»   » ಸುದೀಪ್ ಹುಟ್ಟುಹಬ್ಬದಂದು ಟ್ವಿಟ್ಟರ್ ಲೋಕಕ್ಕೆ ಕಾಲಿಟ್ಟ ರಕ್ಷಿತಾ

ಸುದೀಪ್ ಹುಟ್ಟುಹಬ್ಬದಂದು ಟ್ವಿಟ್ಟರ್ ಲೋಕಕ್ಕೆ ಕಾಲಿಟ್ಟ ರಕ್ಷಿತಾ

Posted By:
Subscribe to Filmibeat Kannada

ಕನ್ನಡದ ಸಿನಿಮಾ ಸ್ಟಾರ್ ಗಳು ಈಗ ಸಮಾಜಿಕ ಜಾಲತಾಣದಲ್ಲಿ ಹೆಚ್ಚು ಸಕ್ರೀಯರಾಗುತ್ತಿದ್ದಾರೆ. ಈಗ ನಟಿ ರಕ್ಷಿತಾ ಪ್ರೇಮ್ ಕೂಡ ಟ್ವಿಟ್ಟರ್ ಲೋಕಕ್ಕೆ ಕಾಲಿಟ್ಟಿದ್ದಾರೆ. ಸುದೀಪ್ ಹುಟ್ಟುಹಬ್ಬವಾಗಿರುವ ಈ ವಿಶೇಷ ದಿನ ರಕ್ಷಿತಾ ತಮ್ಮ ಟ್ವಿಟ್ಟರ್ ಖಾತೆ ತೆರೆದಿದ್ದಾರೆ.

ರಕ್ಷಿತಾ ತಮ್ಮ ಮೊದಲ ಟ್ವೀಟ್ ಸುದೀಪ್ ಅವರ ಬಗ್ಗೆ ಮಾಡಿರುವುದು ವಿಶೇಷ. ''ಕೊನೆಗೂ ನಾನು ಟ್ವಿಟ್ಟರ್ ಗೆ ಬಂದೆ. ಮೊದಲು ನನ್ನ ಒಳ್ಳೆಯ ಸ್ನೇಹಿತ ಸುದೀಪ್ ಅವರಿಗೆ ವಿಶ್ ಮಾಡುತ್ತೇನೆ. ಹ್ಯಾಪಿ ಬರ್ತ್ ಡೇ... ಜೀವನ ಪೂರ್ತಿ ಖುಷಿಯಾಗಿರಿ''. ಎಂದು ಸುದೀಪ್ ಅವರಿಗೆ ಶುಭಾಶಯ ಕೋರುವ ಮೂಲಕ ರಕ್ಷಿತಾ ತಮ್ಮ ಮೊದಲ ಟ್ವೀಟ್ ಮಾಡಿದ್ದಾರೆ.

Rakshitha Prem wish to Kichha Sudeep

ಇನ್ನು ಸುದೀಪ್ ಜೊತೆ ನಟಿಸಿದ 'ಹುಬ್ಬಳ್ಳಿ' ಚಿತ್ರದ ಫೋಟೋವನ್ನು ರಕ್ಷಿತಾ ತಮ್ಮ ಟ್ಟಿಟ್ಟರ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ. ಸುದೀಪ್ ಮತ್ತು ರಕ್ಷಿತಾ ಸುಮಾರು 15 ವರ್ಷದಿಂದ ಸ್ನೇಹಿತರಾಗಿದ್ದು, 'ಹುಬ್ಬಳ್ಳಿ', 'ಕಾಶಿ' ಮತ್ತು 'ಧಮ್' ಸಿನಿಮಾದಲ್ಲಿ ಒಟ್ಟಿಗೆ ನಟಿಸಿದ್ದರು.

English summary
Actress Rakshitha Prem has opened her twitter account to wish Kichha Sudeep

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada