For Quick Alerts
  ALLOW NOTIFICATIONS  
  For Daily Alerts

  OTTಯಲ್ಲಿ '777 ಚಾರ್ಲಿ': ಚಿತ್ರಮಂದಿರದಲ್ಲಿ ಕಾಣದ್ದು, ಮೊಬೈಲ್‌ನಲ್ಲಿ ಕಾಣಿ

  |

  ನಟ ರಕ್ಷಿತ್ ಶೆಟ್ಟಿ ಅಭಿನಯದ, ಕಿರಣ್‌ರಾಜ್‌ ನಿರ್ದೇಶನದ ಪ್ಯಾನ್‌ ಇಂಡಿಯಾ ಸಿನಿಮಾ '777 ಚಾರ್ಲಿ' ವಿಶಿಷ್ಟ ರೀತಿಯಲ್ಲಿ ಗಮನ ಸೆಳೆದ ಸಿನಿಮಾ. ಈ ಚಿತ್ರ ಮಾಸ್ ಅಪೀಲ್ ಇಲ್ಲದೇ ಹೋದರೂ, ಬಾಕ್ಸಾಫಿಸ್‌ನಲ್ಲಿ ಉತ್ತಮ ಗಳಿಕೆ ಕಂಡು ಗೆದ್ದು ಬೀಗಿದ ಸಿನಿಮಾ.

  '777 ಚಾರ್ಲಿ' ರಕ್ಷಿತ್ ಶೆಟ್ಟಿ ಸಿನಿಮಾಗೆ ವೃತ್ತಿ ಬದುಕಿಗೆ ಹೊಸ ಹೆಸರು ತಂದುಕೊಟ್ಟ ಸಿನಿಮಾ. ಭಾವನಾತ್ಮಕವಾಗಿ ಪ್ರೇಕ್ಷಕರನ್ನು ಹಿಡಿದಿಡುವಲ್ಲಿ ಯಶಸ್ವಿಯಾದ ಸಿನಿಮಾ ಇದು. ಪ್ಯಾನ್‌ ಇಂಡಿಯಾ ಲೆವೆಲ್ ನಲ್ಲಿ ಹಲವು ಭಾಷೆಗಳಲ್ಲಿ ತೆರೆಗೆ ಬಂದ '777 ಚಾರ್ಲಿ' ನಿರೀಕ್ಷೆ ಮಟ್ಟವನ್ನು ಮೀರಿ ಹೆಸರು ಮಾಡಿದೆ.

  ಸಿನಿಮಾದಲ್ಲಿ ಇಲ್ಲದ '777 ಚಾರ್ಲಿ' ದೃಶ್ಯ ರಿಲೀಸ್ ಮಾಡಿದ ತಂಡ: ಸೂಪರ್ ಎಂದ ಫ್ಯಾನ್ಸ್!ಸಿನಿಮಾದಲ್ಲಿ ಇಲ್ಲದ '777 ಚಾರ್ಲಿ' ದೃಶ್ಯ ರಿಲೀಸ್ ಮಾಡಿದ ತಂಡ: ಸೂಪರ್ ಎಂದ ಫ್ಯಾನ್ಸ್!

  '777 ಚಾರ್ಲಿ'ಯನ್ನು ಮತ್ತೆ ನೋಡಬೇಕು ಎಂದುಕೊಳ್ಳುವವರಿಗೆ ಮತ್ತು ಸಿನಿಮಾವನ್ನು ಒಟಿಟಿಯಲ್ಲಿ ನೋಡಬೇಕು ಎಂದು ಬಯಸಿದವರು ಇನ್ನು ಹೆಚ್ಚಿನ ಸಮಯ ಕಾಯುವ ಅಗತ್ಯವಿಲ್ಲ. ಯಾಕೆಂದರೆ '777 ಚಾರ್ಲಿ' ಚಿತ್ರದ ಒಟಿಟಿ ರಿಲೀಸ್ ದಿನಾಂಕ ಈಗ ಪ್ರಕಟವಾಗಿದೆ. ಈ ಸಿನಿಮಾ ಒಟಿಟಿಯಲ್ಲಿ ಯಾವ ರಿಲೀಸ್ ಆಗುತ್ತಿದೆ ಮತ್ತು ಯಾವ ಪ್ಲ್ಯಾಟ್ ಫಾರ್ಮ್‌ನಲ್ಲಿ ನೋಡಬಹುದು ಎನ್ನುವುದನ್ನು ಮುಂದೆ ಓದಿ..

  450ಕ್ಕೂ ಅಧಿಕ ಥಿಯೇಟರ್‌ನಲ್ಲಿ 25 ದಿನ!

