Just In
Don't Miss!
- News
ಮಸ್ಕಿಯಲ್ಲಿ ಬಿಜೆಪಿ ಪರ ಮತಬೇಟೆಗೆ ಬರಲಿದ್ದಾರೆ ಮಂಗ್ಲಿ!
- Sports
ಮೊದಲ ಪಂದ್ಯದಲ್ಲಿ ಕೇನ್ ವಿಲಿಯಮ್ಸನ್ ಕಣಕ್ಕಿಳಿಯದ ಬಗ್ಗೆ ಕಾರಣ ಹೇಳಿದ ಕೋಚ್
- Automobiles
ಪ್ರಮುಖ ಕಾರು ಮಾದರಿಗಳಿಗೆ ಹೊಸ ಮಾದರಿಯ ಟೈರ್ ಮತ್ತು ಬ್ಯಾಟರಿ ಬಿಡುಗಡೆ ಮಾಡಿದ ಮಾರುತಿ ಸುಜುಕಿ
- Finance
ಏಪ್ರಿಲ್ 12ರ ಬಿಟ್ಕಾಯಿನ್ ರೇಟ್ ಎಷ್ಟಿದೆ?
- Lifestyle
ಇಂದು ಸೋಮಾವತಿ ಅಮಾವಾಸ್ಯೆ: ಇದರ ಮಹತ್ವ ಹಾಗೂ ಪ್ರಯೋಜನಗಳು
- Education
Bank Of Baroda Recruitment 2021: 512 ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಶಿವರಾತ್ರಿ ಹಬ್ಬದಂದು ರಾಬರ್ಟ್: ದರ್ಶನ್ ಬಗ್ಗೆ ಯಾರಿಗೂ ಗೊತ್ತಿಲ್ಲದ ಸೀಕ್ರೆಟ್ ಬಿಚ್ಚಿಟ್ಟ ರಕ್ಷಿತಾ
ಸ್ಯಾಂಡಲ್‌ವುಡ್‌ನಲ್ಲಿ ರಾಬರ್ಟ್ ಅಬ್ಬರ ಜೋರಾಗಿದೆ. ರಾಜ್ಯಾದ್ಯಂತ ಅದ್ಧೂರಿಯಾಗಿ ತೆರೆಕಂಡಿರುವ ರಾಬರ್ಟ್ ಸಿನಿಮಾ ನೋಡಿ ಜನ ಮೆಚ್ಚಿಕೊಂಡಿದ್ದಾರೆ. ದಾಖಲೆಯ ಸ್ಕ್ರೀನ್‌ಗಳಲ್ಲಿ ದರ್ಶನ್ ಚಿತ್ರ ತೆರೆಗೆ ಬಂದಿದ್ದು, ಹಲವು ತಾರೆಯರು ಶುಭ ಕೋರಿದ್ದಾರೆ. ಕೊರೊನಾ ನಂತರ ದೊಡ್ಡ ಸಿನಿಮಾಗಳು ಚಿತ್ರಮಂದಿರಕ್ಕೆ ಬರ್ತಿದ್ದು, ಒಳ್ಳೆಯ ಸ್ವಾಗತ ಪಡೆದುಕೊಳ್ಳುತ್ತಿದೆ.
ಇದೀಗ, ರಕ್ಷಿತಾ ಪ್ರೇಮ್ ಅವರು ಟ್ವಿಟ್ಟರ್ ಮೂಲಕ ರಾಬರ್ಟ್ ಚಿತ್ರತಂಡಕ್ಕೆ ಶುಭಾಶಯ ತಿಳಿಸಿದ್ದಾರೆ. 'ರಾಬರ್ಟ್ ಚಿತ್ರಕ್ಕೆ ಎಲ್ಲೆಡೆ ಒಳ್ಳೆಯ ಪ್ರಶಂಸೆ ವ್ಯಕ್ತವಾಗುತ್ತಿದೆ. ನಿರ್ಮಾಪಕ ಉಮಾಪತಿ ಗೌಡ, ನಿರ್ದೇಶಕ ತರುಣ್ ಹಾಗೂ ನಟ ದರ್ಶನ್ ಅವರ ಕೆಲಸ ಅದ್ಭುತವಾಗಿದೆ' ಎಂದು ರಕ್ಷಿತಾ ಟ್ವೀಟ್ ಮಾಡಿದ್ದಾರೆ. ಈ ವೇಳೆ ದರ್ಶನ್ ಅವರ ಕುರಿತಾದ ಸೀಕ್ರೆಟ್ ವಿಷಯವೊಂದನ್ನು ಬಹಿರಂಗಪಡಿಸಿದ್ದಾರೆ. ಮುಂದೆ ಓದಿ....
ಟ್ವಿಟ್ಟರ್ ವಿಮರ್ಶೆ: ರಾಬರ್ಟ್ ಚಿಂದಿ, ಉಮಾಪತಿ ಗಿಫ್ಟ್ ಇದು, ತರುಣ್ಗೆ ಕ್ರೆಡಿಟ್

