For Quick Alerts
  ALLOW NOTIFICATIONS  
  For Daily Alerts

  ಸಹೋದರನಿಗಾಗಿ ರಕ್ಷಿತಾ ಎಷ್ಟು ಕಥೆ ರಿಜೆಕ್ಟ್ ಮಾಡಿದ್ರು ಗೊತ್ತಾ?

  |

  'ದಿ ವಿಲನ್' ನಂತರ ನಿರ್ದೇಶಕ ಪ್ರೇಮ್ ಹೊಸ ಸಿನಿಮಾ ಆರಂಭಿಸಿದ್ದಾರೆ. ರಕ್ಷಿತಾ ಪ್ರೇಮ್ ಹುಟ್ಟುಹಬ್ಬದ ಪ್ರಯುಕ್ತ ಹೊಸ ಚಿತ್ರಕ್ಕೆ ಚಾಲನೆ ನೀಡಿದ್ದು, ಈ ಚಿತ್ರದ ಮೂಲಕ ಮತ್ತೊಬ್ಬ ಯುವನಟನನ್ನ ಇಂಡಸ್ಟ್ರಿಗೆ ಪರಿಚಯ ಮಾಡ್ತಿದ್ದಾರೆ.

  ಹೌದು, ರಕ್ಷಿತಾ ಪ್ರೇಮ್ ಅವರ ಸಹೋದರ, ಪ್ರೇಮ್ ಬಾಮೈದ ಅಭಿಷೇಕ್ ಈ ಚಿತ್ರದ ನಾಯಕ. ರಕ್ಷಿತಾ ಸಹೋದರನ ಸಿನಿಮಾ ಎಂಟ್ರಿ ಬಗ್ಗೆ ಹಲವು ದಿನಗಳಿಂದ ಚರ್ಚೆಯಾಗುತ್ತಲೇ ಇತ್ತು. ಇದೀಗ, ಅಂತಿಮವಾಗಿ ತಮ್ಮದೇ ಬ್ಯಾನರ್ ನಲ್ಲಿ ಅಭಿಷೇಕ್ (ರಾಣಾ ಹೆಸರು ಬದಲಾಗಿದೆ) ಅಧಿಕೃತವಾಗಿ ಲಾಂಚ್ ಆಗ್ತಿದ್ದಾರೆ. 'ಏಕ್ ಲವ್ ಯಾ' ಎಂಬ ಹೆಸರಿನಲ್ಲಿ ಸಿನಿಮಾ ಶುರುವಾಗಿದ್ದು, ಚಿತ್ರದ ಮೇಲೆ ನಿರೀಕ್ಷೆ ಹೆಚ್ಚಾಗಿದೆ.

  ರಕ್ಷಿತಾ ತಮ್ಮ 'ರಾಣಾ'ಗೆ ಸುದೀಪ್ ಸ್ವಾಗತ

  ಅಂದ್ಹಾಗೆ, ಸಹೋದರನಿಗಾಗಿ ರಕ್ಷಿತಾ ಪ್ರೇಮ್ ಸುಮಾರು 7-8 ಕಥೆಗಳನ್ನ ರಿಜೆಕ್ಟ್ ಮಾಡಿದ್ದರಂತೆ. ಅಂತಿಮವಾಗಿ ಒಂದು ಕಥೆಯನ್ನ ಒಪ್ಪಿಕೊಂಡು ಗ್ರೀನ್ ಸಿಗ್ನಲ್ ನೀಡಿದ್ದಾರೆ ಎಂದು ಪತಿ ಪ್ರೇಮ್ ಹೇಳಿದರು.

  'ಪ್ರೇಮ್ ಪಿಕ್ಚರ್' ಅಲ್ಲ ಈಗ 'ರಕ್ಷಿತಾ ಫಿಲ್ಮ್ ಫ್ಯಾಕ್ಟರಿ'ಯಲ್ಲಿ ಹೊಸ ಸಿನಿಮಾ

  ಮೂಲತಃ ಇಂಜಿನಿಯರ್ ಆಗಿರುವ ರಾಣಾ ಈಗಾಗಲೇ ಕೆಲವು ಕನ್ನಡ ಸಿನಿಮಾಗಳಲ್ಲಿ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ್ದಾರೆ. ದಿ ವಿಲನ್ ಸಿನಿಮಾದಲ್ಲೂ ತೊಡಗಿಕೊಂಡಿದ್ದರು. ಪಕ್ಕಾ ಆಕ್ಷನ್ ಲವ್ ಸಬ್ಜೆಕ್ಟ್ ಜೊತೆಗೆ ಈ ಸಿನಿಮಾ ಮಾಡ್ತಿದ್ದು, ಪ್ರೇಕ್ಷಕರಿಗೆ ಇಷ್ಟವಾಗುತ್ತೆ ಎಂಬ ವಿಶ್ವಾದಲ್ಲಿದ್ದಾರೆ ಪ್ರೇಮ್ ದಂಪತಿ.

  English summary
  Crazy queen Rakshita prem has rejects 8 stories for his brother. finally she agreed 'ek love ya' movie.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X