For Quick Alerts
  ALLOW NOTIFICATIONS  
  For Daily Alerts

  ಸಿನಿತಾರೆಯರು ಮೆಚ್ಚಿದ 'ಗುಳ್ಟು': ಎಲ್ಲರಿಗೂ ಇಷ್ಟವಾಗೋದಕ್ಕೆ ಕಾರಣವೇನು.?

  By Bharath Kumar
  |

  ಸ್ಯಾಂಡಲ್ ವುಡ್ ನಲ್ಲಿ ಸದ್ಯ 'ಗುಳ್ಟು' ಸಿನಿಮಾದ್ದೇ ಸದ್ದು, ಸುದ್ದಿ, ಅಬ್ಬರ ಎಲ್ಲವೂ. ಕಳೆದ ವಾರ ತೆರೆಕಂಡಿದ್ದ 'ಗುಳ್ಟು' ಚಿತ್ರ ಕನ್ನಡ ಪ್ರೇಕ್ಷಕರನ್ನ ಮೆಚ್ಚಿಸುವಲ್ಲಿ ಯಶಸ್ವಿಯಾಗಿದೆ. ಸರಳ ಮತ್ತು ಕುತೂಹಲ ಭರಿತವಾಗಿ ಸಿನಿರಸಿಕರನ್ನ ರಂಜಿಸುವ 'ಗುಳ್ಟು' ಹಿಟ್ ಸಿನಿಮಾ ಪಟ್ಟಿಗೆ ಹಾದಿಯಲ್ಲಿದೆ.

  ಸಾಮಾನ್ಯವಾದ ಕಥೆ ಮತ್ತು ಕುತೂಹಲ ಮೂಡಿಸುವ ಚಿತ್ರಕಥೆಯ ಮೂಲಕ ನೋಡುಗರನ್ನ ಹಿಡಿದಿಡುವ ಶಕ್ತಿ ಚಿತ್ರಕ್ಕಿದೆ. ಸೈಬರ್ ಕ್ರೈಮ್ ಸುತ್ತ ಕಥೆ ಹೆಣೆಯಲಾಗಿದ್ದು, ಪ್ರತಿ ದೃಶ್ಯದಲ್ಲೂ ಗಮನ ಸೆಳೆಯುವಂತೆ ಮಾಡಿದೆ. ಹೀಗಾಗಿ, ಬೇರೆಲ್ಲ ಸಿನಿಮಾಗಳನ್ನ ಹಿಂದಿಕ್ಕಿ ಗೆಲುವಿನ ನಾಗಲೋಟ ಬೀರುತ್ತಿದೆ ಗುಳ್ಟು.

  ಚಿತ್ರ ವಿಮರ್ಶೆ: ಸಾಮಾನ್ಯದವನಲ್ಲ ಈ 'ಗುಳ್ಟು'!ಚಿತ್ರ ವಿಮರ್ಶೆ: ಸಾಮಾನ್ಯದವನಲ್ಲ ಈ 'ಗುಳ್ಟು'!

  'ಅಭಿಮಾನಿ ದೇವರುಗಳು' ಮೆಚ್ಚಿದ 'ಗುಳ್ಟು' ಚಿತ್ರವನ್ನ ಈಗ ಸಿನಿ ತಾರೆಯರು ಕೂಡ ಮೆಚ್ಚಿಕೊಂಡಿದ್ದಾರೆ. ಸದಾ ಶೂಟಿಂಗ್, ತಮ್ಮ ಸಿನಿಮಾ ಎಂದು ಬ್ಯುಸಿಯಾಗಿರುವ ಚಿತ್ರತಾರೆಯರು 'ಗುಳ್ಟು' ಚಿತ್ರವನ್ನ ನೋಡಿ ಫುಲ್ ಮಾರ್ಕ್ಸ್ ಕೊಟ್ಟಿದ್ದಾರೆ. ನಟಿ ಸೋನು ಗೌಡ ಮತ್ತು ನವೀನ್ ಶಂಕರ್ ಮುಖ್ಯ ಭೂಮಿಕೆಯಲ್ಲಿ ಚಿತ್ರವನ್ನ ನೋಡಿದ ತಾರೆಯರು ಏನಂದ್ರು.? ಮುಂದೆ ಓದಿ.....

