Don't Miss!
- News
ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಪತ್ರ ನಕಲಿ ಎಂದ ಸಿದ್ದರಾಮಯ್ಯ.! ಆ ಪತ್ರದಲ್ಲಿ ಏನಿದೆ.?
- Sports
IND-W vs SA-W T20 Tri-series Final: ಭಾರತ ವನಿತೆಯರ ವಿರುದ್ಧ ದಕ್ಷಿಣ ಆಫ್ರಿಕಾಗೆ ಜಯ
- Lifestyle
ಮಗುವಿಗೆ ತುಂಬಾ ಜ್ವರ ಇದ್ದಾಗ ಏನು ಮಾಡಬೇಕು?
- Finance
6 ತಿಂಗಳಲ್ಲಿ 2ನೇ ಬಾರಿಗೆ ಉದ್ಯೋಗಿಗಳನ್ನು ವಜಾಗೊಳಿಸಿದ Byju's: ಈ ಬಾರಿ ಎಷ್ಟು ನೌಕರರು?
- Automobiles
ಭಾರತದಲ್ಲಿ ಮಾರುತಿ ಜಿಮ್ನಿ ಎಸ್ಯುವಿಗೆ ಭಾರೀ ಡಿಮ್ಯಾಂಡ್: ಪ್ರತಿಸ್ಪರ್ಧಿಗಳಿಗೆ ಹೆಚ್ಚಿದ ಆತಂಕ
- Technology
ಮಾರುಕಟ್ಟೆಗೆ ಎಂಟ್ರಿ ಕೊಟ್ಟ ವಾಯರ್ಲೆಸ್ ಚಾರ್ಜಿಂಗ್ ಬೆಂಬಲಿಸುವ ಸ್ಮಾರ್ಟ್ವಾಚ್!
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
"ರಿಷಬ್, ರಕ್ಷಿತ್ ಇಂಡಸ್ಟ್ರಿಗೆ ದಾರಿ ತೋರಿಸಿದ್ರು, ನನಗೆ ಅವಕಾಶ ಕೊಟ್ರು": ಕೊನೆಗೂ ಒಪ್ಪಿಕೊಂಡ ರಶ್ಮಿಕಾ
'ಕಿರಿಕ್ ಪಾರ್ಟಿ' ಸಿನಿಮಾ ಮೂಲಕ ಚಿತ್ರರಂಗ ಪ್ರವೇಶಿಸಿದ ನಟಿ ರಶ್ಮಿಕಾ ಮಂದಣ್ಣ ಈಗ ಬಾಲಿವುಡ್ ಸಿನಿಮಾಗಳಲ್ಲಿ ನಟಿಸ್ತಿದ್ದಾರೆ. ನ್ಯಾಷನಲ್ ಕ್ರಶ್ ಪಟ್ಟಕ್ಕೇರಿದ್ದಾರೆ. ಆದರೆ ರಶ್ಮಿಕಾ ಹತ್ತಿದ ಏಣಿ ಒದ್ದುಬಿಟ್ಟರು ಎಂದು ಕೆಲವ್ರು ಹೇಳುತ್ತಿದ್ದಾರೆ. ಇದೇ ಕಾರಣಕ್ಕೆ ಆಕೆ ಟ್ರೋಲ್ ಆಗಿದ್ದು ಇದೆ.
ಕಾಲೇಜಿನಲ್ಲಿ ಓದಿಕೊಂಡಿದ್ದ ರಶ್ಮಿಕಾನ ಕರೆದು ರಿಷಬ್ ಶೆಟ್ಟಿ ಹಾಗೂ ರಕ್ಷಿತ್ ಶೆಟ್ಟಿ 'ಕಿರಿಕ್ ಪಾರ್ಟಿ' ಚಿತ್ರದಲ್ಲಿ ನಟಿಸುವ ಅವಕಾಶ ಕೊಟ್ಟಿದ್ದರು. ಚಿತ್ರದಲ್ಲಿ ಸಾನ್ವಿ ಜೋಸೆಫ್ ಪಾತ್ರದಲ್ಲಿ ಚಶ್ಮಾ ತೊಟ್ಟು ಕೊಡಗಿನ ಕುವರಿ ಮೋಡಿ ಮಾಡಿದ್ದರು. ಇಡೀ ಸಿನಿಮಾ ಕೂಡ ರಶ್ಮಿಕಾ ಕಾಣಿಸಿಕೊಂಡಿರಲಿಲ್ಲ. ಇಂಟರ್‌ವಲ್‌ವರೆಗೆ ಮಾತ್ರ ಆಕೆಯ ಪಾತ್ರ ಇತ್ತು. ಆದರೆ ಮೊದಲ ನೋಟದಲ್ಲೇ ಗಮನ ಸೆಳೆದಿದ್ದರು. ರಿಷಬ್ ಶೆಟ್ಟಿ, ರಕ್ಷಿತ್ ಶೆಟ್ಟಿ ಲೆಕ್ಕಾಚಾರ ಸುಳ್ಳಾಗಲಿಲ್ಲ. ಸಾನ್ವಿ ಆಗಿ ರಶ್ಮಿಕಾ ಕಮಾಲ್ ಮಾಡಿದರು. ಅದರ ಬೆನ್ನಲ್ಲೇ ಪುನೀತ್ ರಾಜ್‌ಕುಮಾರ್ ಜೋಡಿಯಾಗಿ 'ಅಂಜನಿಪುತ್ರ' ಚಿತ್ರದಲ್ಲಿ ನಟಿಸುವ ಅವಕಾಶ ಸಿಕ್ಕಿತ್ತು.
