»   » ಸುಂಟರಗಾಳಿ ರಕ್ಷಿತಾ ಬೆನ್ನ ಹಿಂದೆ ಭದ್ರವಾದ 'ಮಾ' ಮಮತಾ

ಸುಂಟರಗಾಳಿ ರಕ್ಷಿತಾ ಬೆನ್ನ ಹಿಂದೆ ಭದ್ರವಾದ 'ಮಾ' ಮಮತಾ

Posted By:
Subscribe to Filmibeat Kannada

ಸ್ಯಾಂಡಲ್ ವುಡ್ ನಲ್ಲಿ ಸುಂಟರಗಾಳಿ ಎಬ್ಬಿಸಿದ ನಟಿ ರಕ್ಷಿತಾ ಪ್ರೇಮ್. ತೆರೆಮೇಲೆ ರಕ್ಷಿತಾ ಎಷ್ಟು ಬಿಂದಾಸ್ಸೋ, ತೆರೆಹಿಂದೆ ಕೂಡ ಅಷ್ಟೇ ಅಲ್ಟ್ರಾ ಮಾರ್ಡನ್. ಉಡುಗೆ-ತೊಡುಗೆ ಎಲ್ಲದರಲ್ಲೂ ಸ್ಟೈಲ್ ಮೇನ್ಟೇನ್ ಮಾಡುವ ರಕ್ಷಿತಾಗೆ ಟಾಟ್ಯೂ ಅಂದ್ರೆ ಪಂಚಪ್ರಾಣ.

ಈಗಾಗ್ಲೇ ಮಗನಿಗಾಗಿ 'ಸೂರ್ಯ' ಟಾಟ್ಯೂ ಜೊತೆಗೆ ತಮ್ಮಿಷ್ಟದ ಹಲವಾರು ಟಾಟ್ಯೂಗಳನ್ನ ಅಚ್ಚಾಗಿಸಿಕೊಂಡಿರುವ ರಕ್ಷಿತಾ, ಮೊನ್ನೆಯಷ್ಟೇ ಹೊಸ ಹಚ್ಚೆಯನ್ನ ಅಚ್ಚಾಗಿಸಿಕೊಂಡಿದ್ದಾರೆ. ಅದು ಯಾರಿಗಾಗಿ ಗೊತ್ತಾ? ತಮ್ಮ ಹೆತ್ತಮ್ಮ ಮಮತಾ ರಾವ್ ಗೋಸ್ಕರ.! [ಸ್ಯಾಂಡಲ್ ವುಡ್ ಸೂಪರ್ ಸ್ಟಾರ್ ಗಳ ಹಚ್ಚೆ ಖಯಾಲಿ]

rakshitha tattoo

'ಮಾ' ಅನ್ನುವ ಟಾಟ್ಯೂವನ್ನ ಬೆನ್ನಮೇಲೆ ಅಚ್ಚಾಗಿಸಿಕೊಂಡಿರುವ ರಕ್ಷಿತಾ, ತಮ್ಮ ಫೇಸ್ ಬುಕ್ ಪೇಜ್ ನಲ್ಲಿ ಅದನ್ನ ರಿವೀಲ್ ಮಾಡಿದ್ದಾರೆ. ''ಎಲ್ಲವನ್ನೂ ನನಗಾಗಿ ಮಾಡಿರುವ ಅಮ್ಮನಿಗೆ ಈ ಪುಟ್ಟ ಕಾಣಿಕೆ'' ಅಂತ ಸ್ಟೇಟಸ್ ಕೂಡ ಹಾಕಿ ತಮ್ಮ ಪ್ರೀತಿಯ ಅಮ್ಮನಿಗೆ ದೊಡ್ಡ ಉಡುಗೊರೆ ನೀಡಿದ್ದಾರೆ ರಕ್ಷಿತಾ ಪ್ರೇಮ್. [ಸ್ಯಾಂಡಲ್ ವುಡ್ ಮಹಾಚುನಾವಣೆ 2014 - ನಿಮ್ಮ ಮತ ಯಾರಿಗೆ? ]

ತಂದೆಯ-ತಾಯಿಯ ಹಾದಿಯಲ್ಲೇ ಚಿತ್ರರಂಗ ಪ್ರವೇಶಿಸಿರುವ ರಕ್ಷಿತಾ, ಯಶಸ್ವಿ ನಟಿಯಾಗಿ ಇದೀಗ ನಿರ್ಮಾಪಕಿ ಕೂಡ ಹೌದು. ಅವರ ಪ್ರತಿ ಹೆಜ್ಜೆಯಲ್ಲೂ ಬೆನ್ನೆಲುಬಾಗಿ ನಿಂತವರು ತಾಯಿ ಮಮತಾ ರಾವ್. ಅಂತಹ ಪ್ರೀತಿಯ ಅಮ್ಮನಿಗೆ ಮಗಳ ಕಡೆಯಿಂದ ಕಾಣಿಕೆ ಸಿಕ್ಕಿದೆ. ಇದಕ್ಕೆ ಅಮ್ಮನ ಪ್ರತಿಕ್ರಿಯೆ ಹೇಗಿರಬಹುದು..? (ಫಿಲ್ಮಿಬೀಟ್ ಕನ್ನಡ)

English summary
Rakshitha Prem has got her new tattoo done. That too for her mother Mamatha Rao. Check out Rakshitha's 'Tattoo' gift.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada