For Quick Alerts
  ALLOW NOTIFICATIONS  
  For Daily Alerts

  ಮತ್ತೆ ಸಾಮಾಜಿಕ ಜಾಲತಾಣಕ್ಕೆ ಬರ್ತಿದ್ದಾರೆ ರಕ್ಷಿತ್ ಶೆಟ್ಟಿ

  |

  ಸ್ಯಾಂಡಲ್ ವುಡ್ ನ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಈಗ ಮತ್ತೆ ಸುದ್ದಿಯಲ್ಲಿದ್ದಾರೆ. ಸುಮಾರು ತಿಂಗಳುಗಳಿಂದ ಸದ್ದು ಸುದ್ದಿಯಿಲ್ಲದೆ ಸೈಲೆಂಟ್ ಆಗಿ ಚಿತ್ರೀಕರಣದಲ್ಲಿ ನಿರತರಾಗಿದ್ದ ಕಿರಿಕ್ ಸ್ಟಾರ್ ಈಗ ಅಭಿಮಾನಿಗಳಿಗೊಂದು ಸಂತಸದ ಸುದ್ದಿ ನೀಡಿದ್ದಾರೆ.

  ಹೌದು, ಸದ್ಯ ಸಾಲು ಸಾಲು ಚಿತ್ರಗಳಲ್ಲಿ ಬ್ಯುಸಿ ಇರುವ ರಕ್ಷಿತ್ 'ಅವನೇ ಶ್ರೀಮನ್ನಾರಾಯಣ' ಚಿತ್ರದ ರಿಲೀಸ್ ಗೆ ಎದುರು ನೋಡುತ್ತಿದ್ದಾರೆ. ಇದೇ ಸಂದರ್ಭದಲ್ಲಿ ರಕ್ಷಿತ್ ಹುಟ್ಟುಹಬ್ಬ ಕೂಡ ಹತ್ತಿರ ಬರ್ತಿದೆ.

  ಆಗಸ್ಟ್ ಗೆ 'ಅವನೇ ಶ್ರೀಮನ್ನಾರಾಯಣ' ಬರೋದು ಪಕ್ಕಾ

  ಸಿಂಪಲ್ ಸ್ಟಾರ್ ಹುಟ್ಟುಹಬ್ಬದ ಪ್ರಯುಕ್ತ ಸಾಮಾಜಿಕ ಜಾಲತಾಣಕ್ಕೆ ಮತ್ತೆ ವಾಪಸ್ ಬರುವ ಮನಸ್ಸು ಮಾಡಿದ್ದಾರಂತೆ. ಸುಮಾರು ವರ್ಷದಿಂದ ಅಭಿಮಾನಿಗಳ ಕೈಗೆ ಸಿಗದೆ ದೂರ ಉಳಿದಿದ್ದ ರಕ್ಷಿತ್ ಇನ್ಮುಂದೆ ಅಭಿಮಾನಿಗಳ ಜೊತೆ ನೇರ ಸಂದರ್ಶನದಲ್ಲಿ ಭಾಗಿಯಾಗಲಿದ್ದಾರೆ. ಮುಂದೆ ಓದಿ.

  ಜೂನ್ 6ಕ್ಕೆ ರಕ್ಷಿತ್ ಹುಟ್ಟುಹಬ್ಬ

  ಜೂನ್ 6ಕ್ಕೆ ರಕ್ಷಿತ್ ಹುಟ್ಟುಹಬ್ಬ

  ಇದೇ ತಿಂಗಳು ಜೂನ್ 6ಕ್ಕೆ ರಕ್ಷಿತ್ ಶೆಟ್ಟಿ ಹುಟ್ಟುಹಬ್ಬ. ಈಗಾಗಲೆ ರಕ್ಷಿತ್ ಅಭಿಮಾನಿಗಳಲ್ಲಿ ಸಂಭ್ರಮ ಮನೆ ಮಾಡಿದೆ. ಹುಟ್ಟುಹಬ್ಬದ ಪ್ರಯುಕ್ತ ಅಭಿಮಾನಿಗಳಿಗೆ ಸಾಕಷ್ಟು ಗಿಫ್ಟ್ ಗಳು ಕಾದಿವೆ. ಸದ್ಯ ರಕ್ಷಿತ್ ಸಾಕಷ್ಟು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಹಾಗಾಗಿ ಈ ಸಿನಿಮಾಗಳ ಟ್ರೈಲರ್, ಟೀಸರ್ ಮತ್ತು ಫಸ್ಟ್ ಲುಕ್ ತೆರೆಗೆ ಬರುವ ಸಾಧ್ಯತೆಗಳಿವೆ.