ರಾಬರ್ಟ್ ಪೈಸಾ ವಸೂಲ್ ಸಿನಿಮಾ
ರಾಬರ್ಟ್ ಚಿತ್ರದ ಅದ್ಧೂರಿ ಓಪನಿಂಗ್ ನೋಡಿ ನಟಿ ರಕ್ಷಿತಾ ಪ್ರೇಮ್ ಖುಷಿಯಾಗಿದ್ದಾರೆ. ''ಇದು ಪಕ್ಕಾ ಪೈಸಾ ವಸೂಲ್ ಸಿನಿಮಾ, ಸಂಪೂರ್ಣ ಮನರಂಜನೆ ನೀಡಲಿದೆ'' ಎಂದು ಟ್ವೀಟ್ ಮಾಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ನಿರ್ಮಾಪಕ ಉಮಾಪತಿ ಗೌಡ ಹಾಗೂ ನಿರ್ದೇಶಕ ತರುಣ್ ಸುಧೀರ್ ಕೆಲಸವನ್ನು ರಕ್ಷಿತಾ ಕೊಂಡಾಡಿದ್ದಾರೆ.

ದರ್ಶನ್ ಸೀಕ್ರೆಟ್ ಬಿಚ್ಚಿಟ್ಟ ರಕ್ಷಿತಾ
ಇಂದು ಮಹಾಶಿವರಾತ್ರಿ ಹಬ್ಬ. ಈ ವಿಶೇಷ ದಿನದಂದು ರಾಬರ್ಟ್ ಸಿನಿಮಾ ತೆರೆಕಂಡಿದೆ. ಒಂದು ಕಡೆ ಶಿವರಾತ್ರಿ ಉತ್ಸವ ಇನ್ನೊಂದು ಕಡೆ ರಾಬರ್ಟ್ ಉತ್ಸವದಲ್ಲಿರುವ ದರ್ಶನ್ ಅಭಿಮಾನಿಗಳಿಗೆ ರಕ್ಷಿತಾ ಸೀಕ್ರೆಟ್‌ವೊಂದನ್ನು ತಿಳಿಸಿದ್ದಾರೆ. ದರ್ಶನ್ ಅವರು ಹುಟ್ಟಿದ ದಿನವೂ ಶಿವರಾತ್ರಿ ಆಗಿತ್ತಂತೆ. ಡಿ ಬಾಸ್ 1977ರ ಫೆಬ್ರವರಿ 16 ಬುಧವಾರದಂದು ಹುಟ್ಟಿದ್ದು, ಆ ದಿನ ಮಹಾಶಿವರಾತ್ರಿ ಆಗಿತ್ತು ಎಂದು ರಕ್ಷಿತಾ ತಿಳಿಸಿದ್ದಾರೆ.
ಚಾಲೆಂಜಿಂಗ್ ಸ್ಟಾರ್ ದರ್ಶನ್ ಬಗ್ಗೆ ನಟಿ ರಕ್ಷಿತಾ ಹೀಗೆ ಹೇಳಿದ್ದೇಕೆ?

ದರ್ಶನ್‌ಗೆ ವಿಶ್ ಮಾಡಿದ ರಕ್ಷಿತಾ
ರಾಬರ್ಟ್ ಸಿನಿಮಾವನ್ನು ರಕ್ಷಿತಾ ಇನ್ನು ನೋಡಿಲ್ಲ. ಆದರೆ, ರಾಬರ್ಟ್ ಚಿತ್ರಕ್ಕೆ ಸಿಕ್ಕಿರುವ ರೆಸ್‌ಪಾನ್ಸ್ ಕಂಡು ಸಂತಸಗೊಂಡಿದ್ದಾರೆ. ಇನ್ಸ್ಟಾಗ್ರಾಂನಲ್ಲಿ ಈ ಖುಷಿಯನ್ನು ವ್ಯಕ್ತಪಡಿಸಿದ್ದು, ಪ್ರೀತಿಯ ಸ್ನೇಹಿತರ ದರ್ಶನ್ ಅವರಿಗೆ ಶುಭ ಕೋರಿದ್ದಾರೆ.

ಭರ್ಜರಿ ಓಪನಿಂಗ್ ಪಡೆದ ರಾಬರ್ಟ್
ಕರ್ನಾಟಕದಲ್ಲಿ 656 ಚಿತ್ರಮಂದಿರ ಹಾಗೂ 100ಕ್ಕೂ ಹೆಚ್ಚು ಮಲ್ಟಿಪ್ಲೆಕ್ಸ್‌ಗಳಲ್ಲಿ ರಾಬರ್ಟ್ ತೆರೆಕಂಡಿದೆ. ಕರ್ನಾಟಕದಲ್ಲಿ ಮೊದಲ ದಿನ ಎಲ್ಲ ಚಿತ್ರಗಳು ಸೇರಿ 2786 ಶೋ ಹಾಗೂ ಆಂಧ್ರದಲ್ಲಿ 433 ಶೋ, ತೆಲಂಗಾಣದಲ್ಲಿ 407 ಶೋಗಳು ರಾಬರ್ಟ್ ಪಡೆದುಕೊಂಡಿದೆ. ಒಟ್ಟಾರೆ ಮೂರು ರಾಜ್ಯಗಳಿಂದ ಮೊದಲ ದಿನ 3723 ಶೋ ಕಾಣಲಿದೆ.