»   » ಸ್ಯಾಂಡಲ್ ವುಡ್ ನಟನ ಹೊಸ ಚಿತ್ರಕ್ಕೆ ಬಂಡವಾಳ ಹಾಕುತ್ತಿದ್ದಾರೆ ರಕ್ಷಿತ್ ಶೆಟ್ಟಿ

ಸ್ಯಾಂಡಲ್ ವುಡ್ ನಟನ ಹೊಸ ಚಿತ್ರಕ್ಕೆ ಬಂಡವಾಳ ಹಾಕುತ್ತಿದ್ದಾರೆ ರಕ್ಷಿತ್ ಶೆಟ್ಟಿ

Posted By:
Subscribe to Filmibeat Kannada

ನಟ ರಕ್ಷಿತ್ ಶೆಟ್ಟಿ ಈಗ ತಮ್ಮ ಬ್ಯಾನರ್ ನಲ್ಲಿ ಸಾಕಷ್ಟು ಒಳ್ಳೆಯ ಸಿನಿಮಾಗಳನ್ನು ಮಾಡುತ್ತಿದ್ದಾರೆ. ಅದರೊಂದಿಗೆ ಇದೀಗ ಸ್ಯಾಂಡಲ್ ವುಡ್ ನಟನ ಚಿತ್ರಕ್ಕೆ ರಕ್ಷಿತ್ ಬಂಡವಾಳ ಹಾಕುತ್ತಿದ್ದಾರೆ. ತಮ್ಮ ಪರಂವಃ (Paramvah Studios) ಬ್ಯಾನರ್ ನಲ್ಲಿ ಮತ್ತೊಂದು ವಿಭಿನ್ನ ಚಿತ್ರ ಮಾಡುವುದಕ್ಕೆ ರಕ್ಷಿತ್ ಕೈ ಹಾಕಿದ್ದಾರೆ.

ಅಂದಹಾಗೆ, ರಕ್ಷಿತ್ ಶೆಟ್ಟಿ ನಿರ್ಮಾಣ ಮಾಡುತ್ತಿರುವ ಈ ಚಿತ್ರಕ್ಕೆ ನಾಯಕನಾಗಿರುವುದು ದೂದ್ ಪೇಡ ದಿಗಂತ್. ರಕ್ಷಿತ್ ಮತ್ತು ದಿಗಂತ್ ಕಾಂಬಿನೇಶನ್ ಚಿತ್ರಕ್ಕೆ ಈಗಾಗಲೇ 'ಕಥೆಯೊಂದು ಶುರುವಾಗಿದೆ' ಎಂಬ ಟೈಟಲ್ ಫಿಕ್ಸ್ ಆಗಿದೆ. ಇನ್ನು ಈ ಸಿನಿಮಾ ದಿಗಂತ್ ಅವರ 'ಪಂಚರಂಗಿ' ಸ್ಟೈಲ್ ನಲ್ಲಿ ಇರಲಿದೆಯಂತೆ. 'ಪಂಚರಂಗಿ' ಸಿನಿಮಾ ನೋಡಿ ಇಷ್ಟ ಪಟ್ಟವರಿಗೆ ಈ ಚಿತ್ರ ಕೂಡ ಹತ್ತಿರವಾಗಲಿದೆಯಂತೆ.

Rakshith Shetty will be producing a movie to Diganth

ಉಳಿದಂತೆ ಈ ಚಿತ್ರದ ಜೊತೆಗೆ ರಕ್ಷಿತ್ ಶೆಟ್ಟಿ ನಿರ್ಮಾಣದ 'ಹಂಬಲ್ ಪೊಲಿಟಿಷಿಯನ್ ನಾಗರಾಜ್‌' ಸಿನಿಮಾ ರಿಲೀಸ್ ಹಂತದಲ್ಲಿದೆ. ಜೊತೆಗೆ 'ಭೀಮಸೇನ ನಳಮಹಾರಾಜ' ಮತ್ತು '777 ಚಾರ್ಲಿ' ಚಿತ್ರದ ಚಿತ್ರೀಕರಣ ನಡೆಯುತ್ತಿದೆ.

English summary
Rakshith Shetty will be producing a movie to Diganth.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X