಖ್ಯಾತಿಯ ನಿರ್ದೇಶಕ ರಕ್ಷಿತ್ ಶೆಟ್ಟಿ ಹಾಗೂ ಲೂಸಿಯಾ ಖ್ಯಾತಿಯ ಪವನ್ ಕುಮಾರ್ ಅವರು ಭೇಟಿ ಮಾಡಿದ್ದು ದೊಡ್ಡ ಸುದ್ದಿಯಾಗಿತ್ತು. ಇಬ್ಬರ ಭೇಟಿ ಉದ್ದೇಶ ಈಗ ಬಹಿರಂಗಗೊಂಡಿದ್ದು, ಸುದ್ದಿಯನ್ನು ಸ್ವತಃ ಪವನ್ ಅವರು ಖಚಿತಪಡಿಸಿದ್ದಾರೆ.

Rakshit Shetty and Pawan Kumar to co direct kannada film

ಚಿತ್ರದ ಮೊದಲರ್ಧ ಭಾಗವನ್ನು ಪವನ್ ನಿರ್ದೇಶಿಸಿದರೆ, ಉಳಿದ ಭಾಗಕ್ಕೆ ರಕ್ಷಿತ್ ಆಕ್ಷನ್ ಕಟ್ ಹೇಳಲಿದ್ದಾರೆ. ಹೊಸ ಚಿತ್ರಕ್ಕೆ ನಿರ್ಮಾಪಕರ ಕೊರತೆ ಏನೂ ಎದುರಾಗಿಲ್ಲ. ಸಾರ್ವಜನಿಕರು ಹಣ ಹಾಕಿ, ವಿತರಣೆ ಮಾಡುವ ಉದ್ದೇಶವಿದ್ದರೂ ವೃತ್ತಿಪರ ನಿರ್ಮಾಪಕರು ಕೂಡಾ ಕೈಜೋಡಿಸುವ ಸಾಧ್ಯತೆಯಿದೆ. ಒಟ್ಟಾರೆ ಕಡಿಮೆ ಬಂಡಾವಳ ಮೂಲಕ ಚಿತ್ರವನ್ನು ಸೇಫ್ ಮಾಡುವುದು ನಮ್ಮ ಉದ್ದೇಶ ಎಂದು ಪವನ್ ಹೇಳಿದ್ದಾರೆ.

ರಕ್ಷಿತ್ ಇನ್ನೂ ಚಿತ್ರಕ್ಕೆ ಒದಗಿಸಬೇಕಾಗಿದೆ.. ನನ್ನ ಭಾಗದ ಕಥೆ ಬರೆದಿದ್ದೇನೆ. ಎರಡು ಭಾಗದಲ್ಲೂ ಪ್ರತ್ಯೇಕ ತಾರಾಗಣವಿರಲಿದೆ ಎಂದು ಪವನ್ ಹೇಳಿದ್ದಾರೆ.

Post by Pawan Kumar.

English summary
True. We both had story ideas which were going to be very dragged narrative if stretched to a feature length. So we thought of doing this... You will get to watch two films at one price-Director Pawan Kumar confirms news about Rakshit Shetty and Pawan co direction movie.
Please Wait while comments are loading...