For Quick Alerts
  ALLOW NOTIFICATIONS  
  For Daily Alerts

  ಹತ್ತು ವರ್ಷದ ಸಿನಿಮಾ ಜರ್ನಿ ನೆನೆದು ಭಾವುಕರಾದ ರಕ್ಷಿತ್ ಶೆಟ್ಟಿ ನೀಡಿದ ಹೊಸ ಸುದ್ದಿ

  |

  ನಟ, ನಿರ್ದೇಶಕ ರಕ್ಷಿತ್ ಶೆಟ್ಟಿ ತಮ್ಮ ಸಿನಿಮಾ ಬದುಕಿಗೆ ಹತ್ತು ವರ್ಷ ತುಂಬಿದ ಸಂಭ್ರಮದಲ್ಲಿದ್ದಾರೆ. 'ನಮ್ ಏರಿಯಾದಲ್ ಒಂದ್ ದಿನ' ಚಿತ್ರದಲ್ಲಿ ನಟರಾಗಿ ಅವರು ಚಿತ್ರರಂಗಕ್ಕೆ ಪರಿಚಯವಾದವರು. ಆರಂಭದ ಸೋಲುಗಳ ಬಳಿಕ ರಕ್ಷಿತ್ ಶೆಟ್ಟಿ ಈಗ ವಿಭಿನ್ನ ಸಿನಿಮಾಗಳ ಮೂಲಕ ತಮ್ಮದೇ ಛಾಪು ಮೂಡಿಸಿದ್ದಾರೆ. ಕನ್ನಡ ಚಿತ್ರರಂಗದ ಭರವಸೆಯ ನಟ-ನಿರ್ದೇಶಕರಲ್ಲಿ ಒಬ್ಬರಾಗಿ ಸ್ಥಾನ ಪಡೆದಿದ್ದಾರೆ.

  Rakshith Shetty ಸಿನಿ ಪಯಣಕ್ಕೆ 10 ವರ್ಷ | Filmibeat Kannada

  ಈ ಹತ್ತು ವರ್ಷಗಳ ಪಯಣ ಅವರಲ್ಲಿ ಬೆರಗು ಮೂಡಿಸಿದೆ. ಏಳು ಬೀಳುಗಳ ನಡುವೆಯೇ ಜನರು ಗುರುತಿಸುವ ಮಟ್ಟಿಗೆ ಬೆಳೆದಿದ್ದು, ಅವರ ಮೇಲೆ ನಿರೀಕ್ಷೆಗಳು ಹೆಚ್ಚಿರುವುದು ವಿಶೇಷವೇನಲ್ಲ. ಈ ದಶಕದ ಸಂಭ್ರಮಾಚರಣೆ ಅವರನ್ನು ಭಾವುಕರನ್ನಾಗಿಸಿದೆ. ತಾವು ಬೆಳೆದು ಬಂದ ಹಾದಿಯ ಬಗ್ಗೆ ಅವರು ಸುದೀರ್ಘ ಬರಹ ಹಂಚಿಕೊಂಡಿದ್ದಾರೆ. ಅಷ್ಟೇ ಅಲ್ಲ, ಜತೆಗೆ ವಿಶೇಷ ಸುದ್ದಿಯೊಂದನ್ನೂ ನೀಡಿದ್ದಾರೆ. ಅವರಿಂದ ಮತ್ತೊಂದು ವಿಭಿನ್ನ ಬಗೆಯ ಪ್ರಯೋಗದ ಸುಳಿವು ಸಿಕ್ಕಿದೆ. ಮುಂದೆ ಓದಿ...