  450ಕ್ಕೂ ಅಧಿಕ ಥಿಯೇಟರ್‌ನಲ್ಲಿ 25 ದಿನ!

  ಸಿನಿಮಾ ಮಂದಿರದಲ್ಲಿ ರಿಲೀಸ್ ಆಗಿ ಯಶಸ್ಸು ಕಂಡ ಹಿಟ್ ಸಿನಿಮಾ '777 ಚಾರ್ಲಿ' ಈಗ ಒಟಿಟಿ ವೇದಿಕೆಗೆ ಬರಲು ದಿನಾಂಕ ನಿಗದಿಯಾಗಿದೆ. ಕಳೆದ ಜೂನ್‌ 10ರಂದು ಚಿತ್ರಮಂದಿರಗಳಲ್ಲಿ ತೆರೆಕಂಡಿದ್ದ ಈ ಸಿನಿಮಾ ದೇಶದಾದ್ಯಂತ 450ಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ 25 ದಿನ ಪೂರೈಸಿತ್ತು. ಈ ಮೂಲಕ '777 ಚಾರ್ಲಿ' ಹಲವು ದಾಖಲೆಗಳನ್ನು ಕೂಡ ಸೃಷ್ಟಿಸಿದೆ. 25ನೇ ದಿನ ಪೂರೈಸಿದ ಬಳಿಕ ಸಿನಿಮಾ ತಂಡ ಸುದ್ದಿಗೋಷ್ಠಿ ನಡೆಸಿ ಸಂಭ್ರಮವನ್ನು ಹಂಚಿಕೊಂಡಿತ್ತು.

  ಒಟಿಟಿ ಲಗ್ಗೆ ಇಡಲು ಸಜ್ಜಾದ '777 ಚಾರ್ಲಿ': ವಿಶೇಷ ದಿನದಂದೇ ಸ್ಟ್ರೀಮಿಂಗ್ಒಟಿಟಿ ಲಗ್ಗೆ ಇಡಲು ಸಜ್ಜಾದ '777 ಚಾರ್ಲಿ': ವಿಶೇಷ ದಿನದಂದೇ ಸ್ಟ್ರೀಮಿಂಗ್

  50 ದಿನಕ್ಕೆ ಒಟಿಟಿಯಲ್ಲಿ '777 ಚಾರ್ಲಿ'!

  50 ದಿನಕ್ಕೆ ಒಟಿಟಿಯಲ್ಲಿ '777 ಚಾರ್ಲಿ'!

  ಸಿನಿಮಾ ಬಗ್ಗೆ ಮಾತನಾಡಿದ ನಟ ರಕ್ಷಿತ್ ಶೆಟ್ಟಿ ಭರವಸೆಯನ್ನು ವ್ಯಕ್ತಪಡಿಸಿದ್ದರು. ಈ ಸಿನಿಮಾ 50 ದಿನಗಳನ್ನು ಪೂರೈಸುತ್ತೆ ಎಂಬ ಭರವಸೆಯಿದೆ. ಅಂದು ಸಿನಿಮಾ ಯಶಸ್ಸನ್ನು ಸಂಭ್ರಮಿಸುತ್ತೇವೆ ಎಂದು ಹೇಳಿದ್ದರು. ಅಂತೆಯೇ ಜುಲೈ 29ರಂದು '777 ಚಾರ್ಲಿ' ಸಿನಿಮಾ 50 ದಿನಗಳನ್ನು ಪೂರೈಸಲಿದೆ. ಹೀಗಾಗಿ ಇದೇ ದಿನ ಈ ಸಿನಿಮಾ ಒಟಿಟಿಯಲ್ಲಿ ರಿಲೀಸ್ ಆಗುತ್ತಿದೆ. ಈ ವಿಚಾರವನ್ನು ಸಣ್ಣ ಟೀಸರ್ ಹಂಚಿಕೊಳ್ಳುವ ಮೂಲಕ ರಕ್ಷಿತ್ ಶೆಟ್ಟಿ ಮತ್ತು ಟೀಮ್ ತಿಳಿಸಿದೆ. ಚಿತ್ರಮಂದಿದರಲ್ಲಿ ಚಾರ್ಲಿಯನ್ನು ಮಿಸ್ ಮಾಡಿಕೊಂಡವರು, ಈಗ ಒಟಿಟಿಯಲ್ಲಿ ಕಣ್ತುಂಬಿಕೊಳ್ಳ ಬಹುದಾಗಿದೆ.

  ಚಾರ್ಲಿ ಜುಲೈ 29ರಿಂದ ವೂಟ್ ಸೆಲೆಕ್ಟ್‌ನಲ್ಲಿ!