'ನಾನು
ಹಿಂದಿರುಗಿ
ಹೋಗಬೇಕು'
ಎಂದು
ಆಸೆ
ವ್ಯಕ್ತಪಡಿಸಿದ
ನಟಿ
ರಶ್ಮಿಕಾ
ಮಂದಣ್ಣ
ಕನ್ನಡದಲ್ಲಿ 2 ಸಿನಿಮಾದಲ್ಲಿ ನಟಿಸಿದ ನಂತರ ರಶ್ಮಿಕಾ ಟಾಲಿವುಡ್ ಪ್ರವೇಶಿಸಿದರು. 'ಗೀತಾ ಗೋವಿಂದಂ' ಸಿನಿಮಾ ನಂತರ ರಾತ್ರೋರಾತ್ರಿ ಸ್ಟಾರ್ ಹೀರೊಯಿನ್ ಪಟ್ಟಕ್ಕೇರಿದರು. ಅಲ್ಲಿಂದ ಮುಂದೆ ಬಾಲಿವುಡ್ ಪ್ರವೇಶಿಸುವ ಮಟ್ಟಿಗೆ ಕ್ರೇಜ್ ಸಂಪಾದಿಸಿಕೊಂಡರು.

ರಕ್ಷಿತ್ ಶೆಟ್ಟಿ- ರಶ್ಮಿಕಾ ಬ್ರೇಕಪ್
ಕಿರಿಕ್ ಪಾರ್ಟಿ ಸಕ್ಸಸ್ ನಂತರ ರಕ್ಷಿತ್, ರಶ್ಮಿಕಾ ಪ್ರೀತಿಸಿ ಮದುವೆ ಆಗಲು ನಿಶ್ಚಯಿಸಿದರು. ಎಂಗೇಜ್ಮೆಂಟ್ ಕೂಡ ಅದ್ಧೂರಿಯಾಗಿ ನಡೆದಿತ್ತು. ನಂತರ ಕಾರಣಾಂತರಗಳಿಂದ ಅದು ಮುರಿದು ಬಿದ್ದಿತ್ತು. ಆ ನಂತರ ರಶ್ಮಿಕಾ ಹೆಚ್ಚು ತೆಲುಗು ಸಿನಿಮಾಗಳಲ್ಲಿ ನಟಿಸಲು ಆರಂಭಿಸಿದರು. ಇದರ ಬೆನ್ನಲ್ಲೇ ಕೆಲವರು ರಶ್ಮಿಕಾನ ಟ್ರೋಲ್ ಮಾಡಲು ಆರಂಭಿಸಿದರು. ಅದಕ್ಕೆ ತಕ್ಕಂತೆ ಆಕೆಯ ಕೆಲ ಹೇಳಿಕೆಗಳು ಬೇರೆ ಬೇರೆ ಸ್ವರೂಪ ಪಡೆದುಕೊಂಡಿತ್ತು. ಕನ್ನಡ ಮಾತನಾಡಲು ಕಷ್ಟ ಎಂದಿದ್ದು, ಕಾಂತಾರ ಸಿನಿಮಾ ನೋಡಿಲ್ಲ ಎಂದೆದ್ದು ಹೀಗೆ ಹಲವು ಕಾರಣಗಳಿಗೆ ಟ್ರೋಲ್ ಆಗಿದ್ದರು. ಇತ್ತೀಚೆಗೆ ತಮಗೆ ಅವಕಾಶ ಕೊಟ್ಟ ಸಂಸ್ಥೆ ಹೆಸರು ಹೇಳದೇ, ರಶ್ಮಿಕಾ ಧಿಮಾಕು ತೋರಿಸಿದ್ದಾರೆ ಎನ್ನುವ ಆರೋಪವೂ ಕೇಳಿ ಬಂದಿತ್ತು. ರಿಷಬ್ ಶೆಟ್ಟಿ ಕೂಡ ಪರೋಕ್ಷವಾಗಿ ರಶ್ಮಿಕಾಗೆ ಟಾಂಗ್ ಕೊಟ್ಟಿದ್ದರು. ಪ್ರಮೋದ್ ಶೆಟ್ಟಿ "ಹತ್ತಿದ ಏಣಿ ಒದೆಯಬಾರದು" ಎಂದು ಕಿವಿ ಹಿಂಡಿದ್ದರು.

