For Quick Alerts
  ALLOW NOTIFICATIONS  
  For Daily Alerts

  ಮದುವೆ ವಾರ್ಷಿಕೋತ್ಸವ ಸಂಭ್ರಮದಲ್ಲಿ ರಕ್ಷಿತಾ-ಪ್ರೇಮ್

  |

  ಸ್ಯಾಂಡಲ್ ವುಡ್ ನ ಕ್ರೇಜಿ ಕ್ವೀನ್ ರಕ್ಷಿತಾ ಮತ್ತು ನಿರ್ದೇಶಕ ಪ್ರೇಮ್ ದಂಪತಿಗೆ ಮದುವೆ ವಾರ್ಷಿಕೋತ್ಸವದ ಸಂಭ್ರಮ. ಚಂದನವನದ ಚಂದದ ಕಪಲ್ ಗೆ 13ನೇ ವರ್ಷದ ಮದುವೆ ವಾರ್ಷಿಕೋತ್ಸವವನ್ನು ಆಚರಿಸಸಿಕೊಳ್ಳುತ್ತಿದ್ದಾರೆ. ರಕ್ಷಿತಾ ಮತ್ತು ಪ್ರೇಮ್ ಇಬ್ಬರು ಒಬ್ಬರಿಗೊಬ್ಬರು ಪ್ರೀತಿಸಿ ಮದುವೆಯಾದವರು.

  13 ವರ್ಷದ ಹಿಂದೆ ಅಂದರೆ ಇದೆ ದಿನ 2007 ರಂದು ರಕ್ಷಿತಾ ಮತ್ತು ಪ್ರೇಮ್ ಹಸೆಮಣೆ ಏರಿದ್ದರು. 13ರ ಸಂಭ್ರಮದಲ್ಲಿರುವ ರಕ್ಷಿತಾ ಮತ್ತು ಪ್ರೇಮ್ ಸಾಮಾಜಿಕ ಜಾಲತಾಣದಲ್ಲಿ ಸಂತ ಹಂಚಿಕೊಂಡಿದ್ದಾರೆ. ಮದುವೆ ವಾರ್ಷಿಕೋತ್ಸವ ಸಂಭ್ರಮವನ್ನು ರಕ್ಷಿತಾ ಸ್ನೇಹಿತರ ದಿನಾಚರಣೆಗೆ ಹೋಲಿಸಿದ್ದಾರೆ.

  ದಶಕದ ಬಳಿಕ ತೆರೆ ಮೇಲೆ ರಕ್ಷಿತಾ: ಡಿಂಪಲ್ ಕ್ವೀನ್ ಜೊತೆ ಕ್ರೇಜಿ ಕ್ವೀನ್ ಡ್ಯಾನ್ಸ್ದಶಕದ ಬಳಿಕ ತೆರೆ ಮೇಲೆ ರಕ್ಷಿತಾ: ಡಿಂಪಲ್ ಕ್ವೀನ್ ಜೊತೆ ಕ್ರೇಜಿ ಕ್ವೀನ್ ಡ್ಯಾನ್ಸ್

  ಪ್ರೇಮ್ ಗೆ ರಕ್ಷಿತಾ ಪ್ರೀತಿಯ ಸಂದೇಶ

  ಪ್ರೇಮ್ ಗೆ ರಕ್ಷಿತಾ ಪ್ರೀತಿಯ ಸಂದೇಶ

  ವಾರ್ಷಿಕೋತ್ಸವದ ಸಂಭ್ರಮದಲ್ಲಿರುವ ರಕ್ಷಿತಾ ಪತಿಯ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ "ಸ್ನೇಹಿತರ ದಿನಾಚರಣೆಗೆ ಶುಭಾಯಗಳು. 13 ವರ್ಷವಾಗಿದೆ. ನಾವಿಬ್ಬರು ಹೀಗೆ ಇರುತ್ತೇವೆ ಎಂದು ಭಾವಿಸಿದ್ದೇನೆ. ದೇವರು ಒಳ್ಳೆಯದು ಮಾಡಲಿ. ಯಾವಾಗಲು ಸಂತೋಷವಾಗಿರು" ಎಂದು ರಕ್ಷಿತಾ, ಪ್ರೇಮ್ ಗೆ ಪ್ರೀತಿಯ ಸಂದೇಶ ಕಳುಹಿಸಿದ್ದಾರೆ.

  ಸಿನಿಮಾರಂಗದ ನಂಟು ಬಿಡದ ರಕ್ಷಿತಾ

  ಸಿನಿಮಾರಂಗದ ನಂಟು ಬಿಡದ ರಕ್ಷಿತಾ

  ರಕ್ಷಿತಾ ಮತ್ತು ಪ್ರೇಮ್ ದಂಪತಿಗೆ ಸೂರ್ಯ ಎನ್ನುವ ಮುದ್ದಾದ ಮಗನಿದ್ದಾನೆ. ರಕ್ಷಿತಾ ಮದುವೆ ನಂತರ ಯಾವುದೆ ಸಿನಿಮಾದಲ್ಲಿ ಕಾಣಿಸಿಕೊಂಡಿಲ್ಲ. ಆದರೆ ಸಿನಿಮಾರಂಗದ ನಂಟನ್ನು ಬಿಟ್ಟು ಕೊಟ್ಟಿಲ್ಲ. ಪತಿಯ ಸಿನಿಮಾಗಳಿಗೆ ಬೆನ್ನೆಲುಬಾಗಿ ನಿಂತಿದ್ದಾರೆ. ಪ್ರೇಮ್ ನಿರ್ದೇಶನದ ಸಿನಿಮಾಗಳಿಗೆ ನಿರ್ಮಾಪಕಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

  ಚಾಲೆಂಜಿಂಗ್ ಸ್ಟಾರ್ ದರ್ಶನ್ ಬಗ್ಗೆ ನಟಿ ರಕ್ಷಿತಾ ಹೀಗೆ ಹೇಳಿದ್ದೇಕೆ?ಚಾಲೆಂಜಿಂಗ್ ಸ್ಟಾರ್ ದರ್ಶನ್ ಬಗ್ಗೆ ನಟಿ ರಕ್ಷಿತಾ ಹೀಗೆ ಹೇಳಿದ್ದೇಕೆ?

  ಸಹೋದರನ ಚಿತ್ರದಲ್ಲಿ ರಕ್ಷಿತಾ-ಪ್ರೇಮ್ ಬ್ಯುಸಿ

  ಸಹೋದರನ ಚಿತ್ರದಲ್ಲಿ ರಕ್ಷಿತಾ-ಪ್ರೇಮ್ ಬ್ಯುಸಿ

  ನಿರ್ದೇಶಕ ಪ್ರೇಮ್ ಸದ್ಯ ರಕ್ಷಿತಾ ಸಹೋದರ ರಾಣಾ ಸಿನಿಮಾಗೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಏಕ್ ಲವ್ ಯಾ ಸಿನಿಮಾ ಮೂಲಕ ರಾಣಾ ಅವರನ್ನು ಚಿತ್ರರಂಗಕ್ಕೆ ಪರಿಚಯಿಸುತ್ತಿದ್ದಾರೆ. ಈ ಸಿನಿಮಾಗೂ ರಕ್ಷಿತಾ ನಿರ್ಮಾಣ ಮಾಡುತ್ತಿದ್ದಾರೆ. ವಿಶೇಷ ಅಂದರೆ ಮದುವೆ ನಂತರ ಮೊದಲ ಬಾರಿಗೆ ಏಕ್ ಲವ್ ಯಾ ಸಿನಿಮಾ ಮೂಲಕ ಮತ್ತೆ ಬಣ್ಣಹಚ್ಚಿದ್ದಾರೆ. ಒಂದು ಹಾಡಿನಲ್ಲಿ ರಕ್ಷಿತಾ ಕಾಣಿಸಿಕೊಂಡಿದ್ದಾರೆ.

  'ಏಕ್ ಲವ್ ಯಾ'ದಲ್ಲಿ ರಾಣಾ ಜೊತೆ ರಚಿತಾ ಲಿಪ್ ಕಿಸ್'ಏಕ್ ಲವ್ ಯಾ'ದಲ್ಲಿ ರಾಣಾ ಜೊತೆ ರಚಿತಾ ಲಿಪ್ ಕಿಸ್

  ರಕ್ಷಿತಾ ದಂಪತಿಗೆ ಅಭಿಮಾನಿಗಳ ಶುಭಾಶಯ

  ರಕ್ಷಿತಾ ದಂಪತಿಗೆ ಅಭಿಮಾನಿಗಳ ಶುಭಾಶಯ

  13 ವರ್ಷಗಳ ಸಂತಸದ ದಾಂಪತ್ಯ ಜೀವನ ಕಳೆದಿರುವ ರಕ್ಷಿತಾ ಮತ್ತು ಪ್ರೇಮ್ ಗೆ ಶುಭಾಶಯಗಳ ಮಹಾಪೂರವೆ ಹರಿದು ಬರುತ್ತಿದೆ. ಅಭಿಮಾನಿಗಳು ಮತ್ತು ಸ್ನೇಹಿತರು ಶುಭಾಶಯ ಕಳುಹಿಸುತ್ತಿದ್ದಾರೆ. ಇಬ್ಬರು ಹೀಗೆ ಸಂತಸದಿಂದ ನಗುತ್ತ ಜೀವನ ಸಾಗಿಸಲಿ ಎನ್ನುವುದು ಅಭಿಮಾನಿಗಳ ಆಶಯ.

  English summary
  Kannada Actress Rakshitha and Prem celebrating 13th wedding anniversary.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X