»   » ಇಂದು ಸೆಟ್ಟೇರಿತು 'ಅವನೇ ಶ್ರೀಮನ್ನಾರಾಯಣ' : ಇಂದೇ ಬಿಡುಗಡೆ ದಿನ ಹೇಳಿದ ರಕ್ಷಿತ್

ಇಂದು ಸೆಟ್ಟೇರಿತು 'ಅವನೇ ಶ್ರೀಮನ್ನಾರಾಯಣ' : ಇಂದೇ ಬಿಡುಗಡೆ ದಿನ ಹೇಳಿದ ರಕ್ಷಿತ್

Posted By:
Subscribe to Filmibeat Kannada

ನಟ ರಕ್ಷಿತ್ ಶೆಟ್ಟಿ ಅಭಿನಯದ 'ಅವನೇ ಶ್ರೀಮನ್ನಾರಾಯಣ' ಸಿನಿಮಾದ ಮುಹೂರ್ತ ಇಂದು ಬೆಂಗಳೂರಿನ ಬನಶಂಕರಿಯ ಧರ್ಮಗಿರಿ ಶ್ರೀ ಮಂಜುನಾಥ ಸ್ವಾಮಿ ದೇವಾಲಯದಲ್ಲಿ ನಡೆದಿದೆ. ಕಾರ್ಯಕ್ರಮದಲ್ಲಿ ನಟ ರಕ್ಷಿತ್ ಶೆಟ್ಟಿ, ನಟಿ ಶಾನ್ವಿ ನಿರ್ಮಾಪಕ ಪುಷ್ಕರ್ ಮಲ್ಲಿಕಾರ್ಜುನಯ್ಯ ಭಾಗಿಯಾಗಿದ್ದರು.

ಸಾಮಾನ್ಯವಾಗಿ ಕನ್ನಡ ಸಿನಿಮಾಗಳ ಬಿಡುಗಡೆಯ ದಿನಾಂಕ ಪಕ್ಕ ಆಗುವುದು ಒಂದು ಎರಡು ವಾರಗಳ ಮುಂಚೆ. ಆದರೆ 'ಅವನೇ ಶ್ರೀಮನ್ನಾರಾಯಣ' ಸಿನಿಮಾದ ರಿಲೀಸ್ ಡೇಟ್ ಈಗಲೇ ಫಿಕ್ಸ್ ಆಗಿದೆ. ಬಾಲಿವುಡ್ ಸಿನಿಮಾಗಳ ರೀತಿ ಶುರುವಿನಲ್ಲಿಯೇ ಸಿನಿಮಾದ ಬಿಡುಗಡೆಯ ದಿನಾಂಕ ಅನೌನ್ಸ್ ಮಾಡಲಾಗಿದೆ. ಇಂದಿನಿಂದ ಸಿನಿಮಾದ ಚಿತ್ರೀಕರಣ ಶುರು ಆಗಲಿದೆ.

'ಅವನೇ ಶ್ರೀಮನ್ನಾರಾಯಣ' ಚಿತ್ರದ ರಿಲೀಸ್ ಡೇಟ್ ಫಿಕ್ಸ್

'ಅವನೇ ಶ್ರೀಮನ್ನಾರಾಯಣ' ಸಿನಿಮಾ ಡಿಸೆಂಬರ್ 28ಕ್ಕೆ ಬಿಡುಗಡೆಯಾಗಲಿದೆಯಂತೆ. ವಿಶೇಷ ಅಂದರೆ 'ಕಿರಿಕ್ ಪಾರ್ಟಿ' ಸಿನಿಮಾ ಕೂಡ ಅದೇ ಸಮಯದಲ್ಲಿ ಬಿಡುಗಡೆಯಾಗಿದ್ದು, 'ಅವನೇ ಶ್ರೀಮನ್ನಾರಾಯಣ' ಚಿತ್ರ ಕೂಡ ಅದೇ ದಿನ ತೆರೆಗೆ ಬರಲಿದೆಯಂತೆ. ಇನ್ನು 'ಅವನೇ ಶ್ರೀಮನ್ನಾರಾಯಣ' ಚಿತ್ರದಲ್ಲಿ ರಕ್ಷಿತ್ ಐದು ವಿಭಿನ್ನ ಗೆಟಪ್ ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಒಬ್ಬ ಭ್ರಷ್ಟ ಪೊಲೀಸ್ ಪಾತ್ರವನ್ನು ರಕ್ಷಿತ್ ಇಲ್ಲಿ ಪ್ಲೇ ಮಾಡುತ್ತಿದ್ದಾರೆ.

Rakshit shettys Avane srimannarayana movie launched today

ಸಚಿನ್ 'ಅವನೇ ಶ್ರೀಮನ್ನಾರಾಯಣ' ಸಿನಿಮಾದ ನಿರ್ದೇಶನದ ಹೊಣೆ ಹೊತ್ತಿದ್ದಾರೆ. ಮೊದಲ ಬಾರಿಗೆ ರಕ್ಷಿತ್ ಶೆಟ್ಟಿ ಜೊತೆಗೆ ಶಾನ್ವಿ ಕಾಣಿಸಿಕೊಳ್ಳುತ್ತಿದ್ದಾರೆ. ರಕ್ಷಿತ್ ಶೆಟ್ಟಿ,'ರಂಗಿತರಂಗ' ಖ್ಯಾತಿಯ ನಿರ್ಮಾಪಕರಾದ ಪ್ರಕಾಶ್, ಮತ್ತು ಪುಷ್ಕರ್ ಮಲ್ಲಿಕಾರ್ಜುನಯ್ಯ ಚಿತ್ರಕ್ಕೆ ಬಂಡವಾಳ ಹಾಕುತ್ತಿದ್ದಾರೆ.

English summary
Kannada actor Rakshit shetty and Shanvi Srivastava's 'Avane srimannarayana' movie launched today.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X