»   » ರಿಕ್ಕಿ ಅಲಿಯಾಸ್ ರಕ್ಷಿತ್ ಶೆಟ್ಟಿಗೆ ಹುಡುಗಿ ಬೇಕಂತೆ..!

ರಿಕ್ಕಿ ಅಲಿಯಾಸ್ ರಕ್ಷಿತ್ ಶೆಟ್ಟಿಗೆ ಹುಡುಗಿ ಬೇಕಂತೆ..!

Posted By:
Subscribe to Filmibeat Kannada

ಸಿಂಪಲ್ ಹುಡುಗ ರಕ್ಷಿತ್ ಶೆಟ್ಟಿ ಅಂದರೆ ಯಾವ ಹುಡುಗಿಯರಿಗೆ ಇಷ್ಟ ಇಲ್ಲ ಹೇಳಿ. ಸದ್ಯಕ್ಕೆ ಹುಡುಗಿಯರು ಹೊಸದಾಗಿ ಇಷ್ಟ ಪಡೋ ಹಾಟ್ ಬ್ಯಾಚುರಲ್ ಫೇವರಿಟ್ ಹೀರೋ 'ಉಳಿದವರು ಕಂಡಂತೆ' ನಟ ಕಮ್ ನಿರ್ದೇಶಕ ರಕ್ಷಿತ್ ಶೆಟ್ಟಿ ಅವರು.

'ರಿಕ್ಕಿ' ಚಿತ್ರದ ಭರ್ಜರಿ ಯಶಸ್ಸಿನಲ್ಲಿರುವ ನಟ ರಕ್ಷಿತ್ ಶೆಟ್ಟಿ ಅವರಿಗೆ ಇದೀಗ ಅರ್ಜೆಂಟಾಗಿ ಹುಡುಗಿ ಬೇಕಾಗಿದ್ದಾರಂತೆ. ಶಾಕ್ ಆದ್ರಾ ಅಂದಹಾಗೆ ರಕ್ಷಿತ್ ಅವರಿಗೆ ಹುಡುಗಿ ಬೇಕಾಗಿರೋದು ಅವರ ಮುಂದಿನ ಹೊಸ ಚಿತ್ರ 'ಕಿರಿಕ್ ಪಾರ್ಟಿ'ಯಲ್ಲಿ ನಟಿಸಲು.[ರಕ್ಷಿತ್ ಶೆಟ್ಟಿ ಅವರ ಜೊತೆ ನಟಿಸಲು ಇಲ್ಲಿದೆ ಉತ್ತಮ ಅವಕಾಶ]

Rakshit Shetty's 'Kirik Party' searching for heroines

ರಿಕ್ಕಿ ಅಲಿಯಾಸ್ ರಕ್ಷಿತ್ ಶೆಟ್ಟಿ ಅವರು ಚಿತ್ರಕ್ಕೆ ಕಥೆ ಬರೆದು ಬಂಡವಾಳ ಹೂಡುತ್ತಿರುವ 'ಕಿರಿಕ್ ಪಾರ್ಟಿ' ಚಿತ್ರಕ್ಕೆ ಹೊಸ ನಾಯಕಿಯರನ್ನು ಕರೆತರಲು ಚಿತ್ರತಂಡ ಯೋಜನೆ ಹಾಕಿಕೊಂಡಿದ್ದು, ಹೊಸ ಪ್ರತಿಭೆಗಳ ಹುಡುಕಾಟದಲ್ಲಿ ತೊಡಗಿದೆ.[ರಕ್ಷಿತ್ ಶೆಟ್ಟಿ 'ಕಿರಿಕ್ ಪಾರ್ಟಿ' ಸದ್ಯದಲ್ಲೇ ಶುರು ಕಣ್ರೀ.!]

Rakshit Shetty's 'Kirik Party' searching for heroines

ಈಗಾಗಲೇ ಬೆಂಗಳೂರಿನ ವಿಜಯಾ ಕಾಲೇಜಿನಲ್ಲಿ ಆಡೀಷನ್ ನಡೆಸಿದ್ದ ರಿಶಬ್ ಶೆಟ್ಟಿ ಮತ್ತು ರಕ್ಷಿತ್ ಶೆಟ್ಟಿ ಅವರು ಕೆಲವು ಹೊಸ ಪ್ರತಿಭೆಗಳನ್ನು ಆಯ್ಕೆ ಮಾಡಿದ್ದಾರೆ. ಇದೀಗ ಚಿತ್ರದಲ್ಲಿ ಮುಖ್ಯ ನಾಯಕಿಯ ಪಾತ್ರ ಮಾಡಲು ಹೊಸ ಮುಖಗಳ ಹುಡುಕಾಟ ಮುಂದುವರಿಸಿದ್ದಾರೆ.[ನಟ-ನಿರ್ದೇಶಕನ ನಂತರ ನಿರ್ಮಾಪಕರಾಗಿ ಶೆಟ್ರ ಹೊಸ ವರಸೆ]

Rakshit Shetty's 'Kirik Party' searching for heroines

ರಕ್ಷಿತ್ ಶೆಟ್ಟಿ ಅವರ ಜೊತೆ ನಟಿಸಲು ಇಷ್ಟ ಇದ್ದ ಹುಡುಗಿಯರು ನಿಮ್ಮ ಹಲವಾರು ಭಾವ-ಭಂಗಿಯಲ್ಲಿ ತೆಗೆಸಿದ ಫೋಟೊ ಹಾಗೂ ನಿಮ್ಮ ಪ್ರೊಫೈಲ್ ಅನ್ನು contact@paramvah.com ಇಮೇಲ್ ಐಡಿಗೆ ಕಳುಹಿಸಿ ಕೊಡಲು ಚಿತ್ರತಂಡ ಕೇಳಿಕೊಂಡಿದೆ. ಕನಿಷ್ಠ ಹತ್ತು ಫೋಟೋ ಇದ್ದರೆ ಸೂಕ್ತ.

ಚಿತ್ರದಲ್ಲಿ ಹೀರೋಯಿನ್ ಆಗಿ ಕಾಣಿಸಿಕೊಳ್ಳಬೇಕು ಹಾಗೂ ಮೆಚ್ಚಿನ ನಟ ರಕ್ಷಿತ್ ಶೆಟ್ಟಿ ಅವರ ಜೊತೆ ಡ್ಯುಯೆಟ್ ಹಾಡಬೇಕು ಅನ್ನೋ ಆಸೆ ಇದ್ದವರು ಈ ಅವಕಾಶವನ್ನು ಉಪಯೋಗಿಸಿಕೊಳ್ಳಬಹುದು.

English summary
Kannada movie 'Kirik Party' team launches talent hunt. Director Rishab Shetty and Actor Rakshit Shetty are teaming up again for the new film 'Kirik Party'. They have invited people with creative talent.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada