For Quick Alerts
  ALLOW NOTIFICATIONS  
  For Daily Alerts

  ರಕ್ಷಿತ್ ಶೆಟ್ಟಿಯ '777 ಚಾರ್ಲಿ' ಸಿನಿಮಾದ ಟ್ರೈಲರ್ ರಿಲೀಸ್‌ಗೆ ಮುಹೂರ್ತ ಫಿಕ್ಸ್

  |

  ರಕ್ಷಿತ್ ಶೆಟ್ಟಿ ನಟನೆಯ ಬಹು ನಿರೀಕ್ಷಿತ ಚಿತ್ರ '777 ಚಾರ್ಲಿ' ಅಭಿಮಾನಿಗಳಲ್ಲಿ ಭಾರೀ ನಿರೀಕ್ಷೆಯನ್ನು ಹುಟ್ಟುಹಾಕಿದೆ. ಈ ಸಿನಿಮಾ ಐದು ಭಾಷೆಗಳಲ್ಲಿ ಬರುತ್ತಿದ್ದು, ಇದು ಕೂಡ ದಕ್ಷಿಣ ಭಾರತದ ಪ್ಯಾನ್‌ ಇಂಡಿಯಾ ಸಿನಿಮಾವಾಗಿದೆ. ಹೀಗಾಗಿ ಈ ಸಿನಿಮಾ ಮೇಲೆ ಸಿನಿ ಪ್ರೇಕ್ಷಕರು ಸಹ ಸಾಕಷ್ಟು ನಿರೀಕ್ಷೆಯನ್ನು ಇಟ್ಟುಕೊಂಡಿದ್ದಾರೆ.

  ಸದ್ಯ ಈ ಸಿನಿಮಾದ ಕುರಿತು ಚಿತ್ರತಂಡ ಹೊಸ ಆಪ್‌ಡೇಟ್‌ವೊಂದನ್ನು ನೀಡಿದೆ. ಸಿನಿಮಾ ಬೆಳ್ಳಿತೆರೆ ಮೇಲೆ ಅಪ್ಪಳಿಸಲು ಇನ್ನು ಒಂದು ತಿಂಗಳು ಬಾಕಿ ಇದೆ. ಹೀಗಾಗಿ ಚಿತ್ರದ ಟ್ರೈಲರ್‌ ಬಿಡುಗಡೆ ಮಾಡುವ ದಿನವನ್ನು ಚಿತ್ರತಂಡ ಘೋಷಣೆ ಮಾಡಿದೆ. '777 ಚಾರ್ಲಿ' ಟ್ರೈಲರ್ ಡೇಟ್ ಕೇಳಿ ರಕ್ಷಿತ್ ಶೆಟ್ಟಿ ಅಭಿಮಾನಿಗಳಲ್ಲಿ ಸಂಭ್ರಮ ಮನೆ ಮಾಡಿದೆ.

  ರಕ್ಷಿತ್ ಶೆಟ್ಟಿ ಸಿನಿಮಾ ವೀಕ್ಷಿಸಿ ಶಭಾಸ್ ಎಂದ ರಾಣಾ ದಗ್ಗುಬಾಟಿರಕ್ಷಿತ್ ಶೆಟ್ಟಿ ಸಿನಿಮಾ ವೀಕ್ಷಿಸಿ ಶಭಾಸ್ ಎಂದ ರಾಣಾ ದಗ್ಗುಬಾಟಿ

  '777 ಚಾರ್ಲಿ' ಸಿನಿಮಾ ವಿಭಿನ್ನ ಕಥಾಹಂದರವನ್ನು ಹೊಂದಿದ್ದು, ರಕ್ಷಿತ್ ಶೆಟ್ಟಿ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈಗಾಗಲೇ ಟೀಸರ್ ಹಾಗೂ ಹಾಡುಗಳು ಜನರ ಮನಸ್ಸನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದೆ. ಸದ್ಯ ಈಗ ಸಿನಿಮಾದ ಸಣ್ಣ ಝಲಕ್ ತೋರಿಸಲು ಚಿತ್ರತಂಡ ಟ್ರೈಲರ್‌ ರಿಲೀಸ್‌ಗೆ ಮುಂದಾಗಿದೆ.

  ಇದೇ ಮೇ 16 ರಂದು '777 ಚಾರ್ಲಿ' ಸಿನಿಮಾದ ಟ್ರೈಲರ್‌ ರಿಲೀಸ್‌ ಆಗಲಿದೆ. ಈ ಬಗ್ಗೆ ಸ್ವತಃ ಚಿತ್ರದ ನಾಯಕ ನಟ ರಕ್ಷಿತ್ ಶೆಟ್ಟಿ ಟ್ವಿಟ್ಟರ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ. 'ನಮ್ಮ '777 ಚಾರ್ಲಿ' ಚಿತ್ರದ ಟ್ರೈಲರ್‌ ಮೇ 16ರ ಮಧ್ಯಾಹ್ನ 12:12 ಕ್ಕೆ ಬಿಡುಗಡೆಯಾಗಲಿದೆ. ನಿಮ್ಮೆಲ್ಲರ ಆಶೀರ್ವಾದ, ಪ್ರೀತಿಯಿರಲಿ,' ಎಂದು ಮನವಿ ಮಾಡಿದ್ದಾರೆ.

  ನಟ ರಕ್ಷಿತ್ ಶೆಟ್ಟಿ ಸಿನಿಮಾ ಕೆರಿಯರ್‌ನಲ್ಲಿ ವಿಭಿನ್ನ ಕಥಾಹಂದರವಿರುವ ಸಿನಿಮಾಗಳನ್ನೇ ಹೆಚ್ಚಾಗಿ ಮಾಡಿ ಜನರನ್ನು ರಂಜಿಸಿದ್ದಾರೆ. ಅವರು ನಟಿಸಿರುವ ಎಲ್ಲಾ ಸಿನಿಮಾಗಳಲ್ಲೂ ಹೊಸತನವನ್ನು ತರುವ ಪ್ರಯತ್ನ ಮಾಡಿದ್ದಾರೆ. 'ಸಿಂಪಲ್ಲಾಗ್ ಒಂದ್ ಲವ್ ಸ್ಟೋರಿ', 'ಕಿರಿಕ್ ಪಾರ್ಟಿ', 'ಅವನೇ ಶ್ರೀಮನ್‌ ನಾರಾಯಣ', ಸಿನಿಮಾಗಳು ರಕ್ಷಿತ್ ಗೆ ಭಾರೀ ಯಶಸ್ಸು ತಂದು ಕೊಟ್ಟ ಸಿನಿಮಾಗಳಾಗಿದೆ. ಈ ಎಲ್ಲಾ ಸಿನಿಮಾದಲ್ಲೂ ರಕ್ಷಿತ್ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಳ್ಳುವ ಮೂಲಕ ಸಿನಿ ಪ್ರೇಕ್ಷಕರನ್ನು ರಂಜಿಸಿದ್ದಾರೆ.

  ಡಿಸೆಂಬರ್ 31ಕ್ಕೆ 777 ಚಾರ್ಲಿ ಸಿನಿಮಾ ಗೋವಾ ಕೊಂಕಣಿ ಸಾಂಗ್ ರಿಲೀಸ್ ಡಿಸೆಂಬರ್ 31ಕ್ಕೆ 777 ಚಾರ್ಲಿ ಸಿನಿಮಾ ಗೋವಾ ಕೊಂಕಣಿ ಸಾಂಗ್ ರಿಲೀಸ್

  Rakshit Shetty Starrer 777 Charlie Movie Trailer Releasing On May 16th

  ಸದ್ಯ ಈಗ ವಿಭಿನ್ನ ಕಥೆಯಾಗಿರುವ '777 ಚಾರ್ಲಿ' ಸಿನಿಮಾದಲ್ಲೂ ಕೂಡ ಹೊಸ ರೀತಿಯಲ್ಲಿ ಕಥೆ ಹೇಳಲು ಬರುತ್ತಿದ್ದಾರೆ. ಈ ಸಿನಿಮಾದಲ್ಲಿ ರಕ್ಷಿತ್ ನಟನೆ ಎಷ್ಟು ಪ್ರಮುಖವಾಗಿದೆಯೋ, ಅದೇ ರೀತಿ ಶ್ವಾನವನ್ನು ಸಹ ಮುಖ್ಯ ಭೂಮಿಕೆಯಲ್ಲಿ ಸಿನಿಮಾದ ಉದ್ದಕ್ಕೂ ತೋರಿಸಲಾಗಿದೆ. ಸಿನಿಮಾ ಕನ್ನಡ, ತೆಲುಗು, ತಮಿಳು, ಹಿಂದಿ ಮತ್ತು ಮಲಯಾಳಂನಲ್ಲಿ ರಿಲೀಸ್‌ ಆಗಲಿದೆ. ಟ್ರೈಲರ್‌ ಕೂಡ ಮೇ 16 ರಂದು ಮಧ್ಯಾಹ್ನ 12:12ಕ್ಕೆ ಏಕಕಾಲದಲ್ಲೇ ಐದು ಭಾಷೆಗಳಲ್ಲೂ ರಿಲೀಸ್‌ ಆಗಲಿದೆ.

   'ಪುಷ್ಪ' ಬಳಿಕ ಯೂಟ್ಯೂಬ್ ಆರಂಭಿಸಿದ ರಶ್ಮಿಕಾ 'ಮಾಜಿ ಬಾಯ್‌ಫ್ರೆಂಡ್' ಬಗ್ಗೆ ಹೇಳಿದ್ದೇನು? 'ಪುಷ್ಪ' ಬಳಿಕ ಯೂಟ್ಯೂಬ್ ಆರಂಭಿಸಿದ ರಶ್ಮಿಕಾ 'ಮಾಜಿ ಬಾಯ್‌ಫ್ರೆಂಡ್' ಬಗ್ಗೆ ಹೇಳಿದ್ದೇನು?

  ಸಿನಿಮಾದಲ್ಲಿ ರಕ್ಷಿತ್ ಜೊತೆಗೆ ರಾಜ್‌ ಬಿ ಶೆಟ್ಟಿ, ದಾನಿಶ್ ಸೇಠ್, ಸಂಗೀತಾ ಶೃಂಗೇರಿ, ತಮಿಳು ನಟ ಬಾಬಿ ಸಿಂಹ ಇನ್ನೂ ಅನೇಕರು ಪ್ರಮುಖ ಪ್ರಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಕಿರಣ್ ರಾಜ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದು, ರಕ್ಷಿತ್ ಶೆಟ್ಟಿ ತಮ್ಮ ಹೋಮ್ ಬ್ಯಾನರ್ ಪರಂವಃ ಸ್ಟುಡಿಯೋಸ್‌ ಈ ಸಿನಿಮಾ ನಿರ್ಮಾಣ ಮಾಡಿದೆ.

  English summary
  Rakshit Shetty Starrer 777 Charlie Movie Trailer Releasing On May 16th. Know More.
  Tuesday, May 10, 2022, 15:46
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X