  ರಶ್ಮಿಕಾ ಮಂದಣ್ಣ

  ರಶ್ಮಿಕಾ ಮಂದಣ್ಣ

  ಗಾಂಧಿನಗರದಲ್ಲಿ ಹೊಸ ಭರವಸೆ ಹುಟ್ಟಿಸಿರುವ ಗುಳ್ಟು ಸಿನಿಮಾವನ್ನ ಎಲ್ಲರೂ ಇಷ್ಟಪಟ್ಟಿದ್ದಾರೆ. ಈಗ ಕಿರಿಕ್ ಪಾರ್ಟಿ ಚೆಲುವೆ ರಶ್ಮಿಕಾ ಮಂದಣ್ಣ ಇತ್ತೀಚಿಗಷ್ಟೆ ಸಿನಿಮಾ ನೋಡಿದ್ದು ಫುಲ್ ಥ್ರಿಲ್ ಆಗಿದ್ದಾರೆ. ಈ ಚಿತ್ರದ ಬಗ್ಗೆ ಟ್ವಿಟ್ಟರ್ ನಲ್ಲಿ ಅಭಿಪ್ರಾಯ ಬರೆದುಕೊಂಡಿರುವ ನಟಿ ''ಗುಳ್ಟು ಸಿನಿಮಾ ಅದ್ಭುತ. ಇಡೀ ತಂಡಕ್ಕೆ ಶುಭಾಶಯ. ನಿರ್ದೇಶಕ ಜನಾರ್ಧನ್ ಚಿಕ್ಕಣ್ಣ ಅವರ ನಿಜಕ್ಕೂ ಅತ್ಯುತ್ತಮ ಕೆಲಸ ಮಾಡಿದ್ದಾರೆ'' ಎಂದಿದ್ದಾರೆ.

  ಸಂಗೀತಾ ಭಟ್

  ಸಂಗೀತಾ ಭಟ್

  ಸ್ಯಾಂಡಲ್ ವುಡ್ ನಲ್ಲಿ ಸಂಚಲನ ಸೃಷ್ಟಿಸುತ್ತಿರುವ ಮತ್ತೋರ್ವ ನಟಿ ಸಂಗೀತಾ ಭಟ್. ಸಂಗೀತಾ ಕೂಡ ಇತ್ತೀಚಿಗಷ್ಟೆ ಗುಳ್ಟು ಚಿತ್ರವನ್ನ ನೋಡಿದ್ದು ಖುಷಿಯಾಗಿದ್ದಾರೆ. ಈ ಬಗ್ಗೆ ವಿಡಿಯೋ ಮಾಡಿರುವ ಸಂಗೀತಾ ''ಗುಳ್ಟು ಚಿತ್ರದಲ್ಲಿ ಹೊಸತನ ಇದೆ. ಪ್ರತಿಯೊಂದು ದೃಶ್ಯ, ಪ್ರತಿಯೊಂದು ಶಾಟ್ ನಲ್ಲೂ ಅದು ಕಾಣುತ್ತೆ. ಇದು ಹೊಸಬರ ಸಿನಿಮಾ ಅಲ್ಲ. ಎಲ್ಲರೂ ಅಭಿನಯದಲ್ಲೂ ಸೂಪರ್ ಆಗಿದೆ. ಜನಾರ್ಧನ್ ಚಿಕ್ಕಣ್ಣ ಅವರಿಗೆ ಹ್ಯಾಟ್ಸ್ ಅಪ್'' ಎಂದು ಫುಲ್ ಮಾರ್ಕ್ಸ್ ಕೊಟ್ಟಿದ್ದಾರೆ.