  ಬುನಾದಿ ಹಾಕಿದ ಚಿತ್ರ

  ಬುನಾದಿ ಹಾಕಿದ ಚಿತ್ರ

  'ನಮ್ ಏರಿಯಾದಲ್ ಒಂದಿನ' ಚಿತ್ರಕ್ಕೆ ಹತ್ತು ವರ್ಷ. ಈ ಸಿನಿಮಾ ನನ್ನ ವೃತ್ತಿ ಹಾಗೂ ಸಿನಿಮಾ ನಿರ್ದೇಶನಕ್ಕೆ ಬುನಾದಿ ಹಾಕಿತ್ತು. ಇಷ್ಟು ಸುದೀರ್ಘ ಸಮಯ ಕಳೆದಿದೆ ಎನ್ನುವುದನ್ನು ನಂಬುವುದು ಕಷ್ಟವಾಗುತ್ತಿದೆ. ನಮ್ಮ ಸಿನಿಮಾ ಬಿಡುಗಡೆ ಮಾಡಲು ನಿನ್ನೆ ಮೊನ್ನೆ ಗಾಂಧಿನಗರದಲ್ಲಿ ಅಡ್ಡಾಡುತ್ತಿರುವಂತೆ ಭಾಸವಾಗುತ್ತಿದೆ ಎಂದು ರಕ್ಷಿತ್ ಶೆಟ್ಟಿ ಹೇಳಿದ್ದಾರೆ.

  ರಕ್ಷಿತ್ ಶೆಟ್ಟಿ ಸಿನಿಮಾ ಪಯಣಕ್ಕೆ 10 ವರ್ಷದ ಸಂಭ್ರಮ: ಗೆಳೆಯನಿಗೆ ಶುಭಹಾರೈಸಿದ ರಿಷಬ್ ಶೆಟ್ಟಿರಕ್ಷಿತ್ ಶೆಟ್ಟಿ ಸಿನಿಮಾ ಪಯಣಕ್ಕೆ 10 ವರ್ಷದ ಸಂಭ್ರಮ: ಗೆಳೆಯನಿಗೆ ಶುಭಹಾರೈಸಿದ ರಿಷಬ್ ಶೆಟ್ಟಿ

  ನಿಮ್ಮ ಯಶಸ್ಸಂತೆ ಸಂಭ್ರಮಿಸಿದ್ದೀರಿ

  ನಿಮ್ಮ ಯಶಸ್ಸಂತೆ ಸಂಭ್ರಮಿಸಿದ್ದೀರಿ

  ಆದರೆ ಕಠಿಣವಾಗಿ ಸೆಣಸಾಡುವಷ್ಟು ನನಗೆ ಧೈರ್ಯ ತುಂಬಿದವರು ನೀವೆಲ್ಲರೂ. ನನ್ನ ಪ್ರತಿ ವೈಫಲ್ಯದ ಸಂದರ್ಭದಲ್ಲಿ ಪ್ರೋತ್ಸಾಹಿಸಿದ್ದೀರಿ ಮತ್ತು ನನ್ನ ಯಶಸ್ಸನ್ನು ನಿಮ್ಮದೆಂಬಂತೆ ಸಂಭ್ರಮಿಸಿದ್ದೀರಿ. ನಿಮ್ಮೆಲ್ಲರ ಪ್ರೀತಿಯನ್ನು ಸುರಿಸುವ ಮೂಲಕ ನಾನು ಇನ್ನಷ್ಟು ಶ್ರಮಪಟ್ಟು ಕೆಲಸ ಮಾಡುವಂತೆ ನನ್ನೊಳಗಿನ ಕಿಚ್ಚನ್ನು ಉರಿಸಿದ್ದೀರಿ. ನನ್ನ ಈ ಪ್ರಯಾಣದಲ್ಲಿ ಭಾಗಿಯಾದ ಪ್ರತಿಯೊಬ್ಬರಿಗೂ ಧನ್ಯವಾದಗಳನ್ನು ಸಲ್ಲಿಸುತ್ತೇನೆ.

  ಹೊಸದಾದ ಬರಹ ಕೆಲಸ

  ಹೊಸದಾದ ಬರಹ ಕೆಲಸ

  ಇಷ್ಟು ಸಮಯ 'ಪಿಕೆ'ಯ ಕೆಲಸದಲ್ಲಿ ತೊಡಗಿಸಿಕೊಂಡಿದ್ದೆ. ಎರಡು ವಾರದ ಹಿಂದೆ ಒಂದು ಬ್ರೇಕ್ ತೆಗೆದುಕೊಳ್ಳಲು ನಿರ್ಧರಿಸಿದೆ. ಸ್ವಲ್ಪ ಸಮಯದ ಬಳಿಕ ತಾಜಾತನದೊಂದಿಗೆ ಮರಳಬಹುದು ಎಂದು. ಹೀಗಾಗಿ ಈಗ ನಾನು ಹೊಸತು ಮತ್ತು ಚಿಕ್ಕದಾದ ಬರಹ ಬರೆಯಲು ನಿರ್ಧರಿಸಿದ್ದೇನೆ. ಇದನ್ನು ಸಣ್ಣ ತಂಡದೊಂದಿಗೆ ಚಿತ್ರೀಕರಣ ಮಾಡಬಹುದು.

