For Quick Alerts
  ALLOW NOTIFICATIONS  
  For Daily Alerts

  'ಯುವರತ್ನ' ನೋಡಿ ಥ್ರಿಲ್ ಆದ ರಕ್ಷಿತ್ ಶೆಟ್ಟಿ ಹೇಳಿದ್ದು ಒಂದೇ ಮಾತು

  |

  ನಾಯಕ ನಟನೊಬ್ಬ ಮತ್ತೊಬ್ಬ ಹೀರೋನ ಸಿನಿಮಾ ನೋಡುವುದು, ನೋಡಿ ಮೆಚ್ಚಿಕೊಳ್ಳುವುದು ಅಪರೂಪ. ಆದರೆ ನಟ ರಕ್ಷಿತ್ ಶೆಟ್ಟಿ ಇದಕ್ಕೆ ಅಪವಾದ. ಒಳ್ಳೆಯ ಸಿನಿಮಾಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸದೇ ಇರುವುದಿಲ್ಲ ಅವರು.

  Recommended Video

  ಯುವರತ್ನ ನೋಡಿ ರಕ್ಷಿತ್ ಶೆಟ್ಟಿ ಹೇಳಿದ್ದು ಒಂದೇ ಮಾತು | Filmibeat Kannada

  ರಕ್ಷಿತ್ ಶೆಟ್ಟಿ ನಿನ್ನೆ ತಡರಾತ್ರಿ 'ಯುವರತ್ನ' ಸಿನಿಮಾ ನೋಡಿದ್ದಾರೆ. ಸಿನಿಮಾವನ್ನು ಬಹುವಾಗಿ ಮೆಚ್ಚಿಕೊಂಡಿರುವ ರಕ್ಷಿತ್ ಶೆಟ್ಟಿ ಸಾಮಾಜಿಕ ಜಾಲತಾಣದ ಮೂಲಕ ತಮ್ಮ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

  ನಿನ್ನೆ ತಡರಾತ್ರಿ ಸಿನಿಮಾ ನೋಡಿದ್ದಾರೆ ರಕ್ಷಿತ್ ಶೆಟ್ಟಿ, ಸಿನಿಮಾ ನೋಡುವ ಮುನ್ನಾ ಒಂದು ಟ್ವೀಟ್ ಮಾಡಿದ್ದರು, ಸಿನಿಮಾ ಮುಗಿದ ಮೇಲೆ ಮತ್ತೆ ಟ್ವೀಟ್ ಮಾಡಿದ್ದಾರೆ. 'ಅಪ್ಪು ಅವರದ್ದು ಒನ್‌ಮ್ಯಾನ್ ಶೋ, ಅಪ್ಪು ಡ್ಯಾನ್ಸ್ ಅದ್ಭುತ' ಎಂದು ಒಂದು ಸಾಲಿನ ಟ್ವೀಟ್ ಮಾಡಿ ಸಿನಿಮಾವನ್ನು ಅಪ್ಪು ಅಭಿನಯವನ್ನು ಹೊಗಳಿದ್ದಾರೆ ರಕ್ಷಿತ್ ಶೆಟ್ಟಿ. ಟ್ವೀಟ್ ಅನ್ನು ಪುನೀತ್ ರಾಜ್‌ಕುಮಾರ್, ಸಂತೋಶ್ ಆನಂದ್ ರಾಮ್, ಹೊಂಬಾಳೆ ಫಿಲಮ್ಸ್, ವಿಜಯ್ ಕಿರಗಂದೂರ್, ಕಾರ್ತಿಕ್ ಗೌಡಗೆ ಟ್ಯಾಗ್ ಮಾಡಿದ್ದಾರೆ.

  ರಕ್ಷಿತ್ ಶೆಟ್ಟಿ, ಪುನೀತ್ ಅವರು ಒಳ್ಳೆಯ ಗೆಳೆಯರು. ಸರ್ಕಾರವು ಚಿತ್ರಮಂದಿರಗಳ ಮೇಲೆ ನಿರ್ಬಂಧ ಹೇರಿದಾಗ 'ಯುವರತ್ನ' ಚಿತ್ರದ ಪರವಾಗಿ ಟ್ವೀಟ್ ಮಾಡಿದ್ದರು ನಟ ರಕ್ಷಿತ್ ಶೆಟ್ಟಿ. ಸರ್ಕಾರವು ನಿರ್ಬಂಧವನ್ನು ತೆಗೆದ ಬಳಿಕ ಪುನೀತ್ ಅವರು ತಮ್ಮ ಜೊತೆ ನಿಂತ ಎಲ್ಲರಿಗೂ ಧನ್ಯವಾದಗಳನ್ನು ಅರ್ಪಿಸಿದರು. ರಕ್ಷಿತ್ ಶೆಟ್ಟಿ ಅವರ ಹೆಸರು ಹೇಳುವುದನ್ನು ಮರೆಯಲಿಲ್ಲ ಪುನೀತ್.

  ಇನ್ನು ನಟ ರಕ್ಷಿತ್ ಶೆಟ್ಟಿ ಅಭಿನಯದ 'ಚಾರ್ಲಿ 999' ಸಿನಿಮಾ ಕೆಲವೇ ದಿನಗಳಲ್ಲಿ ಬಿಡುಗಡೆ ಆಗಲಿದೆ. ಅದರ ಜೊತೆಗೆ ಕೆಲವೇ ದಿನಗಳಲ್ಲಿ 'ಸಪ್ತ ಸಾಗರದಾಚೆ ಎಲ್ಲೊ' ಸಿನಿಮಾದ ಚಿತ್ರೀಕರಣ ಆರಂಭವಾಗಲಿದೆ. ಆ ನಂತರ ರಕ್ಷಿತ್ ತಮ್ಮದೇ ನಿರ್ದೇಶನದ ಸಿನಿಮಾ ಆರಂಭಿಸಲಿದ್ದಾರೆ. ಅದರ ನಂತರ ಬರಲಿದೆ 'ಕಿರಿಕ್ ಪಾರ್ಟಿ 2'.

  English summary
  Actor Rakshit Shetty watched movie Yuvarathnaa. He praised Puneeth Rajkumar's performance in the movie.
  Tuesday, April 6, 2021, 9:58
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X