For Quick Alerts
  ALLOW NOTIFICATIONS  
  For Daily Alerts

  'ಕನ್ನಡದಲ್ಲಿ ಶ್ರೀಮನ್ನಾರಾಯಣ ಪ್ರಮೋಟ್ ಮಾಡುವ ಅಗತ್ಯವಿಲ್ಲ' ಎಂದವರಿಗೆ ರಕ್ಷಿತ್ ಹೇಳಿದ್ದೇನು?

  |

  ರಕ್ಷಿತ್ ಶೆಟ್ಟಿ ಅಭಿನಯದ ಬಹು ನಿರೀಕ್ಷೆಯ 'ಅವನೇ ಶ್ರೀಮನ್ನಾರಾಯಣ' ಚಿತ್ರದ ಪೋಸ್ಟ್ ಪ್ರೊಡಕ್ಷನ್ ಕೆಲಸ ಭರ್ಜರಿಯಾಗಿ ನಡೆಯುತ್ತಿದೆ. ಮುಂದಿನ ತಿಂಗಳು ತೆರೆಗೆ ಬರುತ್ತಿರುವ ಅವನೇ ಶ್ರೀಮನ್ನಾರಾಯಣ ಚಿತ್ರದ ಮತ್ತೊಂದು ಟ್ರೈಲರ್ ರಿಲೀಸ್ ಮಾಡಲು ಚಿತ್ರತಂಡ ಸಿದ್ಧವಾಗುತ್ತಿದೆ.

  ಈ ಬಗ್ಗೆ ರಕ್ಷಿತ್ ಶೆಟ್ಟಿ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ. "ಚಿತ್ರದ ಟ್ರೈಲರ್ ನ ಫಸ್ಟ್ ಕಟ್ ಸಿದ್ಧವಿದೆ. ಟ್ರೈಲರ್ ರಿಲೀಸ್ ಆದ ಮೇಲೆ ಹೇಗೆ ರಿಯಾಕ್ಷನ್ ಇರುತ್ತೆ ಎನ್ನುವುದನ್ನು ನೋಡೋಕೆ ಕಾತರದಿಂದ ಕಾಯ್ತಿದಿನಿ. ಯವ್ ಯೂ ಆಲ್" ಎಂದು ಹೇಳಿದ್ದಾರೆ. ರಕ್ಷಿತ್ ಈ ಪೋಸ್ಟ್ ಹಾಕುತ್ತಿದ್ದಂತೆ ಅಭಿಮಾನಿಗಳು ಸಾಕಷ್ಟು ಪ್ರಶ್ನೆಗಳನ್ನು ಕೇಳುತ್ತಿದ್ದಾರೆ.

  ಬಹು ದಿನಗಳ ನಂತರ ಫೇಸ್ ಬುಕ್ ಲೈವ್ ಬಂದ ರಕ್ಷಿತ್ ಹೇಳಿದ್ದೇನು?ಬಹು ದಿನಗಳ ನಂತರ ಫೇಸ್ ಬುಕ್ ಲೈವ್ ಬಂದ ರಕ್ಷಿತ್ ಹೇಳಿದ್ದೇನು?

  ಬೇಗ ರಿಲೀಸ್ ಮಾಡಿ, ಬಹು ದಿನಗಳಿಂದ ನಾವು ಕಾಯುತ್ತಿದ್ದೀವಿ ಹೀಗೆ ಅಭಿಮಾನಿಗಳಿಂದ ಸಾಕಷ್ಟು ಪ್ರಶ್ನೆಗಳು ಹರಿದುಬರುತ್ತಿವೆ. ಇದರ ಜೊತೆಗೆ ಮತ್ತೊಬ್ಬ ಅಭಿಮಾನಿ "ಮೊದಲು ಬೇಗ ಟ್ರೇಲರ್ ಬಿಡಿ ಮಾರ್ರೆ, ಅದ್ಯಾವಾಗ ಪ್ರಮೋಟ್ ಮಾಡ್ತಿರೊ ದೇವ್ರೆ ಬಲ್ಲ. ಬೇರೆ ರಾಜ್ಯಗಳಲ್ಲಿ ಪ್ರಮೋಟ್ ಮಾಡಿ, ಕನ್ನಡದಲ್ಲಿ ಪ್ರಮೋಟ್ ಮಾಡೊ ಅಗತ್ಯ ಇಲ್ಲ, ಯಾಕಂದ್ರೆ ಇದು ಕನ್ನಡದ ಹೆಮ್ಮೆಯ ಚಿತ್ರ, ನಾವೆಲ್ಲಾ ಇದಿವಿ ಪ್ರಮೋಟ್ ಮಾಡ್ಲಿಕ್ಕೆ ಇಲ್ಲಿ" ಎಂದು ಕಮೆಂಟ್ ಮಾಡಿದ್ದಾರೆ.