  ಚಾರ್ಲಿ ಜುಲೈ 29ರಿಂದ ವೂಟ್ ಸೆಲೆಕ್ಟ್‌ನಲ್ಲಿ!

  ಜುಲೈ 29ರಿಂದ ವೂಟ್ ಸೆಲೆಕ್ಟ್‌ನಲ್ಲಿ 777 ಚಾರ್ಲಿ ಸಿನಿಮಾ ವೀಕ್ಷಣೆಗೆ ಲಭ್ಯವಾಗಲಿದೆ. ಬೀದಿ ನಾಯಿಗಳ ರಕ್ಷಣೆ, ಪೋಷಣೆ ಕುರಿತ ಸಂದೇಶವಿರುವ ಈ ಚಿತ್ರದಲ್ಲಿ 'ಧರ್ಮ'ನ ಪಾತ್ರದಲ್ಲಿ ರಕ್ಷಿತ್ ಶೆಟ್ಟಿ ನಟಿಸಿದ್ದಾರೆ. ಚಿತ್ರಮಂದಿರದಲ್ಲಿ ಧರ್ಮ-ಚಾರ್ಲಿಯ ಭಾವನಾತ್ಮಕ ಪಯಣ ಪ್ರೇಕ್ಷಕರನ್ನು ಸೆಳೆದಿತ್ತು. ತಮ್ಮ ನಿರ್ದೇಶನದ ಚೊಚ್ಚಿಲ ಸಿನಿಮಾದಲ್ಲೇ ಕಿರಣ್‌ರಾಜ್‌ ಗೆದ್ದು ಬೀಗಿದ್ದಾರೆ. ಇನ್ನು ಈ ಸಿನಿಮಾ ಬಾಕ್ಸಾಫೀಸ್‌ನಲ್ಲಿ 75 ಕೋಟಿ ರೂ. ಗಿಂತಲೂ ಅಧಿಕ ಕಲೆ ಹಾಕಿದ್ದು, ಒಟ್ಟಾರೆ ಗಳಿಕೆ 100 ಕೋಟಿ ರೂ.ಗೂ ಅಧಿಕ ಆಗಿದೆ.

  ಒಟಿಟಿಯಲ್ಲಿ '777 ಚಾರ್ಲಿ' ಡಿಲೀಟೆಡ್ ದೃಶ್ಯ!

  ಇನ್ನು 777 ಚಾರ್ಲಿ ಸಿನಿಮಾದ ಒಟಿಟಿಯಲ್ಲಿ ಒಂದು ವಿಶೇಷತೆ ಇದೆ. ಅದೇನೆಂದರೆ ಚಿತ್ರಮಂದಿರಲ್ಲಿ ನಿಮಗೆ ನೋಡಲು ಸಿಗದ ಕೆಲವು ದೃಶ್ಯಗಳು ಇಲ್ಲಿ ಸಿಗುತ್ತವೆ. ಹೌದು, ಚಿತ್ರಮಂದಿರದಲ್ಲಿ '777 ಚಾರ್ಲಿ'ಯ ಹಲವು ದೃಶ್ಯಗಳಿಗೆ ಕತ್ತರಿ ಹಾಕಲಾಗಿತ್ತು. ನಂತರ ಸಾಮಾಜಿಕ ಜಾಲತಾಣದಲ್ಲಿ ಚಾರ್ಲಿಯ ಡಿಲೀಟೆಡ್ ದೃಶ್ಯಗಳು ಕೂಡ ವೈರಲ್ ಆಗಿದ್ದವು. ಈಗ ಒಟಿಟಿಯಲ್ಲಿ ರಿಲೀಸ್ ಆಗುತ್ತಿರುವ ಸಿನಿಮಾದಲ್ಲಿ ಆ ಎಲ್ಲಾ ಡಿಲೀಟೆಡ್ ದೃಶ್ಯಗಳೂ ಕೂಡ ಇರಲಿವೆ. ಹಾಗಾಗಿ ಇದು ಹೊಸ ಚಾರ್ಲಿ ಎಂದೇ ಹೇಳ ಬಹುದು.

  Recommended Video

  ಉಪ್ಪಿಗೆ ಡ್ಯಾನ್ಸ್ ಹೇಳಿಕೊಟ್ಟ ಜಾನಿ ಮಾಸ್ಟರ್ | Vikrant Rona | Upendra Rao | Jani Master *Press Meet
  English summary
  Rakshith Shetty starrer 777 Charlie OTT Releases July 29th On Voot Select With Deleted Scene, know More,
  Wednesday, July 27, 2022, 15:04
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X