»   » ನಟಿ ರಕ್ಷಿತಾ ಅವರ ಈ ಕೋರಿಕೆಯನ್ನು ಈಡೇರಿಸುತ್ತಾರಾ ದಾಸ ದರ್ಶನ್.?

ನಟಿ ರಕ್ಷಿತಾ ಅವರ ಈ ಕೋರಿಕೆಯನ್ನು ಈಡೇರಿಸುತ್ತಾರಾ ದಾಸ ದರ್ಶನ್.?

Posted By:
Subscribe to Filmibeat Kannada
Rakshitha Prem Requested Darshan | Filmibeat Kannada

ನಟಿ ರಕ್ಷಿತಾ ಪ್ರೇಮ್ ಈಗ ಡಿ ಬಾಸ್ ದರ್ಶನ್ ಮುಂದೆ ಒಂದು ಕೋರಿಕೆಯನ್ನು ಇಟ್ಟಿದ್ದಾರೆ. ಈ ಕೋರಿಕೆಯನ್ನು ಚಾಲೆಂಜಿಂಗ್ ಸ್ಟಾರ್ ದರ್ಶನ್ ಈಡೇರಿಸುತ್ತಾರಾ ಎಂಬುದು ಸದ್ಯದ ದೊಡ್ಡ ಕುತೂಹಲವಾಗಿದೆ.

ಸ್ಯಾಂಡಲ್ ವುಡ್ ನ ಸೂಪರ್ ಹಿಟ್ ಜೋಡಿಗಳಲ್ಲಿ ದರ್ಶನ್ ಮತ್ತು ರಕ್ಷಿತಾ ಕೂಡ ಒಬ್ಬರು. ಇವರಿಬ್ಬರ ಕಾಂಬಿನೇಶನ್ ನಲ್ಲಿ ಬಂದ ಅನೇಕ ಸಿನಿಮಾಗಳು ದೊಡ್ಡ ಮಟ್ಟದಲ್ಲಿ ಹಿಟ್ ಆಗಿದೆ. ಅದಕ್ಕಿಂತ ಹೆಚ್ಚಾಗಿ ದರ್ಶನ್ ಮತ್ತು ರಕ್ಷಿತಾ ಇಬ್ಬರೂ ಒಳ್ಳೆಯ ಸ್ನೇಹಿತರು.

ಅಂದಹಾಗೆ, ನಟ ದರ್ಶನ್ ಮುಂದೆ ರಕ್ಷಿತಾ ಇಟ್ಟ ಆ ಕೋರಿಕೆ ಏನು? ಎಂಬುದಕ್ಕೆ ಉತ್ತರ ಇಲ್ಲಿದೆ ಓದಿ...

ಫೇಸ್ ಬುಕ್ ಖಾತೆಯಲ್ಲಿ

ಸದ್ಯ ಜೀ ಕನ್ನಡ ವಾಹಿನಿಯ 'ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್' ಕಾರ್ಯಕ್ರಮದ ತೀರ್ಪುಗಾರರಾಗಿರುವ ನಟಿ ರಕ್ಷಿತಾ ಪ್ರೇಮ್ ತಮ್ಮ ಫೇಸ್ ಬುಕ್ ಖಾತೆಯ ಮೂಲಕ ಒಂದು ಕೋರಿಕೆಯನ್ನು ದರ್ಶನ್ ಅವರ ಮುಂದಿಟ್ಟಿದ್ದಾರೆ.

ಅಭಿಮಾನಿಯ ಆಸೆ

'ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್' ಕಾರ್ಯಕ್ರಮದ ಸ್ಪರ್ಧಿಯಲ್ಲಿ ಒಬ್ಬರಾದ ಚನ್ನಪ್ಪ ನಟ ದರ್ಶನ್ ಅವರ ದೊಡ್ಡ ಅಭಿಮಾನಿಯಾಗಿದ್ದು, ದರ್ಶನ್ ಅವರನ್ನು ಒಮ್ಮೆ ಭೇಟಿಯಾಗಬೇಕು ಎಂದು ಹಂಬಲಿಸುತ್ತಿದ್ದಾರೆ.

'ಕುರುಕ್ಷೇತ್ರ' ಸೆಟ್ ನಲ್ಲಿ 'ಪವಿತ್ರ' ದರ್ಶನ ಫೋಟೋ ಲೀಕ್: ಮುನಿರತ್ನ ಆಕ್ರೋಶ

ಗೆಳೆಯನಿಗೆ ಮನವಿ

''ಇವರು ಚನ್ನಪ್ಪ 'ಸರಿಗಮಪ ಸೀಸನ್ 11' ಕಾರ್ಯಕ್ರಮದ ವಿನ್ನರ್. ಇವರು ನಿಮ್ಮ (ದರ್ಶನ್) ದೊಡ್ಡ ಅಭಿಮಾನಿಗಳಲ್ಲಿ ಒಬ್ಬರು. ನಿಮ್ಮನ್ನು ಒಮ್ಮೆ ನೋಡುವುದು ಈತನ ದೊಡ್ಡ ಆಸೆಯಾಗಿದೆ. ಪ್ಲೀಸ್ ಇವರನ್ನು ಒಮ್ಮೆ ಭೇಟಿ ಮಾಡಿ'' ಎಂದು ಚನ್ನಪ್ಪ ಜೊತೆಗಿನ ಫೋಟೋ ಹಾಕಿ ದರ್ಶನ್ ಬಳಿ ರಕ್ಷಿತಾ ಕೇಳಿ ಕೊಂಡಿದ್ದಾರೆ.

'ಅಗ್ನಿಸಾಕ್ಷಿ' ಚಂದ್ರಿಕಾಗಿದೆ ದೊಡ್ಡ ಕನಸು: ಈಡೇರಿಸುತ್ತಾರಾ ನಟ ದರ್ಶನ್.?

ಅಭಿಮಾನಿಯ ಆಸೆ ಈಡೇರಿಸುತ್ತಾರಾ ದಾಸ

ಈ ಹಿಂದೆ ಇದೇ ರೀತಿಯ ಅನೇಕ ಅಭಿಮಾನಿಗಳನ್ನು ದರ್ಶನ್ ಭೇಟಿ ಆದ ಸಾಕಷ್ಟು ಉದಾಹರಣೆಗಳಿದೆ. ಈಗ ಚನ್ನಪ್ಪ ಆಸೆಯನ್ನು ದರ್ಶನ್ ನೆರವೇರಿಸುತ್ತಾರಾ ಅಂತ ಕಾದು ನೋಡಬೇಕು.

English summary
Kannada Actress Rakshitha Prem has taken her facebook account to request Darshan to meet one of his fan.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada