For Quick Alerts
  ALLOW NOTIFICATIONS  
  For Daily Alerts

  ರಾಮ್ ಚರಣ್, ಉಪಾಸನಾ ಮಧುಚಂದ್ರ ಮುಂದಕ್ಕೆ

  By Rajendra
  |

  ಅಪೊಲೋ ಗ್ರೂಪ್ ಸಂಸ್ಥೆಗಳ ಒಡತಿ ಉಪಾಸನಾ ಕಾಮಿನೇನಿ ಕೈಹಿಡಿದಿರುವ ಮೆಗಾಸ್ಟಾರ್ ಚಿರಂಜೀವಿ ಪುತ್ರ ರಾಮ್ ಚರಣ್‌ ಮಧುಚಂದ್ರ ಸದ್ಯಕ್ಕಿಲ್ಲವಂತೆ. ಹೊಸದಾಗಿ ಮದುವೆಯಾಗಿರುವ ಇವರಿಬ್ಬರಿಗೂ ಮಧುಚಂದ್ರ ಆಚರಿಸಿಕೊಳ್ಳಲಿಕ್ಕೂ ಟೈಮಿಲ್ಲವಂತೆ.

  ಕಳೆದ ಒಂದು ವಾರದಿಂದ ಇಬ್ಬರೂ ಮದುವೆ ಕಾರ್ಯಗಳಲ್ಲಿ ಸಖತ್ ಬಿಜಿಯಾದ ಕಾರಣ ಈಗ ಅವರಿಗೆ ರೆಸ್ಟ್ ಬೇಕಾಗಿದೆಯಂತೆ. ಕೊಂಚ ವಿಶ್ರಾಂತಿ ತೆಗೆದುಕೊಂಡ ಬಳಿಕ ರಾಮ್ ಚರಣ್ ಹೊಸ ಚಿತ್ರ ಶುರುವಾಗಲಿದೆ. ಅದರ ಚಿತ್ರೀಕರಣದಲ್ಲಿ ಅವರು ತೊಡಗಿಕೊಳ್ಳಲಿದ್ದಾರೆ.

  ಅತ್ತ ಉಪಾಸನಾ ಕಾಮಿನೇನಿ ಕೂಡ ಆಫೀಸ್ ಕೆಲಸಲ್ಲಿ ಬಿಜಿಯಾಗಿದ್ದಾರೆ. ರಾಮ್ ಚರಣ್ ಅಭಿನಯಿಸುತ್ತಿರುವ ಚೊಚ್ಚಲ ಬಾಲಿವುಡ್ ಚಿತ್ರ 'ಝಂಜೀರ್' ಮದುವೆ ಕಾರಣ ಚಿತ್ರೀಕರಣ ಮುಂದೂಡಲ್ಪಟ್ಟಿತ್ತು. ಈಗ ಈ ಚಿತ್ರದಲ್ಲೂ ತೊಡಗಿಕೊಳ್ಳಬೇಕಾಗಿದೆ ಹೊಸ ಮದುವೆ ಗಂಡು ರಾಮ್ ಚರಣ್.

  ಜೂ.14ರಂದು ರಾಮ್ ಚರಣ್ ಮದುವೆ ಅದ್ದೂರಿಯಾಗಿ ನೆರವೇರಿತ್ತು. ಆಂಧ್ರ ಸಂಪ್ರದಾಯದಂತೆ ಶಾಸ್ತ್ರೋಕ್ತವಾಗಿ ಮದುವೆ ನೆರವೇರಿತ್ತು. ಮದುವೆಗೆ ಮೂರು ಸಾವಿರ ಮಂದಿ ಸಾಕ್ಷಿಯಾದರೆ, ಆರತಕ್ಷತೆ ಕಾರ್ಯಕ್ರಮಕ್ಕೆ ಏಳು ಸಾವಿರ ಮಂದಿ ಅತಿಥಿಗಳು ಆಗಮಿಸಿದ್ದರು.

  ರಾಮಚರಣ್‌ಗೆ 120 ಕೋಟಿ ರೂಪಾಯಿ ಲಿಕ್ವಿಡ್ ಕ್ಯಾಷ್ ಮತ್ತು ಸುಸಜ್ಜಿತ ಮಿನಿ ಫ್ಲೈಟ್ ಕೂಡಾ ಕೊಡಲಾಗಿದೆ ಎನ್ನುವುದು ತೆಲುಗು ಮಿಡಿಯಾ ಕಡೆಯಿಂದ ಬಂದಿರುವ ವರ್ತಮಾನ. ಇದನ್ನು ವರದಕ್ಷಿಣೆ ರೂಪದಲ್ಲಿ ನೀಡುತ್ತಿದ್ದಾರೋ ಅಥವಾ ಹಾಗೆಯೇ ಪ್ರೀತಿಯಿಂದ ನೀಡುತ್ತಿದ್ದಾರೋ ನಮಗದು ತಿಳಿಯದು.

  ಈ ಹಿಂದೆ ಊಸರವಳ್ಳಿ ಜ್ಯೂ.ಎನ್ಟಿಆರ್ ಮದುವೆ ಕೂಡ ಸಾಕಷ್ಟು ಸುದ್ದಿಯಾಗಿತ್ತು. ವರದಕ್ಷಿಣೆ ರೂಪದಲ್ಲಿ ಬರೋಬ್ಬರಿ 500 ಕೋಟಿ ತೆಗೆದುಕೊಂಡಿರುವ ಸುದ್ದಿ ಕೂಡ ಚಾಲ್ತಿಯಲ್ಲಿತ್ತು. ಮದುವೆ ಸೂಟ್ ಅನ್ನು ಚಿನ್ನದಲ್ಲಿ ಹೊಲಿಸಿದ್ದ ಜ್ಯೂ.ಎನ್ಟಿಆರ್‌ಗಾರು ಅದಕ್ಕೆಂದೇ ರು. 20 ಲಕ್ಷ ರೂಪಾಯಿ ಖರ್ಚು ಮಾಡಿದ್ದನ್ನು ಇಲ್ಲಿ ಸ್ಮರಿಸಬಹುದು.

  ಅಂದಹಾಗೆ ರಾಮ್ ಚರಣ್ ಹಾಗೂ ಉಪಾಸನಾ ಅವರದು ಸಾಂಪ್ರದಾಯಿಕವಾಗಿ ನಡೆದ ಪ್ರೇಮ ವಿವಾಹ. ಕಾಲೇಜು ದಿನಗಳಿಂದಲೇ ಇಬ್ಬರೂ ಒಬ್ಬರನ್ನೊಬ್ಬರು ಪ್ರೀತಿಸಿಕೊಳ್ಳುತ್ತಿದ್ದರು. ಒಬ್ಬರ ಗುಣ ಇನ್ನೊಬ್ಬರಿಗೆ ಹಿಡಿಸಿದೆ. ಅಲ್ಲಿಂದ ಆರಂಭವಾದ ಇವರಿಬ್ಬರ ಪ್ರೇಮ ಪಯಣ ಈಗ ಮದುವೆ ಮೂಲಕ ಬಾಳ ಪಯಣವಾಗಿದೆ.(ಏಜೆನ್ಸೀಸ್)

  English summary
  Ram Charan and Upasana Kamineni, the newly marriged couple have no time to go on a honeymoon trip. Both were very busy from last one week with their own work schedules. The couple is not planning for any honeymoon trip sources revealed.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X