ರಿಷಬ್, ರಕ್ಷಿತ್ ಅವಕಾಶ ಕೊಟ್ರು
ಇಷ್ಟೆಲ್ಲಾ ವಾದ ವಿವಾದ, ಟ್ರೋಲ್‌ಗಳ ಬಳಿಕ ನಟಿ ರಶ್ಮಿಕಾ ಮಂದಣ್ಣ ಮೊದಲ ಬಾರಿಗೆ ರಕ್ಷಿತ್ ಶೆಟ್ಟಿ ಹಾಗೂ ರಿಷಬ್ ಶೆಟ್ಟಿ ಬಗ್ಗೆ ಮಾತನಾಡಿದ್ದಾರೆ. ತೆಲುಗಿನ 'ಪ್ರೇಮಾ ದಿ ಜರ್ನಲಿಸ್ಟ್' ಯೂಟ್ಯೂಬ್ ಚಾನಲ್‌ಗೆ ರಶ್ಮಿಕಾ ಸಂದರ್ಶನ ನೀಡಿದ್ದಾರೆ. ಅದರ ಪ್ರೋಮೊ ರಿಲೀಸ್ ಆಗಿದೆ. ಅದರಲ್ಲಿ ನಿಮ್ಮ ಮೊದಲ 2 ಸಿನಿಮಾಗಳ ಬಗ್ಗೆ ಯೋಚಿಸಿದರೆ ಏನು ಅನಿಸುತ್ತದೆ ಎನ್ನುವ ಪ್ರಶ್ನೆಗೆ, "ಪ್ರಾಮಾಣಿಕವಾಗಿ ಹೇಳಬೇಕು ಅಂದ್ರೆ, ರಕ್ಷಿತ್ ಶೆಟ್ಟಿ- ರಿಷಬ್ ಶೆಟ್ಟಿ ಇಂಡಸ್ಟ್ರಿಗೆ ದಾರಿ ತೋರಿಸಿದ್ರು, ಅವ್ರು ಈ ಅವಕಾಶ ಕೊಟ್ರು, ಅಲ್ಲಿಂದ ಇಲ್ಲಿಯವರೆಗೆ ಸಾಕಷ್ಟು ಒಳ್ಳೆಯ ಜನರ ಜೊತೆ ಕೆಲಸ ಮಾಡಿದ್ದೇನೆ" ಎಂದು ರಶ್ಮಿಕಾ ಹೇಳಿದ್ದಾರೆ.

ಪುನೀತ್ ಸರ್ ಸಹಾಯ ಮರೆಯಲ್ಲ
'ಅಂಜನಿಪುತ್ರ' ಚಿತ್ರದಲ್ಲಿ ಪುನೀತ್ ಸರ್ ಜೊತೆ ಕೆಲಸ ಮಾಡಿದ ಮೇಲೆ ಅವರ ಪ್ರಭಾವದಿಂದ ದೊಡ್ಡಮಟ್ಟದಲ್ಲಿ ಕೆಲಸ ಮಾಡುವುದನ್ನು ಕಲಿತೆ. ದೇವರ ದಯೆಯಿಂದ ಪುನೀತ್ ಸರ್‌ನ ಭೇಟಿ ಆಗಿದ್ದೆ. ಇವತ್ತು 4 ಚಿತ್ರರಂಗದಲ್ಲಿ ನಾನು ಕೆಲಸ ಮಾಡುತ್ತಿರುವುದು ಅಚ್ಚರಿ ಎನಿಸುತ್ತಿದೆ. ಅದಕ್ಕಾಗಿ ನಾನು ಪುನೀತ್ ರಾಜ್‌ಕುಮಾರ್ ಸರ್‌ಗೆ ಧನ್ಯವಾದ ತಿಳಿಸುತ್ತೇನೆ" ಎಂದಿದ್ದಾರೆ. ಇತ್ತೀಚೆಗೆ 'ಅಂಜನಿಪುತ್ರ' ಸಿನಿಮಾ 5 ವರ್ಷ ಪೂರೈಸಿದ ಸಮಯದಲ್ಲೂ ರಶ್ಮಿಕಾ ಟ್ವೀಟ್ ಮಾಡಿ ಪುನೀತ್ ರಾಜ್‌ಕುಮಾರ್ ಸಹಾಯವನ್ನು ನೆನೆದಿದ್ದರು.

ಟ್ರೋಲ್ ಬಗ್ಗೆ ರಶ್ಮಿಕಾ ಪ್ರತಿಕ್ರಿಯೆ
"ಕಾಂಟ್ರವರ್ಸಿ, ಟ್ರೋಲ್ ಅದು ಇದು ಆರಂಭವಾದಾಗ ಮೊದಲು ಸುಮ್ಮನಿದ್ದೆ. ಯಾಕಂದ್ರೆ ನಾನು ಜನರ ಮೇಲೆ ಇಟ್ಟಿರುವ ಗೌರವ ಅದು. ಅದು ನನ್ನ ಮೇಲೆ ಮಾತ್ರ ಪರಿಣಾಮ ಬೀರುತ್ತಿತ್ತು. ಅದು ಪರವಾಗಿಲ್ಲ ಎಂದುಕೊಂಡಿದ್ದೆ. ಈಗ ನನ್ನ ಫ್ಯಾಮಿಲಿ, ಅದರಲ್ಲೂ ನನ್ನ ತಂಗಿ ಮೇಲೆ ಪರಿಣಾಮ ಬೀರುತ್ತಿದೆ. ಅದನ್ನು ನನಗೆ ಸರಿ ಎನಿಸುತ್ತಿಲ್ಲ. ಈಗ ನನಗೆ ನನ್ನ ತಂಗಿಯ ಮಾನಸಿಕ ಆರೋಗ್ಯ ಮುಖ್ಯ. ಆಕೆ ಏನಾದ್ರು ನಿರ್ಧಾರ ತೆಗೆದುಕೊಂಡ್ರೆ ನನ್ನ ಮೇಲೆ ಪರಿಣಾಮ ಬೀರುತ್ತದೆ. ಆಕೆ ಇನ್ನು ಚಿಕ್ಕ ಮಗು. ಆಕೆಗಿನ್ನು 8 ವರ್ಷ ವಯಸ್ಸು. ಆಕೆ ಇದಕ್ಕೆಲ್ಲಾ ಅರ್ಹಳಲ್ಲ" ಎಂದು ರಶ್ಮಿಕಾ ಭಾವುಕರಾಗಿದ್ದಾರೆ.

ಸಿನಿಮಾ ಸೋಲಿನ ಬಗ್ಗೆ ಮಾತು
ಇತ್ತೀಚೆಗೆ ರಶ್ಮಿಕಾ ನಟನೆಯ ಸಿನಿಮಾ ಅಷ್ಟಾಗಿ ಸದ್ದು ಮಾಡ್ತಿಲ್ಲ. 'ಡಿಯರ್ ಕಾಮ್ರೇಡ್', 'ಗುಡ್‌ಬೈ' ಸಿನಿಮಾಗಳು ಬಾಕ್ಸಾಫೀಸ್‌ನಲ್ಲಿ ಮುಗ್ಗರಿಸಿದ್ದವು. ಈ ಬಗ್ಗೆ ಪ್ರತಿಕ್ರಿಯಿಸಿರುವ ರಶ್ಮಿಕಾ, "ಗುಡ್‌ಬೈ ಎನ್ನುವ ಸಿನಿಮಾ ಮಾಡಿದ್ದೆ. ಒಂದು ವರ್ಗ ಜನ ಅದನ್ನು ಮಿಸ್ ಮಾಡಿಕೊಳ್ಳಲು ಇಷ್ಟಪಡುವುದಿಲ್ಲ. ಈಗ ಅಲ್ಲದೇ ಇದ್ರು ಮುಂದಿನ ದಿನಗಳಲ್ಲಿ 10, 20 ವರ್ಷಗಳ ನಂತರ ಗುಡ್‌ಬೈ ತರ ಸಿನಿಮಾ ಮಾಡಬೇಕು ಎಂದುಕೊಳ್ಳುತ್ತಾರೆ" ಎಂದಿದ್ದಾರೆ. ಶೀಘ್ರದಲ್ಲೇ ಮಹಿಳಾ ಪ್ರಧಾನ ಸಿನಿಮಾ ಘೋಷಿಸುವುದಾಗಿ ರಶ್ಮಿಕಾ ಹೇಳಿದ್ದಾರೆ. 'ಅನಿಮಲ್' ಸಿನಿಮಾ ಬಗ್ಗೆ ಭಾರೀ ನಿರೀಕ್ಷೆ ಇದೆ. ನಾನು, ರಣ್ಬೀರ್ ಹಿಂದೆಂದೂ ಮಾಡಿರದ ಪಾತ್ರಗಳಲ್ಲಿ ನಟಿಸಿದ್ದೇವೆ, ನಿರ್ದೇಶಕ ಸಂದೀಪ್ ರೆಡ್ಡಿ ವಂಗಾ ಜೊತೆ ಮತ್ತಷ್ಟು ಸಿನಿಮಾ ಮಾಡುವ ಬಯಕೆ ಇದೆ ಎಂದು ವಿವರಿಸಿದ್ದಾರೆ.