For Quick Alerts
  ALLOW NOTIFICATIONS  
  For Daily Alerts

  ಇದಪ್ಪಾ ರಕ್ಷಿತ್ ಶೆಟ್ಟಿ ಅಲಿಯಾಸ್ 'ರಿಕ್ಕಿ' ವರಸೆ ಅಂದ್ರೆ

  By Suneetha
  |

  ನಟ ಕಮ್ ನಿರ್ದೇಶಕ ರಕ್ಷಿತ್ ಶೆಟ್ಟಿ ಮತ್ತು 'ಉಗ್ರಂ' ಬೆಡಗಿ ನಟಿ ಹರಿಪ್ರಿಯಾ ಅವರು ನಟಿಸಿರುವ ಈ ವರ್ಷದ ಮತ್ತೊಂದು ಬಹುನಿರೀಕ್ಷಿತ ಸಿನಿಮಾ 'ರಿಕ್ಕಿ' ಈ ವಾರ (ಜನವರಿ 22) ಬಿಡುಗಡೆ ಆಗುತ್ತಿದೆ.

  ನಿರ್ದೇಶಕ ರಿಷಬ್ ಶೆಟ್ಟಿ ನಿರ್ದೇಶನ ಮಾಡಿರುವ 'ರಿಕ್ಕಿ' ಸಿನಿಮಾವನ್ನು 'ತ್ರಿಭುವನ್' ಚಿತ್ರಮಂದಿರದಲ್ಲಿ ಬಿಡುಗಡೆ ಮಾಡುವುದಾಗಿ ಈ ಮೊದಲು ನಿರ್ಧರಿಸಲಾಗಿತ್ತು. ಆದರೆ ಇದೀಗ ಕೊನೇ ಗಳಿಗೆಯಲ್ಲಿ ಆದ ಬದಲಾವಣೆಯಿಂದ 'ತ್ರಿಭುವನ್' ಬದ್ಲಾಗಿ 'ಅಭಿನಯ' ಚಿತ್ರಮಂದಿರದಲ್ಲಿ 'ರಿಕ್ಕಿ' ಸಿನಿಮಾ ಬಿಡುಗಡೆ ಆಗುತ್ತಿದೆ.[ರಕ್ಷಿತ್ ಶೆಟ್ಟಿ 'ರಿಕ್ಕಿ' ಅವತಾರ್ ಸಿನ್ಮಾ ಮ್ಯಾಷ್ ಅಪ್ ಸ್ಟೈಲ್]

  'ತ್ರಿಭುವನ್' ಚಿತ್ರಮಂದಿರದಲ್ಲಿ ಹೊಸಬರ 'ಫಸ್ಟ್‌ ರ‍್ಯಾಂಕ್‌ ರಾಜು' ಸಿನಿಮಾ ಯಶಸ್ವಿ ಪ್ರದರ್ಶನ ಕಾಣುವುದರ ಜೊತೆಗೆ ಒಳ್ಳೆ ಕಲೆಕ್ಷನ್ ಕೂಡ ಮಾಡುತ್ತಿದೆ. ಆದ್ದರಿಂದ 'ರಿಕ್ಕಿ' ಚಿತ್ರತಂಡ 'ತ್ರಿಭುವನ್' ಬದ್ಲಾಗಿ 'ಅಭಿನಯ'ದಲ್ಲಿ 'ರಿಕ್ಕಿ' ಸಿನಿಮಾ ಬಿಡುಗಡೆಗೆ ನಿರ್ಧರಿಸಿದೆ.

  ನೋಡಿ ಎಷ್ಟು ಒಳ್ಳೆ ಮನಸ್ಸು ಅಲ್ವಾ?, ಎಲ್ಲರೂ ತಮ್ಮ ಸಿನಿಮಾ ಬಿಡುಗಡೆ ಸಮಯಕ್ಕೆ ಬಂದಾಗ ಬೇರೆ ಸಿನಿಮಾಗಳನ್ನು ಎತ್ತಂಗಡಿ ಮಾಡುವ ಭರದಲ್ಲಿಯೇ ಇರುತ್ತಾರೆ ಹೊರತು ಯಾರೂ ಸಹಾಯ ಮಾಡಲ್ಲ. ಇದೀಗ ಇದಕ್ಕೆ ಒಳ್ಳೆ ನಿದರ್ಶನ 'ರಿಕ್ಕಿ' ಚಿತ್ರತಂಡ.[ಹಲ್ಲಿಗೆ ಹಲ್ಲು, ಕಣ್ಣಿಗೆ ಕಣ್ಣು, ರಕ್ತಕ್ಕೆ ರಕ್ತ - ರಿಕ್ಕಿ ಟ್ರೈಲರ್ ನೋಡಿ]

  ಇನ್ನು ನಟ ದರ್ಶನ್ ಅವರು ಕೂಡ ಬೇರೆ ಚಿತ್ರಗಳಿಗೆ ತೊಂದರೆ ಆಗಬಾರದು ಎಂದು ಈ ವಾರ ರಿಲೀಸ್ ಆಗಬೇಕಿದ್ದ ತಮ್ಮ 'ವಿರಾಟ್' ಸಿನಿಮಾವನ್ನು ಮುಂದಿನ ವಾರಕ್ಕೆ ಪೋಸ್ಟ್ ಪೋನ್ ಮಾಡಿದ್ದಾರೆ.

  English summary
  Rakshith Shetty, Haripriya starring Kannada Movie "Ricky" which was supposed to get released in Tribhuvan has been shifted to Abhinaya theater in the last moment. Ricky movie had announced Tribhuvan where First Rank Raju movie was running. As the collection of the First Rank Raju was good Ricky team decided to shift Ricky movie to Abhinaya theater.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X