  ಸಂಗೀತಾ ಭಟ್ ಮಾತನಾಡಿರುವ ವಿಡಿಯೋ ನೋಡಿ

  ರಕ್ಷಿತ್ ಶೆಟ್ಟಿ

  ರಕ್ಷಿತ್ ಶೆಟ್ಟಿ

  ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಕೂಡ ಗುಳ್ಟು ಚಿತ್ರವನ್ನ ನೋಡಿ ಖುಷಿಯಾಗಿದ್ದಾರೆ. 'ಗುಳ್ಟು' ಚಿತ್ರ ನಿಜಕ್ಕೂ ಮೈಂಡ್ ಬ್ಲೋಯಿಂಗ್. ಚಿತ್ರದ ಕ್ಲೈಮ್ಯಾಕ್ಸ್ ವರೆಗೂ ಪ್ರತಿಯೊಂದು ನಿಮಿಷವೂ ಅತ್ಯಾದ್ಭುತವಾದ ಅನುಭವ. ಇದಕ್ಕೂ ಮುಂಚೆ ಈ ರೀತಿಯಾದ ಕನ್ನಡ ಸಿನಿಮಾ ನೋಡಿರಲು ಸಾಧ್ಯವಿಲ್ಲ'' ಎಂದಿದ್ದಾರೆ.

  ನವೀನ್ ಮತ್ತು ಸೋನು ಬಗ್ಗೆ...

  ನವೀನ್ ಮತ್ತು ಸೋನು ಬಗ್ಗೆ...

  ಚಿತ್ರದ ನಾಯಕ ನವೀನ್ ಶಂಕರ್ ಅವರ ಅಭಿನಯಕ್ಕೆ ಅಮೋಘ. ಈ ಪಾತ್ರಕ್ಕೆ ಸೂಕ್ತವಾದ ನಟ ಮತ್ತು ಅದಕ್ಕಾಗಿಯೇ ಹುಟ್ಟಿದ ಕಲಾವಿದನಂತೆ ಫರ್ಫಾಮ್ ಮಾಡಿದ್ದಾರೆ. ಜನಾರ್ಧನ್ ಅವರ ಕೆಲಸ ಸೂಪರ್ ಆಗಿದೆ. ಇಂತಹ ಸಿನಿಮಾವನ್ನ ಯಾವುದೇ ಕಾರಣಕ್ಕೂ ಮಿಸ್ ಮಾಡ್ಕೋಬೇಡಿ ಎಂದು ರಕ್ಷಿತ್ ಶೆಟ್ಟಿ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.

  ನಿರ್ದೇಶಕ ಸೆನ್ನಾ ಹೆಗ್ಡೆ

  ನಿರ್ದೇಶಕ ಸೆನ್ನಾ ಹೆಗ್ಡೆ

  ''ಗುಳ್ಟು ಸಿನಿಮಾ ನೋಡಿದ ಅನುಭವ ತುಂಬಾ ಚೆನ್ನಾಗಿದೆ. ಜನಾರ್ಧನಗ್ ಚಿಕ್ಕಣ್ಣ ಮತ್ತು ಇಡೀ ತಂಡಕ್ಕೆ ಶುಭಾಶಯ ಹೇಳಲು ಬಯಸುತ್ತೇನೆ. ದಯವಿಟ್ಟು ನಿಮ್ಮ ಹತ್ತಿರದ ಚಿತ್ರಮಂದಿರದಲ್ಲಿ ಸಿನಿಮಾ ನೋಡಿ'' ಎಂದು ನಿರ್ದೇಶಕ ಸೆನ್ನಾ ಹೆಗ್ಡೆ ಸಂತಸ ವ್ಯಕ್ತಪಡಿಸಿದ್ದಾರೆ.

  English summary
  Kannada actor rakshith shetty, actress rashmika mandanna, sangeeth bhat are appreciate to kannada movie gultoo. the movie has released on march 30th.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X