  ಅಭಿಮಾನಿಯ ಈ ಪ್ರೀತಿಯ ಕಮೆಂಟ್ ನೋಡಿ ರಕ್ಷಿತ್ ಪ್ರತಿಕ್ರಿಯೆ ನೀಡಿದ್ದಾರೆ. ನಿಮ್ಮ ಈ ಸಹಕಾರಕ್ಕೆ ತುಂಬ ಧನ್ಯವಾದಗಳು ಎಂದು ಹೇಳಿದ್ದಾರೆ. ಒಂದೊಳ್ಳೆ ಸಿನಿಮಾವನ್ನು ಕನ್ನಡ ಅಭಿಮಾನಿಗಳೆ ಗೆಲ್ಲಿಸುತ್ತಾರೆ ಎನ್ನುವುದಕ್ಕೆ ಇದೆ ಉದಾಹರಣೆ.

  ಇದೆ ತಿಂಗಳು 20 ರಿಂದ 25ರ ಒಳಗೆ ಚಿತ್ರದ ಟ್ರೈಲರ್ ರಿಲೀಸ್ ಆಗಲಿದೆಯಂತೆ. ಇನ್ನು ವಿಶೇಷ ಅಂದರೆ ಈಗಾಗಲೆ ರಿಲೀಸ್ ಆಗಿರುವ ಟ್ರೈಲರ್ ಮತ್ತು ಟೀಸರ್ ಗೆ ಸದ್ಯ ರಿಲೀಸ್ ಆಗಲಿರುವ ಟ್ರೈಲರ್ ಗೂ ಒಂದು ಲಿಂಕ್ ಇರಲಿದೆಯಂತೆ. ಈ ಬಗ್ಗೆ ಕೂಡ ರಕ್ಷಿತ್ ಟ್ವೀಟ್ ಮಾಡಿ ಹೇಳಿದ್ದಾರೆ

  ಡಿಸೆಂಬರ್ ಗೆ ರಿಲೀಸ್ ಆಗಲಿದೆ 'ಅವನೇ ಶ್ರೀಮನ್ನಾರಾಯಣ': ರಕ್ಷಿತ್ ಶೆಟ್ಟಿಡಿಸೆಂಬರ್ ಗೆ ರಿಲೀಸ್ ಆಗಲಿದೆ 'ಅವನೇ ಶ್ರೀಮನ್ನಾರಾಯಣ': ರಕ್ಷಿತ್ ಶೆಟ್ಟಿ

  "ಇದುವರೆಗೂ ರಿಲೀಸ್ ಆದ ಚಿತ್ರದ ಟೀಸರ್ ಗಳಲ್ಲಿ ಚಿತ್ರದ ಬಗ್ಗೆ ಹೆಚ್ಚೇನು ವಿಷಯಗಳನ್ನು ಬಹಿರಂಗಪಡಿಸಿರಲಿಲ್ಲ. ಟೀಸರ್ ಹಾಗೂ ಟ್ರೈಲರ್ ಮಧ್ಯೆ ಸಣ್ಣ ಲಿಂಕ್ ಇದೆಯಂತೆ. ನಿಮಗೆಲ್ಲ ಅದು ಗೊತ್ತಾಗುತ್ತೆ ಎನ್ನುವುದು ಖಂಡಿತ ನಂಬಿಕೆ ಇದೆ" ಎಂದು ಹೇಳಿದ್ದಾರೆ.

  ಅವನೇ ಶ್ರೀಮನ್ನಾರಾಯಣ ನಿರ್ದೇಶಕ ಸಚಿನ್ ಸಾರಥ್ಯದಲ್ಲಿ ಮೂಡಿ ಬರುತ್ತಿದೆ. ದೊಡ್ಡ ಮಟ್ಟದಲ್ಲಿ ನಿರೀಕ್ಷೆ ಹುಟ್ಟುಹಾಕಿರುವ ಶ್ರೀಮನ್ನಾರಾಯಣ ಚಿತ್ರದಲ್ಲಿ ರಕ್ಷಿತೆ ಗೆ ನಾಯಕಿಯಾಗಿ ಶಾನ್ವಿ ಶ್ರೀವಾತ್ಸವ್ ಕಾಣಿಸಿಕೊಂಡಿದ್ದಾರೆ. ಪುಷ್ಕರ್ ಮಲ್ಲಿಕಾರ್ಜನಯ್ಯ ನಿರ್ಮಾಣ ಚಿತ್ರಕ್ಕಿದೆ. ಅವನೇ ಶ್ರೀಮನ್ನಾರಾಯಣ ಮುಂದಿನ ತಿಂಗಳು 27ಕ್ಕೆ ತೆರೆಗೆ ಬರುತ್ತಿದೆ. ಐದು ಭಾಷೆಯಲ್ಲಿ ಸಿನಿಮಾ ತೆರೆಗೆ ಬರುತ್ತಿದೆ.

  Read more about: rakshith shetty
  English summary
  Kannada actor Rakshith Shetty starrer Avane Srimannarayana trailer is ready to release.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X