  ಜೂನ್ 6ಕ್ಕೆ ಸೋಷಿಯಲ್ ಮೀಡಿಯಾದಲ್ಲಿ ರಕ್ಷಿತ್

  ಜೂನ್ 6ಕ್ಕೆ ಸೋಷಿಯಲ್ ಮೀಡಿಯಾದಲ್ಲಿ ರಕ್ಷಿತ್

  ರಕ್ಷಿತ್ ಶೆಟ್ಟಿ ಸೋಷಿಯಲ್ ಮೀಡಿಯಾದಿಂದ ದೂರ ಸರಿದಿರುವುದು ಅಭಿಮಾನಿಗಳಿಗೆ ಭಾರಿ ಬೇಸರ ಮೂಡಿಸಿತ್ತು. ರಕ್ಷಿತ್ ದಿಢೀರನೆ ಸಾಮಾಜಿಕ ಜಾಲತಾಣದಿಂದ ದೂರ ಹೋಗಿದ್ರು. ಆದ್ರೀಗ ಹುಟ್ಟುಹಬ್ಬದ ದಿನ ಮತ್ತೆ ಸಾಮಾಜಿಕ ಜಾಲತಾಣಕ್ಕೆ ಮರಳುತ್ತಿದ್ದಾರೆ. ಈ ಮೂಲಕ ಮುಂದಿನ ಸಿನಿಮಾಗಳ ಮಾಹಿತಿ ನೀಡಲಿದ್ದಾರೆ. ಟ್ವಿಟ್ಟರ್, ಇನ್ಸ್ಟಾ ಗ್ರಾಮ್, ಫೇಸ್ ಬುಕ್ ಎಲ್ಲ ಕಡೆ ರಕ್ಷಿತ್ ಶೆಟ್ಟಿ ಪೇಜ್ ತೆರೆಯಲಿದೆ. ಆದ್ರೆ ರಕ್ಷಿತ್ ಶೆಟ್ಟಿ ಸೋಶಿಯಲ್ ಮೀಡಿಯವನ್ನು ಹ್ಯಾಂಡಲ್ ಮಾಡುವುದಿಲ್ಲವಂತೆ. ಬದಲಿಗೆ ಅವರ ಟೀಂ ಹ್ಯಾಂಡಲ್ ಮಾಡುತ್ತಂತೆ.

  'ಕಿರಿಕ್ ಪಾರ್ಟಿ' ಹಾಡಿನ ದಾಖಲೆ ಮುರಿದ 'ಚುಟು ಚುಟು'

  ಸೋಷಿಯಲ್ ಮೀಡಿಯಾದಿಂದ ದೂರ ಸರಿದಿದ್ದರು

  ಸೋಷಿಯಲ್ ಮೀಡಿಯಾದಿಂದ ದೂರ ಸರಿದಿದ್ದರು

  ನಟ ರಕ್ಷಿತ್ ಶೆಟ್ಟಿ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಆಕ್ಟಿವ್ ಆಗಿದ್ದರು. ತಮ್ಮ ವೈಯಕ್ತಿಕ ಹಾಗೂ ಸಿನಿಮಾ ವಿಚಾರಗಳನ್ನು ಅದರಲ್ಲಿ ಹಂಚಿಕೊಳ್ಳುತ್ತಿದ್ದರು. ಎಲ್ಲರಂತೆ, ಪ್ರತಿ ದಿನ ಸೋಷಿಯಲ್ ಮೀಡಿಯಾ ಬಳಕೆ ಮಾಡುತ್ತಿದ್ದ ರಕ್ಷಿತ್ ಕಳೆದ ವರ್ಷ ದೂರ ಸರಿದ್ದಿದ್ದರು. ಕಾರಣ ಹೇಳದೆ ಟ್ವಿಟ್ಟರ್ ಫೇಸ್ ಬುಕ್ ಖಾತೆಗಳನ್ನು ಡಿಲಿಟ್ ಮಾಡಿದ್ದರು. ಆದ್ರೆ ಅವರ ವೈಯಕ್ತಿಕ ಜೀವನದಲ್ಲಾದ ಕೆಲವು ಬೆಳವಣಿಗೆಗಳು ಸೋಷಿಯಲ್ ಮೀಡಿಯಾ ಬಿಡಲು ಕಾರಣ ಎಂದು ಹೇಳಲಾಗುತ್ತಿತ್ತು.

  ಬರ್ತಿದೆ 'ಅವನೇ ಶ್ರೀಮನ್ನಾರಾಯಣ'

  ಬರ್ತಿದೆ 'ಅವನೇ ಶ್ರೀಮನ್ನಾರಾಯಣ'

  ರಕ್ಷಿತ್ ಶೆಟ್ಟಿ ಸಿನಿಮಾಗಳು ತೆರೆಗೆ ಬರದೆ ಎರಡು ವರ್ಷಗಳು ಆಗಿವೆ. ಕಿರಿಕ್ ಪಾರ್ಟಿ ಸಿನಿಮಾ ನಂತರ ರಕ್ಷಿತ್ ಮತ್ತೆ ತೆರೆಮೇಲೆ ಬಂದಿಲ್ಲ. ಹಾಗಾಗಿ ಅಭಿಮಾನಿಗಳು ರಕ್ಷಿತ್ ಸಿನಿಮಾಗಾಗಿ ಕಾಯುತ್ತಿದ್ದಾರೆ. ಸದ್ಯ 'ಅವನೇ ಶ್ರೀಮನ್ನಾರಾಯಣ' ಮೂಲಕ ಅಭಿಮಾನಿಗಳ ಮುಂದೆ ಬರುತ್ತಿದ್ದಾರೆ. ಆಗಸ್ಟ್ ನಲ್ಲಿ ಚಿತ್ರ ತೆರೆಗೆ ಬರುವ ಸಾಧ್ಯತೆ ಇದೆ.

  English summary
  Kannada actor Simple star Rakshith shetty will return to social media. Rakshith Shetty come back to social media on his birthday.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X