For Quick Alerts
  ALLOW NOTIFICATIONS  
  For Daily Alerts

  ರಾಮ್ ಗೋಪಾಲ್ ವರ್ಮಾ ಮುಂದಿನ ಸಿನಿಮಾದಲ್ಲಿ 'ಮೆಗಾಸ್ಟಾರ್' ಟಾರ್ಗೆಟ್!

  |

  ವಿವಾದಾತ್ಮಕ ಚಿತ್ರಗಳನ್ನ ನಿರ್ದೇಶಿಸುವುದರಲ್ಲಿ ರಾಮ್ ಗೋಪಾಲ್ ವರ್ಮಾ ಎತ್ತಿದ ಕೈ. ಎನ್.ಟಿ.ಆರ್ ಮತ್ತು ಚಂದ್ರಬಾಬು ನಾಯ್ಡು ವಿಚಾರದಲ್ಲಿ ಮೂಡಿಬಂದಿದ್ದ ಲಕ್ಷ್ಮೀಸ್ ಎನ್.ಟಿ.ಆರ್ ಸಿನಿಮಾ ಇತ್ತೀಚಿಗೆ ಭಾರಿ ಸದ್ದು ಮಾಡಿತ್ತು.

  ಇದೀಗ, 'ಕಮ್ಮ ರಾಜ್ಯಂಲ್ಲೊ ಕಡಪ ರೆಡ್ಡಲು' ಎಂಬ ಮತ್ತೊಂದು ಸಿನಿಮಾ ಮಾಡಿದ್ದಾರೆ. ಈ ಚಿತ್ರದಲ್ಲಿ ಆಂಧ್ರಪ್ರದೇಶದ ರಾಜಕೀಯ ನಾಯಕರ ಅಸಲಿ ಮುಖಗಳನ್ನ ಬಯಲು ಮಾಡಲಿದ್ದಾರೆ ಎನ್ನಲಾಗುತ್ತಿದೆ.

  ನೀಲಿತಾರೆಯ ಅರೆನಗ್ನ ಫೋಟೋ ಹಂಚಿಕೊಂಡ ರಾಮ್ ಗೋಪಾಲ್ ವರ್ಮಾನೀಲಿತಾರೆಯ ಅರೆನಗ್ನ ಫೋಟೋ ಹಂಚಿಕೊಂಡ ರಾಮ್ ಗೋಪಾಲ್ ವರ್ಮಾ

  ಈ ಮಧ್ಯೆ ತಮ್ಮ ಮುಂದಿನ ಚಿತ್ರವನ್ನ ಘೋಷಣೆ ಮಾಡಿ ಸಂಚಲನ ಸೃಷ್ಟಿಸಿದ್ದಾರೆ ವರ್ಮಾ. ಮುಂದಿನ ಚಿತ್ರಕ್ಕೆ 'ಮೆಗಾಫ್ಯಾಮಿಲಿ' ಎಂದು ಹೆಸರಿಟ್ಟಿದ್ದೇನೆ ಎಂದು ಪ್ರಕಟಿಸುತ್ತಿದ್ದಂತೆ ಮೆಗಾಸ್ಟಾರ್ ಅಭಿಮಾನಿಗಳು ವರ್ಮಾ ವಿರುದ್ಧ ಮುಗಿಬಿದ್ದರು. ಮೆಗಾಫ್ಯಾಮಿಲಿ ಅಂದ್ರೆ ಅದು ಚಿರಂಜೀವಿ ಅವರ ಬಗ್ಗೆಯೇ ಸಿನಿಮಾ ಇರಬಹುದು ಎಂಬ ಸುದ್ದಿ ಸದ್ದು ಮಾಡಿತು.

  ಆಮೇಲೆ ಏನಾಯ್ತೋ ಗೊತ್ತಿಲ್ಲ. ಮೆಗಾಫ್ಯಾಮಿಲಿ ಸಿನಿಮಾ ಮಾಡುತ್ತಿದ್ದೇನೆ ಎಂದು ಘೋಷಿಸಿದ ಕೆಲವೇ ಗಂಟೆಗಳಲ್ಲಿ ಈ ಚಿತ್ರವನ್ನ ನಾನು ಮಾಡುತ್ತಿಲ್ಲ ಎಂದು ಅಚ್ಚರಿ ನೀಡಿದ್ದಾರೆ ಆರ್.ಜಿ.ವಿ.

  ಈ ನಟಿ ಮೊಬೈಲ್ ಗೆ ಅಶ್ಲೀಲ ವಿಡಿಯೋ ಕಳುಹಿಸಿದ್ದರಂತೆ ವರ್ಮಾಈ ನಟಿ ಮೊಬೈಲ್ ಗೆ ಅಶ್ಲೀಲ ವಿಡಿಯೋ ಕಳುಹಿಸಿದ್ದರಂತೆ ವರ್ಮಾ

  ''ಮೆಗಾಫ್ಯಾಮಿಲಿ 39 ಮಕ್ಕಳನ್ನ ಹೊಂದಿರುವ ಒಬ್ಬ ವ್ಯಕ್ತಿಯ ಕಥೆ. ಈಗ ಆ ಮಕ್ಕಳ ಸಂಖ್ಯೆ ಹೆಚ್ಚಾಗಿದೆ. ನಾನು ಮಕ್ಕಳ ಚಿತ್ರವನ್ನ ಮಾಡಲು ಅರ್ಹವಲ್ಲ. ನಾನು ಈ ಸಿನಿಮಾ ಮಾಡಲ್ಲ'' ಎಂದು ಟ್ವೀಟ್ ಮಾಡಿದ್ದಾರೆ.

  ಮೆಗಾ ಫ್ಯಾಮಿಲಿ ಅಂದ್ರೆ ಟಾಲಿವುಡ್ ನಲ್ಲಿ ಚಿರಂಜೀವಿ ಮತ್ತು ಕುಟುಂಬ ಎಂದು ಗುರುತಿಸಿಕೊಂಡಿದೆ. ಅದರಲ್ಲೂ ಪವನ್ ಕಲ್ಯಾಣ್ ಕುರಿತು ವರ್ಮಾ ಹೆಚ್ಚು ಆಸಕ್ತಿ ಹೊಂದಿದ್ದಾರೆ. ಹಾಗಾಗಿಯೇ ಪವನ್ ಕಲ್ಯಾಣ್ ಮತ್ತು ಚಿರಂಜೀವಿ ಅವರ ರಾಜಕೀಯ ಬೆಳವಣಿಗೆ ಸಂಬಂಧಿಸದಂತೆ ಸಿನಿಮಾ ಮಾಡಬಹುದು ಎಂದು ಹೇಳಲಾಗುತ್ತಿತ್ತು.

  English summary
  Director Ram Gopal Varma announced his next movie titled 'mega family'. within 12 hour he dropped this film.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X