  ಕೊರೊನಾ ಕಾರಣದಿಂದ ವಿದೇಶಕ್ಕೆ ಹೋಗಲೇಬೇಕಾದ ಪರಿಸ್ಥಿತಿಯಲ್ಲಿ ರಕ್ಷಿತ್ ಶೆಟ್ಟಿಕೊರೊನಾ ಕಾರಣದಿಂದ ವಿದೇಶಕ್ಕೆ ಹೋಗಲೇಬೇಕಾದ ಪರಿಸ್ಥಿತಿಯಲ್ಲಿ ರಕ್ಷಿತ್ ಶೆಟ್ಟಿ

  ವಿಭಿನ್ನ ಕಿಕ್ ನೀಡುತ್ತಿದೆ

  ವಿಭಿನ್ನ ಕಿಕ್ ನೀಡುತ್ತಿದೆ

  ಈ ಸಂಕಷ್ಟದ ಸಮಯದಲ್ಲಿ ಕೆಲವೇ ಸ್ಥಳಗಳಲ್ಲಿ ಚಿತ್ರೀಕರಣ ಮಾಡುವಂತಾಗಿದೆ. ನಮ್ಮ ಕಿರುಚಿತ್ರಗಳನ್ನು ಮಾಡುವ ಸಂದರ್ಭದಲ್ಲಿ ಈ ಉಪಾಯಗಳನ್ನು ಮಾಡುತ್ತಿದ್ದೆವು. ಒಂದು ದಶಕದ ಬಳಿಕ ಈ ಎಲ್ಲ ಚೌಕಟ್ಟುಗಳನ್ನು ಗಮನದಲ್ಲಿಟ್ಟಿಕೊಂಡು ಸ್ಕ್ರೀನ್ ಪ್ಲೇ ಬರೆಯುವುದು ವಿಭಿನ್ನ ಕಿಕ್ ನೀಡುತ್ತಿದೆ ಎಂದಿದ್ದಾರೆ.

  ಶೀಘ್ರದಲ್ಲಿಯೇ ಮಾಹಿತಿ

  ಶೀಘ್ರದಲ್ಲಿಯೇ ಮಾಹಿತಿ

  ಕಾಗದದ ಮೇಲೆ ರೂಪ ಪಡೆದುಕೊಂಡಿರುವ ಬರಹದ ಬಗ್ಗೆ ಬಹಳ ಎಕ್ಸೈಟ್ ಆಗಿದ್ದೇನೆ. ಈ ಪರಿಸ್ಥಿತಿ ಇನ್ನೂ ಕೆಲವು ತಿಂಗಳು ಮುಂದುವರಿದರೆ ಈ ಪ್ರಾಜೆಕ್ಟ್‌ಅನ್ನು ಕಾರ್ಯಗತಗೊಳಿಸುತ್ತೇನೆ. ಶೀಘ್ರದಲ್ಲಿಯೇ ಇದರ ಕುರಿತು ಮತ್ತಷ್ಟು ಅಪ್‌ಡೇಟ್‌ಗಳು ನೀಡುತ್ತೇನೆ ಎಂದು ತಿಳಿಸಿದ್ದಾರೆ. ಲಾಕ್ ಡೌನ್ ಮುಗಿದ ಬಳಿಕವೂ ತಾವು ಮನೆಯಿಂದ ಹೊರಗೆ ಬರುವುದಿಲ್ಲ ಎಂದು ಅವರು ಒಮ್ಮೆ ಹೇಳಿಕೊಂಡಿದ್ದರು. ಲಾಕ್ ಡೌನ್ ಅವಧಿಯನ್ನು ಅವರು ಒಂದಷ್ಟು ಕಥೆಗಳನ್ನು ಬರೆಯಲು ವಿನಿಯೋಗಿಸಿದ್ದಾರೆ.

  English summary
  Rakshit Shetty writes an emotional note on his 10 years of journey on cinema industry and revealed about his new project.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X