ಮೆಗಾ ಹೀರೋ ರಾಮ್ ಚರಣ್ ತೇಜಗೆ ಕೊರೊನಾ ನೆಗಿಟಿವ್

ತೆಲುಗು ನಟ ರಾಮ್ ಚರಣ್ ತೇಜಗೆ ಕೊನೆಗೂ ಕೊರೊನಾ ವೈರಸ್ ಪರೀಕ್ಷೆಯಲ್ಲಿ ನೆಗಿಟಿವ್ ಬಂದಿದೆ. ಟ್ವಿಟ್ಟರ್‌ನಲ್ಲಿ ಈ ಕುರಿತು ಮಾಹಿತಿ ಹಂಚಿಕೊಂಡಿರುವ ನಟ ''ಕೊರೊನಾ ಪರೀಕ್ಷೆಯಲ್ಲಿ ನೆಗಿಟಿವ್ ಬಂದಿದೆ, ಕೆಲಸ ಶುರು ಮಾಡಲು ಕಾಯುತ್ತಿದ್ದೇನೆ'' ಎಂದು ತಿಳಿಸಿದ್ದಾರೆ.

ರಾಮ್ ಚರಣ್ ತೇಜ ನೆಗಿಟಿವ್ ಎಂದು ಹಾಕಿರುವ ಪೋಸ್ಟ್‌ಗೆ ಅಭಿಮಾನಿಗಳು ಖುಷಿ ವ್ಯಕ್ತಪಡಿಸಿದ್ದಾರೆ.

ಡಿಸೆಂಬರ್ 29 ರಂದು ಮೆಗಾಸ್ಟಾರ್ ಪುತ್ರ ರಾಮ್ ಚರಣ್ ತೇಜಗೆ ಕೊರೊನಾ ವೈರಸ್ ದೃಢಪಟ್ಟಿತ್ತು. ಸೋಂಕು ತಗುಲಿರುವುದು ಖಚತವಾಗುತ್ತಿದ್ದಂತೆ ನಟ ತಮ್ಮ ಮನೆಯಲ್ಲಿಯೇ ಕ್ವಾರಂಟೈನ್‌ಗೆ ಒಳಪಟ್ಟರು.

Ram charan Teja Tests Negative for Covid 19

ಈ ಬಗ್ಗೆ ಟ್ವಿಟ್ಟರ್‌ನಲ್ಲಿ ಮಾಹಿತಿ ಹಂಚಿಕೊಂಡಿದ್ದ ರಾಮ್ ಚರಣ್ ''ನನ್ನ ಜೊತೆ ಕಳೆದ ಒಂದು ವಾರದಿಂದ ಸಂಪರ್ಕದಲ್ಲಿದ್ದವರು ಪರೀಕ್ಷೆ ಮಾಡಿಸಿಕೊಳ್ಳಿ. ನನಗೆ ಕೊರೊನಾ ಪಾಸಿಟಿವ್ ಬಂದಿದೆ. ಯಾವುದೇ ಲಕ್ಷಣಗಳು ಇಲ್ಲ. ಮನೆಯಲ್ಲೇ ಕ್ವಾರಂಟೈನ್ ಆಗಿದ್ದೀನಿ. ಶೀಘ್ರದಲ್ಲೇ ಗುಣಮುಖ ಆಗಿ ಮತ್ತಷ್ಟು ಸ್ಟ್ರಾಂಗ್ ಆಗುತ್ತೇನೆ'' ಎಂದು ಬರೆದುಕೊಂಡಿದ್ದರು.

Ram charan Teja Tests Negative for Covid 19

ರಾಮ್ ಚರಣ್ ತೇಜಗೆ ಸೋಂಕು ತಗುಲಿದ ಅದೇ ದಿನ ಚಿರಂಜೀವಿ ಪುತ್ರ ವರುಣ್ ತೇಜಗೂ ಸೋಂಕು ಅಂಟಿಕೊಂಡಿತ್ತು. ಈಗ ಜನವರಿ 7 ರಂದು ವರುಣ್ ತೇಜಗೆ ನೆಗಿಟಿವ್ ಬಂದಿದೆ.

ಕ್ರಿಸ್‌ಮಸ್ ಪ್ರಯುಕ್ತ ಮೆಗಾ ಫ್ಯಾಮಿಲಿ ಎಲ್ಲ ಸದಸ್ಯರು ರಾಮ್ ಚರಣ್ ಮನೆಯಲ್ಲಿ ಸಂಭ್ರಮಿಸಿದ್ದರು. ಹಾಗಾಗಿ, ಉಳಿದವರಿಗೆ ಸೋಂಕಿನ ಭೀತಿ ಕಾಡಿತ್ತು. ಆಮೇಲೆ ಬೇರೆ ಯಾರಿಗೂ ಪಾಸಿಟಿವ್ ಬಂದಿರಲಿಲ್ಲ.

More from Filmibeat

English summary
Tollywood actor Ram charan teja tests negative for coronavirus and he says thank to his fans.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X