»   » ಹೊಸ ಲುಕ್ ನಲ್ಲಿ ರಕ್ಷಿತ್ ಶೆಟ್ರು: ಅರೇ... ಹಿಂಗ್ಯಾಕ್ ಆಗ್ಬಿಟ್ಟರು.?

ಹೊಸ ಲುಕ್ ನಲ್ಲಿ ರಕ್ಷಿತ್ ಶೆಟ್ರು: ಅರೇ... ಹಿಂಗ್ಯಾಕ್ ಆಗ್ಬಿಟ್ಟರು.?

Posted By: Pavithra
Subscribe to Filmibeat Kannada
ಅಬ್ಬಬ್ಬಾ! ಹೊಸ ಲುಕ್ ನಲ್ಲಿ ರಕ್ಷಿತ್ ಶೆಟ್ಟಿ | Filmibeat Kannada

ತಮ್ಮದೇ ಸ್ಟೈಲ್ ಹಾಗೂ ಮ್ಯಾನರಿಸಂ ನಿಂದ ಸ್ಯಾಂಡಲ್ ವುಡ್ ನಲ್ಲಿ ಅಭಿಮಾನಿಗಳನ್ನ ಪಡೆದುಕೊಂಡಿರುವ ನಟ ರಕ್ಷಿತ್ ಶಟ್ಟಿ. ವಿಭಿನ್ನವಾದ ಸ್ಟೈಲ್ ಆಫ್ ಸಿನಿಮಾ ಮೇಕಿಂಗ್ ಮಾಡಿ ಸ್ಯಾಂಡಲ್ ವುಡ್ ನಲ್ಲಿ ನೆಲೆಯೂರಿರುವ ರಕ್ಷಿತ್ ಈಗ ಬದಲಾಗಿದ್ದಾರೆ.

'ಕಿರಿಕ್ ಪಾರ್ಟಿ' ಸಿನಿಮಾ ಸಕ್ಸಸ್ ನಂತ್ರ ಚಿತ್ರರಂಗದಲ್ಲಿ ಸಿಕ್ಕಾಪಟ್ಟೆ ಬೇಡಿಕೆ ಕ್ರಿಯೇಟ್ ಮಾಡಿಕೊಂಡಿರುವ ರಕ್ಷಿತ್ ಶೆಟ್ಟಿ ಹೊಸ ವರ್ಷಕ್ಕೆ ತಮ್ಮ ಅಭಿಮಾನಿಗಳಿಗೆ ಹೊಸ ಗಿಫ್ಟ್ ಕೊಡಲು ಸಜ್ಜಾಗಿದ್ದಾರೆ. ಅದಕ್ಕಾಗಿ ಈಗಾಗಲೆ ತಯಾರಿ ಮಾಡಿಕೊಂಡಿದ್ದು, ನೀವು ಅದರ ಬಗ್ಗೆ ತಿಳಿದುಕೊಂಡ್ರೆ ಅರೇ... ರಕ್ಷಿತ್ ಹಿಂಗ್ಯಾಕ್ ಆದ್ರು ಅಂತ ಯೋಚನೆ ಮಾಡ್ತೀರಾ....ಹಾಗಾದ್ರೆ ರಕ್ಷಿತ್ ಶೆಟ್ಟಿ ಅವ್ರಿಗೆ ಏನಾಯ್ತು ಅಂತೀರಾ... ಮುಂದೆ ಓದಿ....

ತೂಕ ಇಳಿಸಿಕೊಂಡ ರಕ್ಷಿತ್

ರಕ್ಷಿತ್ ಶೆಟ್ಟಿ ತಮ್ಮ ಮುಂದಿನ ಸಿನಿಮಾದ ತಯಾರಿಯಲ್ಲಿ ಸಖತ್ ಬಿಜಿ ಆಗಿದ್ದಾರೆ. ಅದಕ್ಕಾಗಿ ಬರೋಬ್ಬರಿ 9 ಕೆಜಿ ತೂಕ ಇಳಿಸಿಕೊಂಡಿದ್ದಾರೆ. ಸುಮಾರು ಮೂರು ತಿಂಗಳಿಂದ ರಕ್ಷಿತ್ ಪರ್ಸನಲ್ ಟ್ರೈನರ್ ಶ್ರೀನಿವಾಸ್ ಗೌಡ ಸಿಂಪಲ್ ಸ್ಟಾರ್‌ ಗೆ ವರ್ಕೌಟ್ ಮಾಡಿಸುತ್ತಿದ್ದಾರೆ.

ಡಿಫ್ರೆಂಟ್ ಲುಕ್ ನಲ್ಲಿ ಸಿಂಪಲ್ ಸ್ಟಾರ್

ಈ ಹಿಂದೆ ಮಾಡಿದ ಚಿತ್ರಗಳಲ್ಲಿ ರಕ್ಷಿತ್ ಶೆಟ್ಟಿ ಹೇರ್ ಸ್ಟೈಲ್ ನಲ್ಲಿ ಅಷ್ಟೇನು ಬದಲಾವಣೆ ಕಾಣಿಸಿರಲಿಲ್ಲ. 'ಕಿರಿಕ್ ಪಾರ್ಟಿ' ಸಿನಿಮಾದ ಫಸ್ಟ್ ಹಾಫ್ ಗಾಗಗಿ ಒಂದಿಷ್ಟು ಲುಕ್ ಟ್ರೈ ಮಾಡಿದ್ರು. ಆದ್ರೆ 'ಅವನೇ ಶ್ರೀಮನ್ನಾರಾಯಣ' ಸಿನಿಮಾದಲ್ಲಿ ರಕ್ಷಿತ್ ಔಟ್ ಲುಕ್ ಕಂಪ್ಲೀಟ್ ಬದಲಾಗ್ತಿದೆ. ಶಾರ್ಟ್ ಹೇರ್ ಸ್ಟೈಲ್ ಮಾಡಿಸಿಕೊಂಡು ಅಭಿಮಾನಿಗಳ ಮುಂದೆ ಹಾಜರ್ ಆಗಲಿದ್ದಾರೆ. ಈ ಮೂಲಕ ಹೊಸ ಟ್ರೆಂಡ್ ಕ್ರಿಯೇಟ್ ಮಾಡೋಕೆ ಸಜ್ಜಾಗಿದ್ದಾರೆ ರಕ್ಷಿತ್.

ಮಾಸ್ ಲುಕ್

ರಕ್ಷಿತ್ ಈ ಹಿಂದೆ ಆಕ್ಟ್ ಮಾಡಿರುವ ಸಿನಿಮಾಗಳಲ್ಲಿ ಎಲ್ಲೂ ಕಂಪ್ಲೀಟ್ ಮಾಸ್ ಫೀಲ್ ಕೊಡುವ ಸಿನಿಮಾಗಳಾಗಿರಲಿಲ್ಲ. ಆದ್ರೆ ಈ ಬಾರಿ ಸಿಂಪಲ್ ಸ್ಟಾರ್ ಮಾಸ್ ಲುಕ್ ನಲ್ಲಿ ಎಂಟ್ರಿಕೊಡ್ತಾರಂತೆ. ಅದಕ್ಕಾಗಿ ತಯಾರಿ ನಡೆಯುತ್ತಿದ್ದು ಇನ್ನೂ ಒಂದು ತಿಂಗಳಲ್ಲಿ ಅಂದ್ರೆ ಡಿಸೆಂಬರ್ ಅಂತ್ಯಕ್ಕೆ ರಕ್ಷಿತ್ ಅವ್ರ ನ್ಯೂ ಲುಕ್ ರಿವೀಲ್ ಆಗಲಿದೆ.

'ಶ್ರೀಮನ್ನಾರಾಯಣ'ನಾಗಿ ಬದಲಾದ ರಕ್ಷಿತ್ ಶೆಟ್ಟಿ

ಸತ್ಯ ಯುಗ, ತ್ರೇತಾ ಯುಗ, ದ್ವಾಪರ ಯುಗ, & Now he is Back in ಕಲಿ ಯುಗ... ಯಾರವನು ??? ಇಂಥದೊಂದು ಡಿಫ್ರೆಂಟ್ ಸಬ್ ಟೈಟಲ್ ಇಟ್ಟುಕೊಂಡು ಚಿತ್ರೀಕರಣಕ್ಕೆ ಸಿದ್ದತೆ ನಡೆಸುತ್ತಿರುವ ಚಿತ್ರವೇ 'ಅವನೇ ಶ್ರೀಮನ್ನಾರಾಯಣ'. 'ಕಿರಿಕ್ ಪಾರ್ಟಿ' ನಂತ್ರ ರಕ್ಷಿತ್ ಶೆಟ್ಟಿ 'ಅವನೇ ಶ್ರೀಮನ್ನಾರಾಯಣ' ಸಿನಿಮಾದಲ್ಲಿ ಆಕ್ಟ್ ಮಾಡ್ತಿದ್ದಾರೆ. ನವ ನಿರ್ದೇಶಕ ಸಚಿನ್ ಈ ಸಿನಿಮಾಗೆ ಆಕ್ಷನ್ ಕಟ್ ಹೇಳ್ತಿದ್ದು, ಅದಕ್ಕಾಗಿ ರಕ್ಷಿತ್ ತಮ್ಮ ಲುಕ್ ಬದಲಾಯಿಸಿಕೊಂಡಿದ್ದಾರೆ.

ಚಿತ್ರೀಕರಣ ಯಾವಾಗ್ಲಿಂದ.?

ಜನವರಿಯಲ್ಲಿ ಚಿತ್ರೀಕರಣ ಶುರುವಾಗಲಿರುವ 'ಅವನೇ ಶ್ರೀಮನ್ನಾರಾಯಣ' ಸಿನಿಮಾಗಾಗಿ ಸಖತ್ ಹಾರ್ಡ್ ವರ್ಕ್ ಮಾಡ್ತಿದ್ದಾರೆ ರಕ್ಷಿತ್. ಪುಷ್ಕರ್ ಸಿನಿಮಾಸ್ ಹಾಗೂ ಪರಂವಾ ಸ್ಟುಡಿಯೋಸ್ ಅಡಿಯಲ್ಲಿ ಸಿನಿಮಾ ನಿರ್ಮಾಣವಾಗ್ತಿದೆ. ಸಿಂಪಲ್ ಸ್ಟಾರ್ ಜೊತೆ ಶಾನ್ವಿ ಶ್ರೀವಾಸ್ತವ್ ಚಿತ್ರದಲ್ಲಿ ನಾಯಕಿಯಾಗಿ ಆಕ್ಟ್ ಮಾಡ್ತಿದ್ದಾರಂತೆ. ಸದ್ಯಕ್ಕೆ ರಕ್ಷಿತ್ ಲುಕ್ ಹೇಗಿರುತ್ತೆ ಅನ್ನೋದು ಕುತೂಹಲ ಮೂಡಿಸಿದೆ.

English summary
Rakshit Shetty's new look for 'Avane Sriman Narayana' movie.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X